ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರ ಸಲ್ಲಿಕೆ

ಹಾಸನಜಿಲ್ಲೆ ಅರಕಲಗೂಡಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಪ್ರತಿಭೆಗಳಿಗೆ ವರ್ಣರಂಜಿತ ವೇದಿಕೆಯಲ್ಲಿ ಪುರಸ್ಕರಿಸಲಾಯಿತು. ಆಧುನಿಕತೆಗೆ ಒಗ್ಗಿಕೊಳ್ಳುವ ಮೂಲಕ ಮಕ್ಕಳು ದೇಶೀಯ ಕಲೆಗಳಲ್ಲೂ ಹೆಚ್ಚು ಆಸಕ್ತಿ ಬೆಳೆಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಭವಿಷ್ಯದಲ್ಲಿ ಎದುರಾಗುವ ಎಲ್ಲ ರೀತಿಯ ಸವಾಲುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎ. ಮಂಜು ಸಲಹೆ ನೀಡಿದರು. ಚಿತ್ರನಟಿ ದೀಪಿಕಾ ದಾಸ್ ಮಾತನಾಡಿ, ಯಾರಲ್ಲಿ ಯಾವ ಪ್ರತಿಭೆ ಅಡಗಿರುತ್ತದೆಯೋ ಗೊತ್ತಿರುವುದಿಲ್ಲ, ಹಾಗಾಗಿ ವಿದ್ಯೆಗೆ ನೀಡುವಷ್ಟೆ ಆದ್ಯತೆಯನ್ನು ಕಲೆ ಮತ್ತು ಕ್ರೀಡೆಗಳಿಗೆ ನೀಡಿದರೆ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದರು. ವರ್ಣರಂಜಿತ ವೇದಿಕೆಯಲ್ಲಿ ಮಾಜಿ ಸಚಿವ ಎ. ಮಂಜು, ನಟಿ ದೀಪಿಕಾದಾಸ್ ೩೦೦ ಪ್ರತಿಭಾನ್ವಿತ ಮಕ್ಕಳಿಗೆ ಪೋಷಕರ ಸಮ್ಮಖದಲ್ಲಿ ಪುರಸ್ಕರಿಸಿ ಗೌರವಿಸಲಾಯಿತು.

ಅರಕಲಗೂಡು ವೆಂಕಟೇಶ್ ಕೆಟಿವಿ ನ್ಯೂಸ್ ಹಾಸನಜಿಲ್ಲೆ
ಕೆ.ಟಿವಿ ಕನ್ನಡ

Add Comment