ಶಾಲಾ ಶುಲ್ಕ ವಿವಾದ-ಖಾಸಗಿ ಶಾಲೆಗಳ ಆಡಳಿತ ಮಂಡಳಿ-ಪೋಷಕರ ಸಂಧಾನ ಸಭೆಯಲ್ಲಿ ವಾಗ್ವಾದ-ಕಿತ್ತಾಟ!

ಬೆಂಗಳೂರಿನಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರ ಸಮ್ಮುಖದಲ್ಲಿ ಶಾಲಾ ಶುಲ್ಕ ವಿಚಾರದ ಬಗ್ಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಸಂಘಟನೆಗಳ ನಡುವೆ ಸಂಧಾನ ಮಾತುಕತೆ ನಡೆಸಲು ಸಭೆಯನ್ನು ಕರೆಯಲಾಗಿತ್ತು. ಕಾಮ್ಸ್, ರುಪ್ಸಾ, ಕುಸುಮಾ, ಸಿಬಿಎಸ್ ಇ,ಐಸಿಎಸ್ಸಿಇ ಪೋಷಕರ ಸಂಘಟನೆಗಳು ಈ ಸಂಧಾನ ಮಾತುಕತೆಯಲ್ಲಿ ಭಾಗವಹಿಸಿದ್ದವು.
ಸಭೆಯಲ್ಲಿ ಶೇ.50 ಕ್ಕಿಂತ ಶಾಲಾ ಶುಲ್ಕವನ್ನು ಕಡಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಖಾಸಗಿ ಶಾಲಾ ಮಂಡಳಿಗಳ ಒಕ್ಕೂಟ ಪಟ್ಟು ಹಿಡಿದರೆ,ಕೊರೊನಾ ಸೋಂಕಿನ ನಮಗೆ ಸಂಬಳ ಸಿಗೋದು ಹಾಗೂ ಬೇರೆಲ್ಲಾ ಆದಾಯ ಕಡಿಮೆಯಾಗಿರೊ ಸಂಕಷ್ಟ ನೋಡಿಯಾದರೂ ನಮಗೆ ಬೋಧನಾ ಶುಲ್ಕವನ್ನು ಮಾತ್ರ ಕಟ್ಟಲು ಹೇಳಿ ಸಾರ್ ಎಂದು ಅನ್ಬುಕುಮಾರ್ ಅವರಿಗೆ ಪೋಷಕಿಯೊಬ್ಬರು ಅಳುತ್ತಾ ಕೈಮುಗಿದು ಬೇಡಿಕೊಳ್ಳುತ್ತಿದ್ದ ದೃಶ್ಯ ಪೋಷಕರ ಸಂಕಷ್ಟವನ್ನು ಹೇಳುವಂತಿತ್ತು. ಆದರೆ ಈ ಸಂಧಾನ ಸಭೆಯಲ್ಲಿ ಒಮ್ಮೆ ಮಾತುಗಳು ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು. ಇಷ್ಟೆಲ್ಲಾ ಆದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರು
ಸಭೆ ಬಳಿಕ ಹೀಗೆಂದರು: ಶಾಲಾ ಶುಲ್ಕ ಸಭೆಯಲ್ಲಿ ಎರಡೂ ಕಡೆಯವರೂ ನಮಗೆ ತಮ್ಮ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಆದಾಗ್ಯೂ ಈ ಬಗ್ಗೆ
ಸಂಧಾನ ಮಾತುಕತೆಯ ವರದಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ಕಳುಹಿಸಲಾಗುವುದು,ಬಳಿಕ ಅವರು ಶಿಕ್ಷಣ ಸಚಿವರಿಗೆ ವರದಿ ಕಳುಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment