ಶಿವಮೊಗ್ಗದ ಹುಣಸೋಡು ಸ್ಫೋಟದಲ್ಲಿ ಸತ್ತವರು ಬರೀ 6 ಎಂದು ಸುಳ್ಳು ಹೇಳಿ ಅಕ್ರಮ ಕಲ್ಲುಗಣಿಗಾರಿಕೆಗೆ ಸಾಥ್?

ಕಳೆದ ಗುರುವಾರ ರಾತ್ರಿ ಶಿವಮೊಗ್ಗ ತಾಲ್ಲೂಕಿನ‌ ಹುಣಸೋಡು ಕಲ್ಲುಕ್ವಾರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್ ನ ತನಿಖಾ ತಂಡ ತನಿಖೆ ಆರಂಭಿಸಿದೆ,ತನಿಖೆಯಲ್ಲಿ ಯಾರು ತಪ್ಪಿತಸ್ಥರು ಎಂದು ತಿಳಿದ ಮೇಲೆ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗಕ್ಕೆ ಹೆಲಿಪ್ಯಾಡ್ ಮೂಲಕ ಪ್ರಯಾಣಿಸಿ ಆನಂತರ ಶಿವಮೊಗ್ಗ ನಗರದ ಪ್ರವಾಸೀ ಮಂದಿರಕ್ಕೂ ಸಹ ಹೋಗದೆ ನೇರವಾಗಿ ಗುರುವಾರ ರಾತ್ರಿ ಭೀಕರ,ವಿಚಿತ್ರ ಕಲ್ಲುಕ್ವಾರಿ ಸ್ಫೋಟ ನಡೆದ ಶಿವಮೊಗ್ಗ ತಾಲ್ಲೂಕಿನ ಹುಣಸೋಡು ಕಲ್ಲುಕ್ವಾರಿ ಸ್ಫೋಟ ನಡೆದ ಸ್ಥಳಕ್ಕೆ ಪರಿಶೀಲನೆ ನಡೆಸಲು ಹೊರಟರು.
ಹುಣಸೋಡು ಕಲ್ಲುಕ್ವಾರಿ ಸ್ಫೋಟ ನಡೆದ ಸ್ಥಳದಲ್ಲಿ ಅದಾಗಲೇ ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ,ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಶೋಕ್ ನಾಯಕ್,ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸ್ಥಳದಲ್ಲಿದ್ದರು.
ಸಿಎಂ ಯಡಿಯೂರಪ್ಪ ಹುಣಸೋಡು ಸ್ಫೋಟದ ಸ್ಥಳಕ್ಕೆ ಹೋಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಎಸ್ಪಿ ಮತ್ತು ಡೀಸಿ ಅವರು ಸ್ವಾಗತಿಸಿದರು. ನಂತರ ಘಟನೆಯ ಬಗ್ಗೆ ಇಬ್ಬರೂ ಅಧಿಕಾರಿಗಳು ಕೂಲಂಕುಶವಾಗಿ ಮುಖ್ಯಮಂತ್ರಿಗೆ ವಿವರಿಸಿದರು.
ಆಗ ಸಿಎಂ ಯಡಿಯೂರಪ್ಪ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ನಿಮಗೆ ಕಿಂಚಿತ್ತಾದರೂ ಏಕೆ ಗೊತ್ತಿರಲಿಲ್ಲವೇನು? ಎಂದು ಎಸ್ಪಿ ಮತ್ತು ಡೀಸಿಗೆ ಪ್ರಶ್ನಿಸಿದರು.
ಆಗ ಮಾತನಾಡದ ಇಬ್ಬರೂ ಅಧಿಕಾರಿಗಳನ್ನು ನೋಡಿ ಸಿಎಂ ಕಡುಕೋಪಗೊಂಡರು.
ಮತ್ತೊಂದೆಡೆ ಸ್ಥಳೀಯ ಶಾಸಕ ಅಶೋಕ್ ನಾಯಕ್ ಮತ್ತು ತಮ್ಮ ಪುತ್ರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಕೊನೆಯಲ್ಲಿ ಕರೆದು ಏನ್ರಪ್ಪ ನಿಮಗೂ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ಗೊತ್ತಿರಲಿಲ್ಲವೇನು? ಆ ಸಿದ್ರಾಮಯ್ಯ ಪ್ರತಿಪಕ್ಷ ನಾಯಕ ಅಂತ ನಮ್ಮ ಸರ್ಕಾರದ ಮೇಲೆ ಅಕ್ರಮ ಗಣಿಗಾರಿಕೆ ಪ್ರೋತ್ಸಾಹ ಕೊಡ್ತಿದಾರೆ ಅಂತ ಸುಳ್ಳು ಹೇಳ್ತಿದ್ದಾರೆ,ಈ ವಿಷಯ ಪ್ರಧಾನಿ ಗಮನಕ್ಕೂ ಹೋಗಿದೆ,ಆದ್ದರಿಂದ ಅಧಿಕಾರಿಗಳ ಜೊತೆ ಬಿಜೆಪಿ ಸ್ಥಳೀಯ ಸಂಸದರು,ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಸಹಕರಿಸಿ ತಪ್ಪಿತಸ್ಥರನ್ನು ಬಂಧಿಸಲು ನೆರವಾಗಿ ಎಂದು ಸಿಎಂ ಅಲ್ಲಿದ್ದ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರಿಗೂ ಸೇರಿಸಿ ಹೇಳಿದರು.
ಆದಾಗ್ಯೂ ಕಡೆಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ ಈ ಕಲ್ಲುಕ್ವಾರೆ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡು 6 ಜನರ ಕುಟುಂಬಗಳಿಗೆ ನಮ್ಮ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಸ್ಫೋಟಕ್ಕೆ ಕಾರಣರಾದವರನ್ನು ಮುಲಾಜಿಲ್ಲದೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಹೇಗೆ ನಡೆಯುತ್ತಿತ್ತು ಎಂಬ ಬಗ್ಗೆ ವರದಿ ನೀಡಲು ಡೀಸಿ ಮತ್ತು ಎಸ್ಪಿಗೆ ಆದೇಶಿಸಿದ್ದೇನೆ ಎಂದರು.
ಆದರೆ ನಿಜಕ್ಕೂ ಹುಣಸೋಡು ಕಲ್ಲು ಕ್ವಾರೆ ಸ್ಫೋಟ ಪ್ರಕರಣದಲ್ಲಿ ಗುರುವಾರ ರಾತ್ರಿಯೇ 15 ಜನರು ಸತ್ತಿದ್ದಾರೆ ಎಂದು ಸತ್ಯಾಂಶ ವರದಿ ಬಂದರೂ ಬಳಿಕ 8 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸಾರಿಹೇಳಿದರು‌. ಆದರೆ ಇದೀಗ 6 ಜನರು ಮಾತ್ರ ಈ ವಿಚಿತ್ರ ಭಯಾನಕ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳಿ ಪ್ರಕರಣವನ್ನು ಪೊಲೀಸರು ಮತ್ತು ಅಧಿಕಾರಿಗಳೇ ಮುಚ್ಚಿಹಾಕುತ್ತಿದ್ದಾರಾ? ಎಂಬ ಸ್ಪಷ್ಟ ಅನುಮಾನಗಳು ಭುಗಿಲೆದ್ದಿವೆ. ಆದರೆ ನಿಜಕ್ಕೂ ಹುಣಸೋಡು ಕಲ್ಲು ಕ್ವಾರೆ ಸ್ಫೋಟದಲ್ಲಿ ಸತ್ತವರ ಸಂಖ್ಯೆ 15!
ಏಕೆಂದರೆ ಸತ್ಯಕ್ಕೆ ಸಾವಿಲ್ಲ!!!
ಮತ್ತೊಂದೆಡೆ ಇಲ್ಲಿಗೆ ಬರುವ ಮುನ್ನ ಸಿಎಂ ಯಡಿಯೂರಪ್ಪ ಅವರು ಹೇಳಿಕೆ ನೀಡಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಮಾಡುವವರು ಸಕ್ರಮ‌ ಗಣಿಗಾರಿಕೆ ಮಾಡಲು ಸರ್ಕಾರದಿಂದ ಅನುಮತಿ ಪಡೆಯಿರಿ ಎಂದು ಹೇಳಿದ್ದರು.
ಆದರೆ ಈ ಸಿಎಂ ಹೇಳಿಕೆ ಕೇಳಿದರೆ ಬಿಜೆಪಿ ಸರ್ಕಾರವೇ ಅಕ್ರಮ ಗಣಿಗಾರಿಕೆ ನಡೆಸಲು ಸಕ್ರಮ ಗಣಿಗಾರಿಕೆ ಮಾಡಿಕೊಳ್ರಿ ಬೇಗ ಎಂದು ಹೇಳುತ್ತಿದೆಯಲ್ಲವೇ? ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತು ಮುಂದುವರೆಸಿ ಹುಣಸೋಡು ಸ್ಫೋಟದ ಬಗ್ಗೆ ಬಿಜೆಪಿ ಸಂಸದರು,ಶಾಸಕರು,ಸಿಎಂಗೆ ಅಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ನಿಜಕ್ಕೂ ಗೊತ್ತೇ ಇರಲಿಲ್ಲವೇನು? ಎಂದು ಗಂಭೀರ ಆರೋಪ ಮಾಡಿದ್ದರು.
ಕೆ ಟಿವಿ‌ ಕನ್ನಡ ಶಿವಮೊಗ್ಗ

Add Comment