ಬೆಂಗಳೂರು ನಗರ ಇದೀಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ನಗರ ಎಂಬ ಖ್ಯಾತಿ ಪಡೆದಿದೆ.
ಬ್ರಿಟನ್ ರಾಜಧಾನಿ ಲಂಡನ್ ನಗರದ ಡೀಲ್ ರೂಂ ಕೋ ಸಂಸ್ಥೆಯ ದತ್ತಾಂಶವನ್ನು ಲಂಡನ್ ಮೇಯರ್ ಅವರ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ಲಂಡನ್ ಆಯುಂಡ್ ಪಾರ್ಟನರ್ಸ್ ನಡೆಸಿರುವ ವಿಶ್ಲೇಷಣೆ ಆಧಾರದಲ್ಲಿ ಬೆಂಗಳೂರು ಪ್ರಪಂಚದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ನಗರಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ನಗರಗಳ ಪಟ್ಟಿಯಲ್ಲಿ ಲಂಡನ್ ನಗರ 2ನೇ ಸ್ಥಾನ ಪಡೆದರೆ, ಜರ್ಮನಿಯ ಮ್ಯೂನಿಚ್ ಮತ್ತು ಬರ್ಲಿನ್ ನಗರಗಳು 3ನೇ ಮತ್ತು 4ನೇ ಸ್ಥಾನ ಗಳಿಸಿವೆ. ಭಾರತದ ಮುಂಬೈ 6ನೇ ಸ್ಥಾನ ಪಡೆದಿದೆ.
ಬೆಂಗಳೂರು 2016ರಲ್ಲಿ 9,500 ಕೋಟಿ ರೂ. ಬಂಡವಾಳ ಗಳಿಸಿತ್ತು. ಆದರೆ 2020ರಲ್ಲಿ ಇದಕ್ಕಿಂತ
5.4ರಷ್ಟು ಹೆಚ್ಚಿನ ಬಂಡವಾಳ ಆಕರ್ಷಿಸಿರುವ ಬೆಂಗಳೂರು 52 ಸಾವಿರ ಕೋಟಿ ರೂ. ತಂತ್ರಜ್ಞಾನದ ಬಂಡವಾಳ ಪಡೆದು ವಿಶ್ವದ ನಂ.1 ತಂತ್ರಜ್ಞಾನ ನಗರಿ ಎಂಬ ಖ್ಯಾತಿ ಪಡೆದಿದೆ.
ಲಂಡನ್ ಸಹ 2020ರಲ್ಲಿ ಮೂರು ಪಟ್ಟು ಹೆಚ್ಚಿನ ತಂತ್ರಜ್ಞಾನದ ಬಂಡವಾಳ ಆಕರ್ಷಿಸಿದೆ.
ಇನ್ನು ಜರ್ಮನಿಯ ಮ್ಯೂನಿಚ್ ಮತ್ತು ಬರ್ಲಿನ್ ನಗರಗಳು ಹಿಂದಿಗಿಂತ ಎರಡು ಪಟ್ಟು ತಂತ್ರಜ್ಞಾನ ಆಧಾರಿತ ಬಂಡವಾಳ ಪಡೆದಿವೆ.
ಕೆ ಟಿವಿ ನ್ಯೂಸ್ ಲಂಡನ್