ಸಿರವಾರ: ನಿಜಶರಣ ಅಂಬಿಗರ ಚೌಡಯ್ಯರ ಜಯಂತಿ ಸರಳ ಆಚರಣೆ

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 901 ನೆಯ ಜಯಂತಿಯನ್ನು ಪಟ್ಟಣ ಪಂಚಾಯತ್ ಸೇರಿದಂತೆ ಅಂಬಿರ ಚೌಡಯಾ ವೃತ್ತದಲ್ಲಿ ನಾಮಫಲಕಕ್ಕೆ ಪೂಜೆ ಮಾಡಿ ಮಾಲಾರ್ಪಣೆ ಮಾಡುವ ಮೂಲಕ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗಂಗಾಧರ ನಾಯಕ ಸೇರಿದಂತೆ ಶರಣಪ್ಪಗೌಡ, ಚಿಕ್ಕಿ ಸುಗಪ್ಪ ಸಾಹುಕಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕ.ರ.ವೇ ತಾಲ್ಲೂಕಾಧ್ಯಕ್ಷ ಖಾಜನಗೌಡರು “ನಿಜಶರಣ,ಶ್ರೇಷ್ಠ ವಚನಕಾರಾದ ಶರಣಶ್ರೇಷ್ಠ ಶ್ರೀಅಂಬಿಗರ ಚೌಡಯ್ಯನವರ ಸಮಾಜ ಸುಧಾರಣೆ,ಸರ್ವ ಸಮಾನತೆಯ ಮೌಲ್ಯಗಳು ಇಂದಿಗೂ ಸ್ಪೂರ್ತಿದಾಯಕವಾಗಿವೆ. ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಮೌಢ್ಯ,ಡಾಂಭಿಕ ಆಚರಣೆಗಳನ್ನು ವಿರೋಧಿಸುತ್ತಾ ಸಾಮಾಜಿಕ ಪುನರುಜ್ಜೀವನಕ್ಕಾಗಿ ನಿರಂತರ ಶ್ರಮಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು. ಅವರ ತತ್ವ ಅದೇಶಗಳು ಇಂದಿಗೂ ಜೀವಂತವಾಗಿವೆ ಎಂದರು.
ರಾಜು ಕಟ್ಟಿಮನಿ ಕೆ ಟಿ ವಿ ಕನ್ನಡ ಸಿರವಾರ

Add Comment