ಬೆಂಗಳೂರು: ಕಾರು ನಿಲ್ಲಿಸುವ ಬಗ್ಗೆ ಸ್ಥಳೀಯರೊಂದಿಗೆ ಸಿದ್ದರಾಮಯ್ಯ ಬೆಂಬಲಿಗರ ಹೊಡೆದಾಟ!

ಪ್ರತಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಬೆಂಗಳೂರಿನ ಮನೆ ಎದುರು ಕಾರು ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬೆಂಬಲಿಗರು ಮತ್ತು ಎದುರು ಮನೆಯವರ ನಡುವೆ ಜಗಳ,ವಾಕ್ಸಮರ ನಡೆದು ಕೊನೆಗೆ ಹೊಡೆದಾಟ ನಡೆದಿದೆ.
ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದಿದ್ದ ಅವರ ಬೆಂಗಳೂರಿನ ನಿವಾಸಕ್ಕೆ ಇಂದು ಬಂದಿದ್ದರು. ಆದರೆ ಕಾರು ನಿಲ್ಲಿಸುವ ಕ್ಷುಲ್ಲಕ ಕಾರಣಕ್ಕಾಗಿ ಎದುರು ಮನೆಯವರ ಜೊತೆ ಸಿದ್ದರಾಮಯ್ಯ ಬೆಂಬಲಿಗರು ಜಗಳ ಆರಂಭಿಸಿದರು. ಕೊನೆಗೆ ಈ ಜಗಳ ಹೊಡೆದಾಟಕ್ಕೂ ತಿರುಗಿತು. ನಂತರ ಸುದ್ದಿ ತಿಳಿದ ಹೈಗ್ರೌಂಡ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲು ಪರಿಶೀಲನೆ ನಡೆಸಿದ್ದಾರೆ.
ಕೆ ಟಿವಿ ಕನ್ನಡ ಬೆಂಗಳೂರು

Add Comment