ಆಸ್ಟ್ರೇಲಿಯಾ ವಿರುದ್ಧ 2-1ರಿಂದ ಟೆಸ್ಟ್ ಸರಣಿ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐನಿಂದ 5 ಕೋಟಿ ರೂ. ಬೋನಸ್

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆದ 4ನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪ್ರವಾಸಿ ಭಾರತ 3 ವಿಕೆಟ್ ಗಳಿಂದ ಸೋಲಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿದೆ.
4ನೇ ಟೆಸ್ಟ್ ನ 5ನೇ ಅಂತಿಮ‌ ದಿನದಂದು ಗೆಲುವಿಗೆ 2ನೇ ಇನಿಂಗ್ಸ್ ನಲ್ಲಿ 328 ರನ್ ಗಳಿಸಬೇಕಿದ್ದ ಭಾರತ ಆಶ್ಚರ್ಯವೆಂಬಂತೆ 97 ಓವರ್ ಗಳಲ್ಲಿ 7 ವಿಕೆಟ್ ಗೆ
329 ರನ್ ಹೊಡೆದು ಆತಿಥೇಯ ಆಸ್ಟ್ರೇಲಿಯಾಕ್ಕೆ ಭಾರಿ ಷಾಕ್ ನೀಡಿತು.
ಡ್ರಾ ಆಗಬಹುದಾಗಿದ್ದ ಅಂತಿಮ ಟೆಸ್ಟ್ ನಲ್ಲಿ ಭಾರತ
ಅಚ್ಚರಿಯೆಂಬಂತೆ ಅನಿರೀಕ್ಷಿತ ಜಯ ಸಾಧಿಸಿದ್ದರಿಂದ ಆಸ್ಟ್ರೇಲಿಯಾಕ್ಕೆ ಆಘಾತವಾಯಿತು.
4ನೇ ದಿನದಂತ್ಯಕ್ಕೆ 2 ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದ ಭಾರತ 5ನೇ ದಿನದ ಆರಂಭದಲ್ಲೇ ಓಪನರ್ ರೋಹಿತ್ ಶರ್ಮಾ(7) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಮತ್ತೊಬ್ಬ ಓಪನರ್ ಶುಭಮಾನ್ ಗಿಲ್ ಮತ್ತು ಚೇತೇಶ್ವರ ಪೂಜಾರ ನಿಧಾನವಾಗಿ ಆಡಿ ಸ್ಕೋರನ್ನು 132 ರನ್ ಮುಟ್ಟಿಸಿದಾಗ ಶುಭಮಾನ್ ಗಿಲ್ 91 ರನ್ ಗಳಿಸಿ ಔಟಾದರು. ಬಳಿಕ ನಾಯಕ ಅಜಿಂಕ್ಯ ರೆಹಾನೆ ಚುರುಕಿನ 22 ರನ್ ಗಳಿಸಿ ಔಟಾದರು. ಆಗ ಸ್ಕೋರ್ 167 ರನ್ ಆಗಿತ್ತು. ಆದರೆ 4ನೇ ವಿಕೆಟ್ ಗೆ 61 ರನ್ ಸೇರಿಸಿದ ಪೂಜಾರ ಮತ್ತು ರಿಷಬ್ ಪಂತ್ ಸ್ಕೋರನ್ನು 228 ರನ್ ವರೆಗೆ ಒಯ್ದರು. ಆದರೆ ಆಗ ಪೂಜಾರ 56 ರನ್ ಗಳಿಸಿ ಔಟಾದರು. ಬಳಿಕ ಸ್ಕೋರ್ 265 ರನ್ ಆದಾಗ ಕರ್ನಾಟಕದ ಮಯಾಂಕ್ ಅಗರ್ ವಾಲ್ ಕೇವಲ 9 ರನ್ ಗಳಿಸಿ ಔಟಾದರು.
ಆಗ ಸೋಲಿನ ಆತಂಕ ಭಾರತ ತಂಡವನ್ನು ಆವರಿಸಿತ್ತು. ಆದರೆ ಆಗ 6ನೇ ವಿಕೆಟ್ ಗೆ ರಿಷಬ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಕೇವಲ 55 ಎಸೆತಗಳಲ್ಲಿ 53 ರನ್ ಬಾರಿಸಿ ಗೆಲುವನ್ನು ಸುಲಭವಾಗಿಸಿದರು. ಆದರೆ ಭಾರತ 318 ರನ್ ಗಳಿಸಿದ್ದಾಗ 22 ರನ್ ಗಳಿಸಿದ್ದ ವಾಷಿಂಗ್ಟನ್ ಸುಂದರ್ ಔಟಾದರು. ಬಳಿಕ ಶಾರ್ದುಲ್ ಠಾಕೂರ್ ಸಹ 2 ರನ್ ಹೊಡೆದು ಔಟಾದರು. ಬಳಿಕ ರಿಷಬ್ ಪಂತ್ ಬೌಂಡರಿ ಬಾರಿಸಿ ಭಾರತಕ್ಕೆ ಸರಣಿ ಗೆಲುವು ತಂದರು. ಒಟ್ಟು ಅಜೇಯ 89 ರನ್ ಬಾರಿಸಿ ಗೆಲುವಿಗೆ ಕಾರಣರಾದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ರಿಷಬ್ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
2ನೇ ಇನಿಂಗ್ಸ್ ನಲ್ಲಿ ಆಸೀಸ್ ಪರ ಕುಮಿನ್ಸ್ 4 ವಿಕೆಟ್ ಪಡೆದರೆ,ಲಿಯೋನ್ 2 ವಿಕೆಟ್ ಮತ್ತು ಹ್ಯಾಜಲ್ ವುಡ್ ಒಂದು ವಿಕೆಟ್ ಪಡೆದರು.
ಆದರೆ ಆಸ್ಟ್ರೇಲಿಯಾದ ಪ್ಯಾಟ್ ಕುಮಿನ್ಸ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಈ ಮೂಲಕ ಭಾರತ 2-1ರಿಂದ ತವರಿನಲ್ಲೇ ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ಬಾರ್ಡರ್-ಗವಾಸ್ಕರ್
ಕ್ರಿಕೆಟ್ ಟ್ರೋಫಿ ಗೆದ್ದು ಹೊಸ ಇತಿಹಾಸ ನಿರ್ಮಿಸಿತು‌.
ಈ ಮೂಲಕ ಕೇವಲ ತನ್ನ ಮಗು ಹುಟ್ಟಿದ ಕಾರಣ ನೀಡಿ ಮೊದಲ ಟೆಸ್ಟ್ ನ ಅತ್ಯಂತ ಹೀನಾಯ ಸೋಲಿನ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದ ನಾಯಕ ವಿರಾಟ್ ಕೊಹ್ಲಿ ಅವರಿಂದ ಸರಣಿ ಸೋತಿತು ಎನ್ನುವಾಗಲೇ ಉಪನಾಯಕ ಅಜಿಂಕ್ಯ ರೆಹಾನೆ ಅವರು ಓಪನರ್ ರೋಹಿತ್ ಶರ್ಮಾ,ವೇಗದ ಬೌಲರ್ ಗಳಾದ ಇಶಾಂತ್ ಶರ್ಮಾ,ಮೊಹಮ್ಮದ್ ಶಮಿ,ಉಮೇಶ್ ಯಾದವ್ ಗಾಯದಿಂದ ಭಾರತಕ್ಕೆ ವಾಪಾಸ್ಸಾದರು. ಹಾಗೂ ಬಳಿಕ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್,ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಬ್ಯಾಟ್ಸ್ ಮನ್ ಹನುಮ ವಿಹಾರಿ ಅವರೂ ಸಹ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ದೂರವುಳಿಯಬೇಕಾಯಿತು.
ಆದರೆ ರೋಹಿತ್ ಶರ್ಮಾ ಮಾತ್ರ ಕಡೆಯ ಟೆಸ್ಟ್ ಪಂದ್ಯದಲ್ಲಿ ಆಡಿದರು‌. ಆದರೂ ಬರೀ ಅನನುಭವಿ ಆಟಗಾರರ ಟೀಂ ಇಂಡಿಯಾ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನಾಯಕ ಅಜಿಂಕ್ಯ ರೆಹಾನೆ ನೇತೃತ್ವದಲ್ಲಿ ಅನನುಭವಿ ತಂಡದ ಆಟಗಾರರಿಂದ ಆಸ್ಟ್ರೇಲಿಯಾವನ್ನು ತವರಿನಲ್ಲಿ 2-1ರಿಂದ ಟೆಸ್ಟ್ ಸರಣಿ ಗೆದ್ದ ಕಾರಣ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಭಾರತ ತಂಡದ ಕ್ರಿಕೆಟ್ ಆಟಗಾರರಿಗೆ 5 ಕೋಟಿ ರೂ. ಬೋನಸ್ ನೀಡಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಕೋರ್:
ಆಸ್ಟ್ರೇಲಿಯಾ 1ನೇ ಇನಿಂಗ್ಸ್-369 ರನ್ ಆಲೌಟ್
2ನೇ ಇನಿಂಗ್ಸ್-294 ರನ್ ಆಲೌಟ್
ಭಾರತ 1ನೇ ಇನಿಂಗ್ಸ್- 336 ರನ್ ಆಲೌಟ್
2ನೇ ಇನಿಂಗ್ಸ್- 329/5 ರನ್
ಫಲಿತಾಂಶ : ಭಾರತಕ್ಕೆ 3 ವಿಕೆಟ್ ಗಳ ಜ
ಹಾಗೂ 4 ಟೆಸ್ಟ್ ಸರಣಿ 2-1ರಿಂದ ಭಾರತಕ್ಕೆ ಜಯ
ಕೆ ಟಿವಿ ಕನ್ನಡ ಬ್ರಿಸ್ಬೇನ್

Add Comment