ಡ್ರಗ್ಸ್ ಕೇಸ್: ಸು.ಕೋರ್ಟಿನಿಂದ ಜಾಮೀನು ಸಿಕ್ಕರೂ ನಟಿ ರಾಗಿಣಿ ಇನ್ನೂ ರಿಲೀಸ್ ಆಗಿಲ್ಲ!

ಡ್ರಗ್ಸ್ ಜಾಲದ ಕೇಸಿನಲ್ಲಿ‌ ಸಿಸಿಬಿ ಪೊಲೀಸರಿಗೆ ವಿಚಾರಣೆಗೆ ಬೇಕಾದ ಕಾರಣ ಬೆಂಗಳೂರಿನ‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಂಗಳೂರಿನ NDPS ಕೋರ್ಟ್ ಆದೇಶದಂತೆ ಈವರೆಗೂ ಸುದೀರ್ಘ ಅವಧಿಯವರೆಗೂ ನ್ಯಾಯಾಂಗ ಬಂಧನದಲ್ಲಿದ್ದ ಕನ್ನಡದ ನಂ.1 ನಟಿ ರಾಗಿಣಿ ದ್ವಿವೇದಿ ಅವರಿಗೆ ಕೊನೆಗೂ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ ಈ ಆದೇಶ ಬಂದು 3 ದಿನಗಳಾದರೂ ಇನ್ನೂ ನಟಿ ರಾಗಿಣಿ ದ್ವಿವೇದಿ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
ಕಾರಣ ಜಾಮೀನಿಗೆ 3 ಲಕ್ಷ ರೂ. ಮತ್ತು ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಲು ಬೆಂಗಳೂರಿನ NDPS ಕೋರ್ಟ್ ಜಡ್ಜ್ ಜಿ.ಎಂ.ಶೀನಪ್ಪ ಸೋಮವಾರದವರೆಗೂ ಕಾಲಾವಕಾಶ ಇದೆ ಎಂದು ಹೇಳಿದ್ದಾರೆ. ಇದರಿಂದ ಸೋಮವಾರವೂ ಇದೇ ಉತ್ತರ ಬಂದರೆ ಮಂಗಳವಾರ ಭಾರತದ ಗಣರಾಜ್ಯೋತ್ಸವ ಸರ್ಕಾರಿ ರಜೆ ಕಳೆದು ಬುಧವಾರವೇ ರಾಗಿಣಿಗೆ ಜಾಮೀನು ಆದೇಶದಿಂದ ಬಿಡುಗಡೆಯ ಭಾಗ್ಯ ಸಿಗಲಿದೆ ಎಂದು ನುರಿತ ವಕೀಲರು ಕೆ ಟಿವಿ ಕನ್ನಡ ಚಾನೆಲ್ ಗೆ ತಿಳಿಸಿದ್ದಾರೆ.
ಕೆ ಟಿವಿ ಕನ್ನಡ ಬೆಂಗಳೂರು

Add Comment