ಫೇಸ್ಬುಕ್ ನಲ್ಲಿ ಉಂಟಾದ ಪ್ರೀತಿ-ಯುವಕನ ಗತಿ ಕೇಳಿದ್ರೆ ಶಾಕ್ ಆಗ್ತಿರಾ!

ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ. ಆದರೆ ಪ್ರೇಮಿಗಳಿಗೆ ಕಣ್ಣಿಲ್ಲ ಎಂದು ಎಲ್ಲಿಯೂ ಸಹ ಹೇಳಿಲ್ಲ. ಆದರೆ ಈಗಿನ ಕಾಲದಲ್ಲಿ ಪ್ರೇಮ ಕುರುಡಾಗಿರುವುದರ ಬದಲಿಗೆ, ಪ್ರೇಮಿಗಳೇ ಕುರುಡಾಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕುರುಡು ಪ್ರೇಮಿಯೊಬ್ಬನ ಕಥೆ ಇದಾಗಿದೆ. ಹೌದು. ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ 25 ವರ್ಷದ ಸಲ್ಮಾನ್ ಎಂಬ ಯುವಕನಿಗೆ, 2 ಸಾವಿರ ಕಿ.ಮೀ ದೂರವಿರುವ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಲಿಖೀಂಖೇರಿಯ ನಿವಾಸಿಯಾದ 21 ವರ್ಷದ ಹುಡುಗಿಯ ಪರಿಚಯವಾಗುತ್ತೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಇವರಿಬ್ಬರ ಸ್ನೇಹ, ಪ್ರಾರಂಭದ ದಿನದಲ್ಲಿ ಕೇವಲ ಸ್ನೇಹವಾಗೇ ಇರುತ್ತದೆ. ಬಳಿಕ ದಿನ ಕಳೆದಂತೆ ಆ ಸ್ನೇಹ, ಸಲುಗೆಗೆ ತಿರುಗಿ, ಸಯ್ಯದ್, ಆ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸಲು ಶುರುಮಾಡುತ್ತಾನೆ. ಆದರೆ ಹುಡುಗಿಗೆ ಮಾತ್ರ ಪ್ರೀತಿ, ಪ್ರೇಮ ಅನ್ನೋ ಯಾವ ಫೀಲ್ ಕೂಡ ಇರುವುದಿಲ್ಲ. ಆದರೆ ತಾನೂ ಸಹ ನಿಜವಾಗಿಯೂ ಪ್ರೀತಿಸುತ್ತಿದ್ದೀನಿ ಅನ್ನೋ ತರ ನಾಟಕವಾಡ್ತಾಳೆ. ಆದರೆ ಹುಡುಗ ಮಾತ್ರ ತನ್ನ ಪ್ರೀತಿಯನ್ನ ಅವಳಿಗೆ ತಿಳಿಸ್ಬೇಕು ಅಂತ ಕಾತುರದಿಂದ ಕಾಯ್ತಿರ್ತಾನೆ. ಅದಕ್ಕೂ ಸಹ ಒಂದು ದಿನ ಕೂಡಿ ಬರುತ್ತೆ..

ಅವತ್ತು ಅವಳ ಹುಟ್ಟಿದ ದಿನ. ಆ ದಿನ ಅವಳಿಗೆ ತನ್ನ ಪ್ರೀತಿಯ ವಿಷಯ ತಿಳಿಸ್ಬೇಕು ಅಂತ ವಿಮಾನದಲ್ಲಿ ಅವಳ ಊರಿಗೆ ಹೋಗುತ್ತಾನೆ. ಹೋಗುವಾಗ ಅವಳಿಗೆ ಇಷ್ಟವಾಗುವ ಚಾಕೋಲೆಟ್, ಗಿಫ್ಟ್ ಹಾಗೂ ಬಟ್ಟೆಗಳನ್ನು ತಗೊಂಡ್ ಹೋಗಿರ್ತಾನೆ. ಅವಳ ಮನೆಗೆ ಹೋದ ಅವನಿಗೆ ಮೊದಲು ಎದುರಾಗುವುದೇ ಹುಡುಗಿಯ ಪೋಷಕರು. ಅವನನ್ನು ನೋಡುತ್ತಿದ್ದಂತೆ ಹುಡುಗಿಯ ಪೋಷಕರು ಅವನನ್ನು ವಿಚಾರಿಸ್ತಾರೆ. ಆಗ ಸಯ್ಯದ್ ತನ್ನ ಪ್ರೇಮ ಪುರಾಣವನ್ನು ತಿಳಿಸ್ತಾನೆ. ಬಳಿಕ ಹುಡುಗಿಯ ಪೋಷಕರು ಅವನಿಗೆ ಹಿಗ್ಗಾಮುಗ್ಗ ಥಳಿಸಿ, ಅವನನ್ನು ಪೊಲೀಸರಿಗೆ ಒಪ್ಪಿಸುತ್ತಾನೆ. ನಂತರ ಪೊಲೀಸರು ಎರಡು ದಿನ ಅವನನ್ನು ಠಾಣೆಯಲ್ಲಿ ಇರಿಸಿಕೊಂಡು, ಬಳಿಕ ಅವನನ್ನು ಕೋರ್ಟ್ ಗೆ ಒಪ್ಪಿಸುತ್ತಾರೆ. ನಂತರ ಜಾಮೀನು ಪಡೆದುಕೊಂಡು ಹೊರಬರುತ್ತಾನೆ. ಆದರೆ ಇಷ್ಟೆಲ್ಲಾ ಆದರೂ ಸಹ ಯುವತಿ ಮಾತ್ರ ಎಲ್ಲಿಯೂ ಬರಲಿಲ್ಲ. ಜೊತೆಗೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆದರೆ ನಿಜವಾದ ಪ್ರೀತಿ ಮಾಡಿದ್ದ ಯುವಕ ಕೊನೆಗೆ ಪೊಲೀಸ್ ಠಾಣೆಯಲ್ಲಿ ಕಾಲ ಕಳೆಯುವಂತಾಯಿತು.

Add Comment