ರಾಹುಲ್ ಗಾಂಧಿಗೆ ಟ್ಯೂಬ್‍ಲೈಟ್ ಎಂದಿದ್ದೇಕೆ ಮೋದಿ?

1 Star2 Stars3 Stars4 Stars5 Stars (1 votes, average: 5.00 out of 5)
Loading...

 

 

ಕ್ರಿಕೆಟ್‍ನಲ್ಲಿ ಸಿಕ್ಸರ್, ಬೌಂಡರಿ ಬಾರಿಸಿದ್ರೆ ಶಾಟ್.. ! ಅಂತಾರಲ್ಲ. ಅಂತಹದ್ದೊಂದು ಶಾಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಬಾರಿಸಿದ್ದಾರೆ.

 

 ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟ್ಯೂಬ್ ಲೈಟ್ ಎಂದು ಅಪಹಾಸ್ಯ ಮಾಡಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ವೇಳೆ ರಾಹುಲ್ ಗಾಂಧಿ ಮಾತನಾಡುತ್ತಾ, ದೇಶದ ಯುವಜನತೆ ಇನ್ನು ಆರು ತಿಂಗಳಲ್ಲಿ ಪ್ರಧಾನಿ ಮೋದಿಗೆ ಕೋಲಿನಲ್ಲಿ ಹೊಡೆಯುತ್ತಾರೆ ಎಂದು ಹೇಳಿದ್ದರು ಎಂದು ಮೋದಿ ಹೇಳಿದಾಗ ಮಧ್ಯೆ ಎದ್ದು ನಿಂತು ರಾಹುಲ್ ಗಾಂಧಿ ಮಾತನಾಡಲು ಮುಂದಾದರು.

ಆಗ ಮೋದಿಯವರು ತಡೆದು ನಾನು ಕಳೆದ 30-40 ನಿಮಿಷಗಳಿಂದ ಮಾತನಾಡುತ್ತಲೇ ಇದ್ದೇನೆ, ಆದರೆ ಕರೆಂಟ್ ಪಾಸಾಗಿ ಅದು ತಲುಪಲು ಇಷ್ಟು ಹೊತ್ತು ಹಿಡಿಯಿತು, ಬಹುತೇಕ ಟ್ಯೂಬ್ ಲೈಟ್ ಗಳು ಹೀಗೆಯೇ ಎಂದರು.

ಇದಕ್ಕೂ ಮುನ್ನ ರಾಹುಲ್ ಗಾಂಧಿ ಭಾಷಣಕ್ಕೆ ಉತ್ತರಿಸಿದ ಮೋದಿ, ಕಳೆದ 70 ವರ್ಷಗಳಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಸ್ವಾವಲಂಬಿಗಳಾಗಲಿಲ್ಲ. ಒಬ್ಬ ನಾಯಕರ ಚುನಾವಣಾ ಆಶೋತ್ತರ ಭಾಷಣದಲ್ಲಿ ಹೇಳಿದ್ದನ್ನು ನಾನು ಕೇಳಿದೆ. ಇನ್ನು ಆರು ತಿಂಗಳಲ್ಲಿ ಮೋದಿಗೆ ಕೋಲಿನಿಂದ ಹೊಡೆಯುತ್ತೇವೆ ಎಂದು ಹೇಳಿದ್ದಾರೆ. ಕೋಲಿನಿಂದ ಹೊಡೆಸಿಕೊಳ್ಳುವುದು ಕಷ್ಟದ ನಿರೀಕ್ಷೆ ಎಂದು ಮೋದಿಯವರು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.

ಪ್ರತಿಪಕ್ಷಗಳನ್ನು ಮಾತು ಮಾತಿಗೂ ತಿವಿದ ಮೋದಿಯವರು, ಇಡೀ ಸದನವನ್ನು ಪದೇ ಪದೇ ನಗೆಗಡಲಲ್ಲಿ ತೇಲಿಸಿದರು. ನನಗೆ ಬುಲೆಟ್ ಪ್ರೂಫ್ ಬೇಕಾಗಿಲ್ಲ. ಬೈಗುಳ ನಿರೋಧಕ ವ್ಯವಸ್ಥೆ ಬೇಕಾಗಿದೆ. ಕೆಲವರಿಗೆ ಪ್ರತಿದಿನ ಬೆಳಗ್ಗೆದ್ದು ನನಗೆ ಬೈಯುವುದೇ ಕಾಯಕವಾಗಿದೆ ಅಂತ ಕಾಂಗ್ರೆಸ್ ನಾಯಕರನ್ನು ಛೇಡಿಸಿದರು. 15 ವರ್ಷಗಳಿಂದ ಬೈಗುಳಗಳನ್ನು ಕೇಳುತ್ತಲೇ ಇದ್ದೇನೆ. ಆದರೆ, ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ ಎಂದರು.

 

Add Comment