ಏಕ್ ಲವ್ ಯಾ ತಂಡ ದಿಂದ “ಏಕ್ ನಹಿ 3” ಸರ್ಪೈಸ್!

1 Star2 Stars3 Stars4 Stars5 Stars (No Ratings Yet)
Loading...

 

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಶೂಟಿಂಗ್ ಹಂತದಲ್ಲೇ ಭರ್ಜರಿ ಬಿಸಿನೆಸ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಸಿನಿಮಾದ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿ ಒಂದು ಹೊರಬಿದ್ದಿದೆ. ಏಕ್ ನಹಿ ಮೂರು ಸರ್ಪೈಸ್..! ಹೌದು, ಫೆಬ್ರವರಿ ೮ರಂದು ಏಕ್ ಲವ್ ಯಾ ಚಿತ್ರತಂಡ ಸಿನಿರಸಿಕರಿಗೆ ಮೂರು ಸರ್ಪೈಸ್ ಗಳನ್ನು ನೀಡಲಿದೆ. ಮೂರು ಸರ್ಪೈಸ್ ಗಳೊಂದಿಗೆ ಅಂದೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಎ೨ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ.

 

ಏಕ್ ಲವ್ ಯಾ ‘ದಿ ವಿಲನ್’ ಸಿನಿಮಾ ಬಳಿಕ ಪ್ರೇಮ್ ನಿರ್ದೇಶನ ಮಾಡುತ್ತಿರುವ ಚಿತ್ರ . ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಭಾರಿ ಕುತೂಹಲ ಮೂಡಿಸಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಕುವರಿ ರೀಷ್ಮಾ ನಾಯಕಿಯಾಗಿದ್ದಾರೆ.

ಅಂದ್ಹಾಗೆ, ಏಕ್ ಲವ್ ಯಾ ಸಿನಿಮಾ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ, ರಕ್ಷಿತಾ ಫಿಲಂ ಫ್ಯಾಕ್ಟರಿ ಬ್ಯಾನರ್ ನಡಿಯಲ್ಲಿ ತಯಾರಾಗ್ತಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಸಂಗೀತ ಸಂಯೋಜನೆ ಒಳಗೊಂಡಿದೆ.  ಹಿರಿಯ ನಟರಾದ ಶಶಿಕುಮಾರ್ , ಚರಣ್ ರಾಜ್ ಹಾಗೂ ಕಾಮಿಡಿಕಿಲಾಡಿಗಳು ಖ್ಯಾತಿಯ ಸೂರಜ್ ಮತ್ತು ಹಿತೇಶ್ ಚಿತ್ರದ ತಾರಾಗಣದಲ್ಲಿದ್ದಾರೆ.

 

Add Comment