ವೈ.ಡಿ ನಂಜೆಗೌಡರ 13 ನೇ ಪುಣ್ಯ ತಿಥಿ

ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದಲ್ಲಿ ವೈಡಿ ನಂಜೆಗೌಡರ 13 ನೇ ವರ್ಷದ ಪುಣ್ಯ ತಿಥಿ ಆಚರಿಸಿಲಾಯಿತು. ಶ್ರೀ ಚೆನ್ನಕೇಶವ ದೇವಾಲಯದಲ್ಲಿ ದಿವಾಂಗತರಿಗೆ ಪೂಜೆ ಸಲ್ಲಿಸಲಾಯಿತು. ನಂತರ ವೈ ಡಿ ನಂಜುಂಡೇಗೌಡರು ಕೊಡುಗೆ ನೀಡಿದಂತಹ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ದಿವಾಂಗತ ಮಂಜಮ್ಮ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅಗಲಿದ ನಾಯಕನ ಪುಣ್ಯಸ್ಮರಣೆ ಆಚರಿಸಿದರು. ನಂಜೇಗೌಡರ ಮಗನಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣೇಗೌಡರು ಮಾಧ್ಯಮದ ಜೊತೆ ಮಾತನಾಡಿದ್ದು, ನಮ್ಮ ತಂದೆಯವರು ದೇವರ ಪ್ರತಿಷ್ಟಾಪನೆ ಹಾಗೂ ಜೀರ್ಣೋದ್ಧಾರ ಸೇರಿದಂತೆ ಹಲವಾರು ಖ್ಯಾತಿಯಾ ಕಾರ್ಯಗಳನ್ನು ಮಾಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಾಕ್ಟರ್ ನರಸಿಗೌಡ, ಯುವ ಕಾಂಗ್ರೆಸ್ ಮುಖಂಡರುಗಳಾದ ಜೀವನ್ ಗೌಡ, ಮಧು, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕ ಬಂಧುಗಳು, ರೈತಬಾಂಧವರು, ಕೃಷ್ಣೇಗೌಡ ಅಭಿಮಾನಿಗಳ ಬಳಗದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕಾರ್ಯಕರ್ತರು ಹಾಜರಿದ್ದರು

ಎಸ್ಎಲ್ಎನ್ ಯೋಗೇಶ್ ಕೆಟಿವಿ ನ್ಯೂಸ್, ಬೇಲೂರು
ಕೆ.ಟಿವಿ ಕನ್ನಡ

Add Comment