ಐಶ್ವರ್ಯಾಳನ್ನು ಸಿಟ್ಟಿನಿಂದ ಬಿಟ್ಟುಹೋಗಿದ್ದೇಕೆ ಅಭಿಷೇಕ್ ಬಚ್ಚನ್ ?

ಐಶ್ವರ್ಯಾಳನ್ನು ಸಿಟ್ಟಿನಿಂದ ಬಿಟ್ಟುಹೋಗಿದ್ದೇಕೆ ಅಭಿಷೇಕ್ ಬಚ್ಚನ್ ?

ಬಾಲಿವುಡ್ ಅಂಗಳದಲ್ಲಿ ನಿನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಮಂಗಳೂರಿನ ಕುವರಿ ವಿಶ್ವಸುಂದರಿ ಐಶ್ವರ್ಯಾ ರೈ ಬಾಳಲ್ಲಿ ಈ ರೀತಿಯಾಗುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಇಷ್ಟ ಪಟ್ಟು, ಕೋಟಿ ಜನರ ಹಾರೈಕೆಯೊಂದಿಗೆ, ಪಡ್ಡೆಗಳ ಮತ್ಸರದೊಂದಿಗೆ ಐಶ್‍ಳನ್ನು ಮದುವೆಯಾಗಿದ್ದ ಅಭಿಷೇಕ್ ಈಗ ಸಿಟ್ಟಿನಲ್ಲೇ ಐಶ್‍ಳನ್ನು ಬಿಟ್ಟುಹೋಗಿದ್ದಾನೆ.

ನಟಿ ಸೋನಮ್ ಕಪೂರ್ – ಉದ್ಯಮಿ ಆನಂದ್ ಅನುಜಾ ಮದ್ವೆ ರಿಸೆಪ್ಷನ್‍ನದ್ದು ಎನ್ನಲಾದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ವೈರಲ್ ಆಗಿದೆ. ಈ ರಿಸೆಪ್ಷನ್‍ನಲ್ಲಿ ಅಭಿಷೇಕ್ -ಐಶ್ವರ್ಯಾ ಪಾಲ್ಗೊಂಡಿದ್ದರು. ಸಹಜವಾಗಿಯೇ, ಎಲ್ಲರ ಕಣ್ಣೂ ಈ ಜೋಡಿ ಮೇಲಿತ್ತು. ಫೋಟೋಗ್ರಾಫರ್‍ಗಳು ಇಂತಹ ಚಾನ್ಸ್ ಮಿಸ್ ಮಾಡ್ಕೋತಾರಾ ಹೇಳಿ ?

ತಾರಾ ಅತಿಥಿಗಳ ಫೋಟೋಶೂಟ್‍ಗೆಂದೇ ಮೀಸಲಾಗಿರಿಸಿದ್ದ ಜಾಗದಲ್ಲಿ, ಇವ್ರದ್ದೂ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಐಶ್‍ಗಂತೂ ಹಾಗೆ ನಿಲ್ಲಿ ಮೇಡಂ, ಹೀಗೆ ನಿಲ್ಲಿ ಮೇಡಂ ಅಂತ ತರಹೇವಾರಿ ಪೋಸ್‍ಗಳನ್ನು ಫೋಟೋಗ್ರಾಫರ್‍ಗಳು ಹೇಳ್ತಾನೇ ಇದ್ರು. ತಾವೂ ಫೋಟೋಗೆ ನಿಂತಿದ್ರೂ ಜಾಸ್ತಿ ತಲೆಕೆಡಿಸಿಕೊಳ್ಳದ ಫೋಟೋಗ್ರಾಫರ್‍ಗಳ ಮೇಲೆ ಸಿಟ್ಟು ಬಂತೋ ಏನೋ, ಇದ್ದಕ್ಕಿದ್ದಂತೆ ಏನ್ ಬೇಕಿದ್ರೂ ಮಾಡ್ಕೊಳ್ಳಿ ಅಂತ ಅಭಿಷೇಕ್ ವೇದಿಕೆಯಿಂದ ಕೆಳಗಿಳಿದು ನಡೆದೇ ಬಿಟ್ರು. ಅಭಿ ಸಿಟ್ಟು ಕಂಡ ಐಶ್ ಉಗುಳಲೂ ಆಗದೇ ನುಂಗಲೂ ಆಗದೆ, ಮತ್ತೊಂದಿಷ್ಟು ಹೊತ್ತು ಪೋಸ್ ಕೊಟ್ಟು ಹೊರಟು ಹೋದ್ರು.

Add Comment