ಅರಸೀಕೆರೆಯಲ್ಲಿ ಪೊಂಗಲ್ ಹಬ್ಬ ಆಚರಣೆ -ದೇವಸ್ಥಾನದಲ್ಲಿ ಭಕ್ತರ ಸಂಭ್ರಮ

ಅರಸೀಕೆರೆ ನಗರದ 2ನೇ ವಾರ್ಡಿನ ಶ್ರೀದೇವಿ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಪೊಂಗಲ್ ಪ್ರಯುಕ್ತ ಮಹಿಳೆಯರು ಸಂಪ್ರದಾಯದಂತೆ ದೇವಸ್ಥಾನದ ಮುಂಭಾಗದಲ್ಲಿ ಪೊಂಗಲ್ ಮಾಡುವ ಮೂಲಕ ದೇವರಿಗೆ ಪ್ರಸಾದವನ್ನು ಸಮರ್ಪಿಸುವ ಹಾಗೂ ಗೂಹೆಗಳಗೆ ಪೂಜೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಿದರು . ಈ ಸಂದರ್ಭದಲ್ಲಿ ದೇವಸ್ಥಾನದ ಮುಖಂಡ ವೇಲ್ರಾಜ್ ಮಾತನಾಡಿ , ಹಳೆಯ ಸಂಪ್ರದಾಯವನ್ನ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಸಂಕ್ರಮಣದಿಂದ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿತ್ತೇನೆ ಎಂದರು . ಧನುರ್ಮಾಸ ಪ್ರಾರಂಭವಾದ ದಿನದಿಂದ ಮಕರ ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ಪ್ರತಿ ದಿನ ಮನೆಯ ಮುಂಭಾಗದಲ್ಲಿ ದೇವರಿಗೆ ಪ್ರಾರ್ಥನೆ ಮಾಡಿ ದೀಪ ಹಚ್ಚುವ ಸಂಪ್ರದಾಯವನ್ನು ರೂಢಿಸಿಕೊಳ್ಳುತ್ತ ಬಂದಿದ್ದೇವೆ ಎಂದು ಭಕ್ತರು ಹೇಳಿದ್ದಾರೆ . ಮಾಜಿ ಪುರಸಭಾ ಸದಸ್ಯರಾದ ಚಾಮು, ಮಂಜು, ಆನಂದ್ ಹಾಗೂ ಹಾಸನ ರಸ್ತೆಯ ಭಕ್ತಾದಿಗಳು ಸಾರ್ವಜನಿಕ ಬಂಧುಗಳು ಮಹಿಳೆಯರು ಹಾಜರಿದ್ದರು

ಎಸ್ಎಲ್ಎನ್ ಯೋಗೀಶ್ ಕೆ.ಟಿವಿ ನ್ಯೂಸ್ ಅರಸೀಕೆರೆ

ಕೆ.ಟಿವಿ ನ್ಯೂಸ್ ಕನ್ನಡ

Add Comment