ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ನಮ್ಮೆಲ್ಲರ ಹೊಣೆ-ಮಸ್ಕಿ ಸಿಪಿಐ ದೀಪಕ್ ಬೋಸ್ ರೆಡ್ಡಿ ಕರೆ

ರಾಯಚೂರು ಜಿಲ್ಲೆಯ ಮಸ್ಕಿ ನಗರದ ಭ್ರಮರಾಂಬ ದೇವಸ್ಥಾನದ ಸಭಾಭವನದಲ್ಲಿ ನಡೆದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಸಿಪಿಐ ದೀಪಕ್ ಬೋಸ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ವೀರೇಶ್ ಸೌದ್ರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಣ್ಣ ವೀರೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಪಿಐ ದೀಪಕ್ ಬೋಸ್ ರೆಡ್ಡಿ ಅವರು ದೇಶದಲ್ಲಿ ಒಂದು ಲಕ್ಷ ನಲವತ್ತು ಸಾವಿರಕ್ಕಿಂತ ಹೆಚ್ಚಿನ ಜನರು ಬರೀ ರಸ್ತೆ ಅಪಘಾತದಲ್ಲೇ ಸಾಯುತ್ತಾರೆ, ಇದೇ 2021ರ ಜನವರಿ ತಿಂಗಳಲ್ಲಿ ಮಸ್ಕಿ-ಲಿಂಗಸೂರು,ಮಸ್ಕಿ -ಸಿಂಧನೂರ್ ಮುಖ್ಯರಸ್ತೆಯಲ್ಲಿ 10ಕ್ಕಿಂತ ಹೆಚ್ಚು ರಸ್ತೆ ಅಪಘಾತಗಳು ನಡೆದು ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಆದ್ದರಿಂದ ರಸ್ತೆ ನಿಯಮ ಪಾಲನೆ ಕಡೆಗಣಿಸಿದರೆ ಅನಾಹುತ ತಪ್ಪಿದ್ದಲ್ಲ. ಆದ್ದರಿಂದ ರಸ್ತೆ ಅಪಘಾತದಿಂದ ನಿಮ್ಮ ಅಮೂಲ್ಯವಾದ ಜೀವಕ್ಕೆ ಕುಂದು ತಂದುಕೊಳ್ಳಬೇಡಿ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಿ,ಅನುಸರಿಸಿ,ಪಾಲಿಸಿ. ಯಾರು ವಾಹನ ಚಾಲನಾ ಪರವಾನಿಗೆ ಪಡೆದುಕೊಂಡಿಲ್ಲವೊ ಅಂತಹವರು ಆದಷ್ಟು ಬೇಗ ವಾಹನ ಚಾಲನಾ ಪರವಾನಿಗೆ ಪಡೆದುಕೊಳ್ಳಬೇಕು. ವಾಹನ ಚಾಲನಾ ಪರವಾನಿಗೆ ಪಡೆದುಕೊಳ್ಳಲು ಕೇವಲ ಐದು ನೂರು ರೂಪಾಯಿ ಮಾತ್ರ ಇದೆ. ಆದರೆ ಅದನ್ನು ನೀವು ತಿರಸ್ಕರಿಸಿ ವಾಹನ ಚಾಲನೆ ಪಡೆದುಕೊಳ್ಳದೇ ವಾಹನಗಳನ್ನು ಕಾನೂನುಬಾಹಿರವಾಗಿ ನಿಯಮ ಉಲ್ಲಂಘನೆ ಮಾಡಿ ಅತಿವೇಗವಾಗಿ ಚಲಾಯಿಸುವುದು ಕಂಡುಬಂದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಆದ್ದರಿಂದ ತಾವುಗಳು ಯಾರು ವಾಹನ ಚಾಲನಾ ಪರವಾನಿಗೆ ಪಡೆದುಕೊಂಡಿಲ್ಲವೊ ಅಂತಹ 20 ಜನ ಅಥವಾ 40 ಜನ ಇದ್ದರೆ ನಮಗೆ ತಿಳಿಸಿ, ಇಲ್ಲೇ ಮಸ್ಕಿಯಲ್ಲಿ ಆರ್.ಟಿ.ಓ ಅವರನ್ನು ಕರೆಸಿ ನಿಮಗೆ ಇಲ್ಲಿಯೇ ಪರವಾನಿಗೆ ಕೊಡಿಸಲಾಗುವುದು ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕರು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು. ನಂತರ ಮಾತನಾಡಿದ ಹಿರಿಯ ಪತ್ರಕರ್ತರಾದ ವೀರೇಶ್ ಸೌದ್ರಿ ಅವರು ಮಾತನಾಡಿ ಅಪಘಾತಗಳು ತಪ್ಪಿಸಲು ಪೊಲೀಸರು ಸಾಕಷ್ಟು ಕೆಲಸ ಮಾಡುತ್ತಾರೆ. ಅವರಿಗೆ ಸಹಕರಿಸಿ,ಅದು ನಿಮಗೇ ಒಳಿತು ಹಾಗೂ ನಮ್ಮ ಪತ್ರಿಕೆಗಳಲ್ಲಿ ಈ ವರ್ಷದ ಜನವರಿ ತಿಂಗಳಿನಲ್ಲಿ ಬರೀ ಅಪಘಾತದ ವರದಿಗಳೇ ಹೆಚ್ಚಾಗಿ ಪ್ರಕಟವಾಗಿವೆ ಎಂದು ವಿಷಾದಿಸಿದರು.
ನಂತರ ಮಾತನಾಡಿದ ಪಿಎಸ್ಐ ಸಣ್ಣ ವೀರೇಶ್ ರಸ್ತೆಯಲ್ಲಿ ಆ್ಯಂಬೂಲೆನ್ಸ್ ಬಂದರೆ ದಾರಿ ಬಿಟ್ಟು ಜೀವ ಉಳಿಸಿ ಹಾಗೂ ಹೆಲ್ಮೆಟ್ ಬಳಸಿ ವಾಹನ ಚಾಲನೆ ಮಾಡಿ. ಏಕೆಂದರೆ ಸುರಕ್ಷಿತ ಚಾಲನೆ ಇದ್ದರೆ ಜೀವನ ಸುರಕ್ಷಿತವಾಗಿರುತ್ತದೆ. ಅಪಘಾತ ಕಣ್ಣೀರು ತರಿಸಿದರೆ,
ಸುರಕ್ಷತೆ ಉಲ್ಲಾಸ ತರುತ್ತದೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಸಬೇಡಿ,ಕುಡಿದು ವಾಹನ ಚಾಲನೆ ಸಾಯುವುದು ಬೇಡ. ಅಂಗವೈಕಲ್ಯದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ರಸ್ತೆ ನಿಮಯ ಪಾಲನೆ ಮಾಡಲೇಬೇಕು, ಅಪಘಾತಗಳು ನಿರ್ಲಕ್ಷ್ಯತನದಿಂದಲೇ ಸಂಭವಿಸುವುದು ಹೆಚ್ಚು. ನಿಮ್ಮ ವಾಹನಗಳನ್ನು ಇನ್ಸೂರೆನ್ಸ್ ರಿನಿವಲ್ ಮಾಡಿಕೊಳ್ಳಿ, ನಮಗೆ ಗೊತ್ತಿದೆ ಯಾರು ವಾಹನ ಚಾಲನೆ ಪರವಾನಿಗೆ ಪಡೆದುಕೊಂಡಿಲ್ಲ,ಇನ್ಸುರೆನ್ಸ್ ಮಾಡಿಕೊಂಡಿಲ್ಲ ಎಂದು. ಆದ್ದರಿಂದ ಆದಷ್ಟು ಬೇಗನೆ ಪರವಾನಗಿ,ಇನ್ಸೂರೆನ್ಸ್ ಮಾಡಿಸಿಕೊಳ್ಳಬೇಕೆಂದು ಅರ್ಥಮಾಡಿಕೊಳ್ಳಿ,ಏಕೆಂದರೆ ಇನ್ಸೂರೆನ್ಸ್ ಇಲ್ಲದೆ ಅಪಘಾತಕ್ಕೀಡಾದ ಸಂದರ್ಭದಲ್ಲಿ ನೀವುಗಳು ಕೋರ್ಟು- ಕಛೇರಿ ಅಲೆದಾಡುವ ಸಂದರ್ಭದಲ್ಲಿ ನಿಮ್ಮ ಮೇಲೆ ಬೀಳುವ ಪೆನಾಲ್ಟಿ ಲಕ್ಷಾಂತರ ರೂಪಾಯಿ ಆಗಬಹುದು,ಇನ್ಸೂರೆನ್ಸ್ ಇದ್ದರೆ ನಿಮಗೆ ಒಳ್ಳೆಯದು ಎಂದು ಅಮೂಲ್ಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆಟೋಚಾಲಕರು, ಟ್ಯಾಕ್ಸಿ ಚಾಲಕರು, ಕಾರು ಚಾಲಕರು, ಗೂಡ್ಸ್ ವಾಹನ ಚಾಲಕರು ಮುಂತಾದವರು ಭಾಗವಹಿಸಿದ್ದರು.
ಚನ್ನಬಸವ ಹಿರೇಮಠ ಕೆ ಟಿವಿ ಕನ್ನಡ ಮಸ್ಕಿ

Add Comment