ಬಸವಣ್ಣ ಬ್ರಿಗೇಡ್ 2021 ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಶ್ರೀ ಕ್ಷೇತ್ರವಾದ ಕೋಡಿಮಠ ವಿಶ್ವಗುರು ಬಸವಣ್ಣ ಬ್ರಿಗೇಡ್ ವತಿಯಿಂದ ಶ್ರೀ ಕ್ಷೇತ್ರ ಕೋಡಿಮಠದಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಬಸವಣ್ಣ ಬ್ರಿಗೇಡ್ 2021 ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಬಸವಣ್ಣ ಬ್ರಿಗೇಡ್ ಉತ್ತಮವಾದ ಕಾರ್ಯ ಮಾಡುತ್ತಲೇ ಬಂದಿದೆ ಇಂದು ಶ್ರೀಮಠದಲ್ಲಿ ವರ್ಷದ ದಿನಚರಿಯನ್ನು ಬಿಡುಗಡೆ ಮಾಡಿದ್ದೇವೆ ಬಸವ ಬ್ರಿಗೇಡ್ ನ ಎಲ್ಲ ಪದಾಧಿಕಾರಿಗಳಿಗೆ ಒಳ್ಳೆಯದಾಗಲಿ ಎಂದರು. ಯುವ ಪತ್ರಕರ್ತರಾದ ಜೀವನ್ ಕುಮಾರ್ ರವರಿಗೆ ಶ್ರೀ ರವರಿಂದ ಆಶೀರ್ವದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಸವ ಬ್ರಿಗೇಡ್ , ರಾಜ್ಯ ಅಧ್ಯಕ್ಷ ಬಸವರಾಜ ನಾಗೇನಹಳ್ಳಿ ,ರಾಜ್ಯ ಕಾರ್ಯಾಧ್ಯಕ್ಷರು ಮೂರ್ತಿ , ಮಂಜುನಾಥ್ ನಾಗೇನಹಳ್ಳಿ ,ಸಿದ್ದಪ್ಪ , ಗಂಗಾಧರಪ್ಪ, ಕುಮಾರಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಎಸ್ಎಲ್ಎನ್ ಯೋಗೇಶ್ ಕೆಟಿವಿ ನ್ಯೂಸ್ ಅರಸೀಕೆರೆ
ಕೆ.ಟಿವಿ ಕನ್ನಡ

Add Comment