ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗ್ರಾ.ಪಂ ಮೀಸಲಾತಿ ಪಟ್ಟಿ ಪ್ರಕಟ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗ್ರಾಮ ಪಂಚಾಯತಿಯ ಮೀಸಲಾತಿ ಪಟ್ಟಿ ಇಂದು ಪ್ರಕಟವಾಗಿದ್ದು 45 ಪಂಚಾಯತಿಗಳ ಮೀಸಲಾತಿ ಪಟ್ಟಿ ಹೊರಬಂದಿದೆ. ಇದಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಗಿರೀಶ್ ಅವರು ಕೆಲವೊಂದು ಪಂಚಾಯತಿಯ 2015ರ ಮೀಸಲಾತಿಯನ್ನು ಹೊರತುಪಡಿಸಿ ಮಿಕ್ಕೆಲ್ಲ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಪಟ್ಟಿ ಹೊರತಂದಿದ್ದಾರೆ. ನಗರದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಈ ಪ್ರಕ್ರಿಯೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಪ್ರಪ್ರಥಮವಾಗಿ ಮೊದಲು ಹತ್ತು ಪಂಚಾಯಿತಿಗೆ ಬಿಸಿಎಂ (ಎ) 10 ಗ್ರಾಮಪಂಚಾಯಿತಿಯಲ್ಲಿ ತಲಾ 5 ಪಂಚಾಯತಿಗಳಿಗೆ ಮಹಿಳಾ ಬಿಸಿಎಂ (ಎ) ಹಾಗೂ ಪುರುಷ ಬಿಸಿಎಂ (ಎ) ನಂತರ ಬಿಸಿಎಂ (ಬಿ) ತಲ ಒಂದು ಒಂದು ಗ್ರಾಮ ಪಂಚಾಯಿತಿಗೆ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು. ಏಕೈಕ ಗ್ರಾಮ ಪಂಚಾಯಿತಿ ಗಂಡಸಿ ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯಿತಿಯನ್ನು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲಾಯಿತು. ನಂತರ ಉಳಿಕೆ ಗ್ರಾಮ ಪಂಚಾಯತಿಗಳಿಗೆ ಸಾಮಾನ್ಯ ಪುರುಷ ಹಾಗೂ ಸಾಮಾನ್ಯ ಮಹಿಳೆಯರ ವಿಂಗಡನೆ ಮಾಡಿ ನಂತರ ಎಲ್ಲಾ ಪಂಚಾಯಿತಿಯ ಉಪಾಧ್ಯಕ್ಷರು ಮೀಸಲಾತಿ ಪ್ರಕಟ ಮಾಡಿದರು.

ಎಸ್ಎಲ್ಎನ್ ಯೋಗೀಶ್ ಕೆ.ಟಿವಿ ನ್ಯೂಸ್, ಅರಸೀಕೆರೆ

ಕೆ.ಟಿವಿ ನ್ಯೂಸ್, ಕನ್ನಡ

Add Comment