ಅರಕಲಗೂಡು: ಎತ್ತಿನ ಬಂಡಿ ಸ್ಪರ್ಧೆಯಲ್ಲಿ ತಪ್ಪಿದ ಭಾರಿ ಅವಘಡ

ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನ‌ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆಯ ವೇಳೆ ಐದು ಮಂದಿಯ ಮೇಲೆ ಎತ್ತಿನ ಬಂಡಿ ಸಾಗಿದ ಘಟನೆ ನಡೆದಿದೆ.
ಎತ್ತಿನ ಗಾಡಿ ಓಟದ ಸ್ಪರ್ಧೆ ಆರಂಭವಾಗಿ ಮೊದಲ ಸುತ್ತಿನಲ್ಲಿ ಜಯಶೀಲರಾದ ಮಂಜುನಾಥ್ ಎಂಬುವರ ಎತ್ತಿನಗಾಡಿ ನೆರೆದಿದ್ದ ಪ್ರೇಕ್ಷಕರ ಮೇಲೆ ನುಗ್ಗಿದ್ದರಿಂದ ಇಂತಹದೊಂದು ಘಟನೆ ನಡೆದಿದೆ.
ಪ್ರಾಯೋಜಕರು ಸಾಕಷ್ಟು ಬಾರಿ ಎತ್ತಿನಗಾಡಿ ಓಟ ಸ್ಪರ್ಧೆಯಿಂದ 400 ಮೀಟರ್ ಅಂತರದಲ್ಲಿ ಇರಬೇಕು ಎಂದು ನಿಯಮ ಪಾಲಿಸಿದರೆ ಎತ್ತಿನ ಬಂಡಿ ಓಟದ ಸ್ಪರ್ಧೆಯನ್ನು ನೋಡಲು ಮುಗಿಬಿದ್ದ ಹಿನ್ನೆಲೆಯಲ್ಲಿ ಓಡುತ್ತಿದ್ದ ಎತ್ತುಗಳನ್ನು ತಕ್ಷಣ ನಿಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಲ್ಕೈದು ಪ್ರೇಕ್ಷಕರು ಎತ್ತಿನ ಬಂಡಿಯ ಚಕ್ರಕ್ಕೆ ಸಿಲುಕಿ ಕೂದಲೆಳೆಯಲ್ಲಿ ಪಾರಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ಆದರೆ ಇಂತಹ ಒಂದು ಘಟನೆಗೆ ಪ್ರೇಕ್ಷಕರ ನಿರ್ಲಕ್ಷವೇ ಕಾರಣ ಎಂಬುದು ಆಯೋಜಕರ ಮತ್ತು ಅಲ್ಲಿನ ಸ್ಥಳೀಯರ ಮಾತಾಗಿದ್ದು ಸಣ್ಣಪುಟ್ಟ ಗಾಯಗಳಾಗಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.
ಕೆ ಟಿವಿ ಕನ್ನಡ ಅರಕಲಗೂಡು

Add Comment