ಖಾತೆ ಹಂಚಿಕೆ ಅತೃಪ್ತರಿಗೆ-ಯತ್ನಾಳ್ ಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದ ಕಟೀಲ್!

ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಚಿವರಿಗೆ ಖಾತೆ ಹಂಚಿಕೆ ಅಥವಾ ಖಾತೆ ಹಂಚಿಕೆ ಪುನಾರಚನೆ ಮಾಡುವುದು ಮುಖ್ಯಮಂತ್ರಿಗಳಿಗೆ ಇರುವ ಹಕ್ಕು,ಅದನ್ನು ಯಾರೂ ಪ್ರಶ್ನಿಸಲು ಆಗಲ್ಲ,ಆದರೆ ಖಾತೆ ಹಂಚಿಕೆ ಬಗ್ಗೆ ತಮ್ಮ ಅತೃಪ್ತಿ ಹೇಳಿಕೊಳ್ಳಲು ಸಚಿವರಿಗೆ ಸ್ವಾತಂತ್ರ್ಯವಿದೆ,ಆದರೆ ಸಚಿವರು ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಚಿಕ್ಕಮಗಳೂರು ರೆಸಾರ್ಟ್ ಅತೃಪ್ತರ ರಹಸ್ಯ ಸಭೆ ಬಗ್ಗೆ ಎಚ್ಚರಿಸಿದರು.
ಇದೇ ವೇಳೆ ವಿಜಯಪುರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂಪುಟ ಸೇರಲು ಮೂವರು ಸಚಿವರು ಸಿಎಂ ಯಡಿಯೂರಪ್ಪ ಅವರಿಗೆ ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೆ ಟಿವಿ ಕನ್ನಡ ಪ್ರಶ್ನಿಸಿದಾಗ ಕಟೀಲ್ ಹೀಗೆಂದರು : ನೋಡಿ..ಈ ಬಗ್ಗೆ ಯತ್ನಾಳ್ ಅವರಿಗೆ ರಾಜ್ಯ ಘಟಕದಿಂದ ಶಿಸ್ತುಕ್ರಮದ ನೋಟಿಸ್ ನೀಡುತ್ತದೆ. ಬಳಿಕ ಈ ಬಗ್ಗೆ ಕೇಂದ್ರದ ಬಿಜೆಪಿ ಘಟಕದ ತೀರ್ಮಾನಕ್ಕೆ ಬಿಡುತ್ತೇವೆ. ಕೇಂದ್ರದ ಬಿಜೆಪಿ ಘಟಕ ಶಿಸ್ತುಕ್ರಮ ಜರುಗಿಸುವುದು,ಬಿಡುವುದು ನಮಗೆ ಗೊತ್ತಿಲ್ಲ ಎಂದು ದೆಹಲಿಯತ್ತ ಬೆರಳು ತೋರಿಸಿ ರಾಷ್ಟ್ರೀಯ ಬಿಜೆಪಿ ಘಟಕದಿಂದಲೇ ಶಾಸಕ ಯತ್ನಾಳ್ ಅವರ ಮೇಲೆ ಶಿಸ್ತುಕ್ರಮ ಎಂದು ಸೂಚನೆ ನೀಡಿದರು.
‌‌ಕೆ ಟಿವಿ ಕನ್ನಡ ಬೆಂಗಳೂರು

Add Comment