ರೈತರಿಗಾಗಿ ಅರ್ಕಾ ಬಾಗವಾನಿ ಆಪ್

1 Star2 Stars3 Stars4 Stars5 Stars (1 votes, average: 5.00 out of 5)
Loading...

ತೋಟಗಾರಿಕೆ ಹಾಗೂ ಕೃಷಿ ಕಾರ್ಯವ್ಯಾಪ್ತಿ ವಿಸ್ತರಣೆಗಾಗಿ ಭಾರತೀಯ ತೋಟಗಾರಕಾ ಸಂಶೋಧನಾ ಸಂಸ್ಥೆಯ ಅಭಿವೃದ್ಧಿ ಪಡಿಸಿದ ಅರ್ಕಾ ಬಾಗವಾನಿ ಮೊಬೈಲ್ ಆಪ್ ಮತ್ತು ಸೀಡ್ ಪೋರ್ಟಲ್ ಅನ್ನು ಭಾರತೀಯ ಕೃಷಿ ಸಂಶೋಧನಾ ಸೇವೆ ಪ್ರಧಾನ ನಿರ್ದೇಶಕ ಡಾ ಟಿ ಮೊಹಾಪಾತ್ರ ಬಿಡುಗಡೆ ಮಾಡಿದರೆ.

ಐಐಹೆಚ್‍ಆರ್ ಹೆಸರಘಟ್ಟ ಆವರಣದಲ್ಲಿ ನಾಲ್ಕು ದಿನ ಹಮ್ಮಿಕೊಂಡಿರುವ ರಾಷ್ಟ್ರೀಯ ತೋಟಗಾರಿಕೆ ಮೇಳ 2020ಕ್ಕೆ ಬುಧವಾರ ಚಾಲನೆ ನೀಡುವ ಜೊತೆಗೆ ಈ ಕನ್ನಡ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆಪ್ ಮತ್ತು ಆನ್‍ಲೈನ್ ಸೇವೆಯ ಪೋರ್ಟಲ್ ಲೋಕಾರ್ಪಣೆ ಮಾಡಿದರು.

ವಿಶೇಷತೆ : ಅರ್ಕಾ ಬಾಗವಾನಿ ಮೊಬೈಲ್ ಆಪ್‍ನಲ್ಲಿ ಐಐಎಚ್‍ಆರ್‍ನಲ್ಲಿ ಲಭ್ಯವಾಗುವ ತೋಟಗಾರಿಕೆ ಮತ್ತು ಕೃಷಿಯ ಎಲ್ಲಾ ಮಾಹಿತಿ ಲಭ್ಯವಿದೆ. ಹೂವು ಹಣ್ಣು ಹಾಗೂ ತರಕಾರಿಗಳ ಎಲ್ಲಾ ವಿಧದ ಬೀಜಗಳು, ಔಷಧಿ ಗಿಡಗಳ ಬೀಜ, ಅವುಗಳ ವಿಶೇಷತೆ ಮತ್ತು ಲಭ್ಯತೆ ಕುರಿತು ಮಾಹಿತಿ ಅಡಕವಾಗಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಆನ್‍ಲೈನ್ ಖರೀದಿಗಾಗಿ ಸೀಡ್ ಪೋರ್ಟಲ್ ಇದ್ದು ಇಲ್ಲಿ ತೋಟಗಾರಿಕೆ ಬೆಳೆಗಳ ಬೀಜಗಳ ಲಭ್ಯತೆ ನೋಡಿಕೊಂಡು ಖರೀದಿಸಬಹುದಾಗಿದೆ. ಅಮೆಜಾನ್ ಫ್ಲಿಪ್‍ಕಾರ್ಟ್‍ನಲ್ಲಿ ನಾವು ವಸ್ತುಗಳನ್ನು ಖರೀದಿಸುವಂತೆ ಬೀಜಗಳನ್ನು ಈ ಪೋರ್ಟಲ್‍ನಲ್ಲಿ ಖರೀದಿಸಬಹುದಾಗಿದೆ. ರೈತರು ತಮ್ಮ ಜಿಲ್ಲೆ, ತಾಲೂಕು ಮೊಬೈಲ್ ಸಂಖ್ಯೆ ಹೆಸರಿನ ಮೂಲಕ ನೋಂದಣಿ ಮಾಡಕೊಳ್ಳಬೇಕು. 50ಗ್ರಾಂನಿಂದ 10 ಕೆಜಿ ವರೆಗೆ ಬೀಗಳನ್ನು ಖರೀದಿಸಬಹುದು. ಪಾಕೇಟಿನ ಮೇಲೆ ದರ ನಿಗದಿಯಾಗಿರುತ್ತದೆ. ರೈತರ ತಾಲೂಕು ಮತ್ತು ಜಿಲ್ಲೆ ಸಹಿತ ನೋಂದಣಿಯಾಗಿರುವುದರಿಂದ ರೈತರು ಖರೀದಿಸ ಬಯಸುವ ಬೀಜಗಳು ಅವರಿರುವ ಪ್ರದೇಶಕ್ಕೆ ಸೂಕ್ತವೋ ಇಲ್ಲವೋ ಎನ್ನುವುದನ್ನು ತಿಳಿಸಲಾಗುತ್ತದೆ .

ಫೆಬ್ರವರಿ 5ರಿಂದ 8ರವೆಗೆ ತೋಟಗಾರಿಕಾ ಮೇಳ ನಡೆಯಲಿದೆ. 15ಸಾವಿರಕ್ಕೂ ಹೆಚ್ಚು ರೈತರು ಪ್ರತಿದಿನ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಿಪ್ಪೇಸ್ವಾಮಿ 980669366 ಅಥವಾ www.iihr.res.in  ಸಂಪರ್ಕಿಸಬಹುದು.

Add Comment