ಬ್ರೆಜಿಲ್, ಮೊರಕ್ಕೋಗೆ ಇಂದಿನಿಂದ ಭಾರತದ ಕೊರೊನಾ ಲಸಿಕೆಗಳ ರಫ್ತು

ಕೊರೋನಾ ಸೋಂಕಿಗೆ ದೇಶಾದ್ಯಂತ ಬೃಹತ್ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಿರುವ ಕೇಂದ್ರಸರ್ಕಾರ ಇಂದಿನಿಂದ ವಿವಿಧ ದೇಶಗಳಿಗೆ ವಾಣಿಜ್ಯ ಪೂರೈಕೆಯ ಲಸಿಕೆ ವಿತರಣೆ ಕಾರ್ಯ ಆರಂಭಿಸಿದೆ.
ಮೊರಕ್ಕೋ, ಬ್ರೆಜಿಲ್ ಸೇರಿದಂತೆ ವಿವಿಧ ದೇಶಗಳಿಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನಕ ಅಭಿವೃದ್ಧಿಪಡಿಸಿರುವ ಭಾರತೀಯ ಸೆರ ಸಂಸ್ಥೆಯಿಂದ ಉತ್ಪಾದನೆ ಮಾಡುತ್ತಿರುವ ಕೋವಿಶೀಲ್ಡ್ ಪೂರೈಕೆ ಮಾಡುತ್ತಿದೆ.
ವಿಶ್ವದಲ್ಲಿ ಅತಿ ದೊಡ್ಡ ಔಷಧ ತಯಾರಿಕಾ ಸಂಸ್ಥೆ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಪುಣೆಯ ಭಾರತೀಯ ಸೆರಂ ಸಂಸ್ಥೆ ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದ ಲಸಿಕೆಯನ್ನ ಪೂರೈಕೆ ಮಾಡುವ ಕೆಲಸ ಆರಂಭಿಸಿದೆ.
ಇದಕ್ಕೂ ಮುನ್ನ ಭೂತಾನ್,ಮಾಲ್ಡೀವ್ಸ್,ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗೆ ಕೇಂದ್ರಸರ್ಕಾರ ಉಚಿತವಾಗಿ ಲಸಿಕೆಯನ್ನು ಸರಬರಾಜು ಮಾಡಿತ್ತು.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಘ್ರಾಲ, ವಿವಿಧ ದೇಶಗಳು ಕೇಂದ್ರಸರ್ಕಾರ ಮತ್ತು ಭಾರತೀಯ ಸೆರಂ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅನ್ವಯ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ ಮೊದಲ ಹಂತದಲ್ಲಿ ಮೊರಕ್ಕೋ ಮತ್ತು ಬ್ರೆಜಿಲ್ ಗೆ ಲಸಿಕೆಯನ್ನು ಕಳುಹಿಸಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವದ ಅನೇಕ ದೇಶಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಲಸಿಕೆಯನ್ನು ಪೂರೈಕೆ ಮಾಡಲು ಮುಂದಾಗಿದೆ ಅದರ ಭಾಗವಾಗಿ ವಿವಿಧ ದೇಶಗಳಿಗೆ ಸರಬರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಳೆ ಮತ್ತಷ್ಟು ದೇಶಕ್ಕೆ ಲಸಿಕೆ:
ಇಂದು ಬ್ರೆಜಿಲ್ ಮತ್ತು ಮೊರಕ್ಕೋಗೆ ಲಸಿಕೆಯನ್ನು ಕಳುಹಿಸಿಕೊಡಲಾಗಿದ್ದು ನಾಳೆ ದಕ್ಷಿಣ ಆಫ್ರಿಕಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಗೆ ಲಸಿಕೆ ಪೂರೈಕೆ ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬ್ರೆಜಿಲ್ ನಲ್ಲಿ ಕೊರೋನೋ ಸೋಂಕಿನಿಂದ ಅತಿ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಆದ್ಯತೆ ಮೇರೆಗೆ ಅಗತ್ಯವಿರುವ ದೇಶಗಳಿಗೆ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಘ್ರಾಲ ಹೇಳಿದ್ದಾರೆ.
ಕೆ ಟಿವಿ ಕನ್ನಡ ನವದೆಹಲಿ

Add Comment