ಅರಕಲಗೂಡು: ಆಶ್ರಯ ನಿವೇಶನ ತಾತ್ಕಾಲಿಕ ಪಟ್ಟಿ ಪ್ರಕಟ-ಶಾಸಕ ಎ‌.ಟಿ.ರಾಮಸ್ವಾಮಿ

ಆಶ್ರಯ ನಿವೇಶನ ತಾತ್ಕಾಲಿಕ ಪಟ್ಟಿ ಪ್ರಕಟ ಶಾಸಕ ಎ.ಟಿ. ರಾಮಸ್ವಾಮಿ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶಿಕ್ಷಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿರವರು ಆಶ್ರಯ ಸಮಿತಿ ವತಿಯಿಂದ ಆಶ್ರಯ ನಿವೇಶನವನ್ನು ಬಡವರಿಗೆ ಅರ್ಹ ಫಲಾನುಭವಿಗಳಿಗೆ ಈ ಹಿಂದೆ ಎರಡು ಬಾರಿ ಸಭೆ ಸೇರಿ ಚರ್ಚೆ ಮಾಡಲಾಗಿತ್ತು.
ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿ ಎಲ್ಲವನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸಮಿತಿಯ ಅಧ್ಯಕ್ಷರು ಅನುಮೋದಿಸಿದ ನಂತರ ಜಿಲ್ಲಾಧಿಕಾರಿಗಳಿಗೆ ಪಟ್ಟಿಯನ್ನು ಕಳಿಸಿಕೊಡುಬೇಕು ಎನ್ನುವುದನ್ನು ಹಿಂದಿನ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಮತ್ತು ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅರಕಲಗೂಡು ಪಟ್ಟಣದಲ್ಲಿ ಪ್ರಚಾರವನ್ನು ಕೂಡ ಮಾಡಿಸಲಾಗಿದ್ದು, ವಾರ್ಡುವಾರು ಸಭೆ ಕರೆದು, ಸಭೆಯಲ್ಲಿ ತಾತ್ಕಾಲಿಕ ಪಟ್ಟಿಯನ್ನು ಎರಡೆರಡು ಬಾರಿ ಓದಿ ತಿಳಿಸಿ ಆ ಪಟ್ಟಿಯಲ್ಲಿ ಯಾರಾದರೂ ನಿವೇಶನ ಮತ್ತು ಮನೆ ಇರುವ ಫಲಾನುಭವಿಗಳು ಇದ್ದಲ್ಲಿ ಪಟ್ಟಣ ಪಂಚಾಯಿತಿಗೆ ತಿಳಿಸಲು ತಿಳಿಸಿದ್ದೇವೆ. ಇವೆಲ್ಲವನ್ನೂ ಪರಿಶೀಲಿಸಿದ ನಂತರ ಯಾವುದೇ ಲೋಪಗಳು ಆಗಬಾರೆದೆಂಬ ದೃಷ್ಟಿಯಿಂದ ಅಂತಿಮವಾಗಿ 805 ಅರ್ಜಿಗಳು ಬಂದಿದ್ದು 195 ಅರ್ಹ ಆಶ್ರಯ ನಿವೇಶನ ಫಲಾನುಭವಿಗಳ ಮೊದಲ ಹಂತದ ತಾತ್ಕಾಲಿಕ ಪಟ್ಟಿಯನ್ನು ಪ್ರಕಟ ಮಾಡಿ ಪಟ್ಟಣ ಪಂಚಾಯತಿ ನೋಟಿಸ್ ಬೋರ್ಡ್ ಗೆ
ಹಾಕಲು ಸೂಚನೆ ನೀಡಲಾಗಿದೆ ಎಂದರು.
ಇದೇ ವೇಳೆ ತಾತ್ಕಾಲಿಕ ಪಟ್ಟಿಯಲ್ಲಿ ಇರುವ ಯಾರಾದರೂ ನಿವೇಶನವನ್ನು ಹೊಂದಿರುವವರು ಇದ್ದಲ್ಲಿ 23/01/2021 ಶನಿವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಈ ಆಯ್ಕೆ ಪಟ್ಟಿಯನ್ನು ಅತ್ಯಂತ ಪಾರದರ್ಶಕತೆ ಇಂದ ಅತ್ಯಂತ ಬಡವರಿಗೆ ನಿವೇಶನ ವಂಚಿತರಿಗೆ ಸಿಗಬೇಕು ಎಂಬ ಉದ್ದೇಶದಿಂದ ಪಟ್ಟ ತಯಾರಿಸಲಾಗಿದೆ ಎಂದು ತಿಳಿಸಿದರು ಮತ್ತು ಎರಡನೇ ಹಂತದ ಪಟ್ಟಿಯನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೆಲ ಪಟ್ಟಣ ಪಂಚಾಯತ್ ಸದಸ್ಯರು ಗಳು ನೇರವಾಗಿ ಸಮಿತಿಯ ಅಧ್ಯಕ್ಷರು ಆದ ಶಾಸಕ ಎ.ಟಿ.ರಾಮಸ್ವಾಮಿಯವರನ್ನು ನೇರವಾಗಿ ವಿರೋಧ ಮಾಡುತ್ತಿದ್ದರು. ಅದಕ್ಕೆ ನಯವಾಗಿ ಉತ್ತರ ಕೊಡುತ್ತಿದ್ದೂ ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹೂವಣ್ಣ ಮುಂತಾವರು ಉಪಸ್ಥಿತರಿದ್ದರು.
ಕೆಟಿವಿ ಕನ್ನಡ ಹಾಸನ

Add Comment