2017ನೇ ಕನ್ನಡ ಬಿಗ್ ಬಾಸ್ ಸ್ಪರ್ಧಿ,ಖ್ಯಾತ ನಟಿ ಜಯಶ್ರೀ ಆತ್ಮಹತ್ಯೆ!

2017ನೇ ಸಾಲಿನ ಕನ್ನಡ ಬಿಗ್ ಬಾಸ್ ಸ್ಪರ್ಧಿ ಹೆಸರಾಂತ ಸುಂದರಿ ಸ್ಯಾಂಡಲ್ ವುಡ್ ನಟಿ ಜಯಶ್ರೀ ರಾಮಯ್ಯ ಅವರು ಭಾನುವಾರ ರಾತ್ರಿ ಬೆಂಗಳೂರಿ‌ನ ಮಾಗಡಿ ರಸ್ತೆಯ ಪ್ರಗತಿಲೇಔಟ್ ನ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.
ನೋಡಲು ಅತ್ಯಂತ ಸುಂದರಿಯಾಗಿದ್ದರಿಂದ ‘ಉಪ್ಪು ಹುಳಿ ಖಾರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವೀಕ್ಷಕರ ಪ್ರೀತಿಗೆ ಪಾತ್ರವಾಗಿದ್ದ ನಟಿ ಜಯಶ್ರೀ ರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಸಿಗದೆ ನಿರಾಸೆಗೊಂಡಿದ್ದರು. ಅಲ್ಲದೆ ತನ್ನ ಮಾವ ತನ್ನ ಆಸ್ತಿಯನ್ನು ನನ್ನ ನಕಲಿ ಸಹಿ ಮಾಡಿಸಿಕೊಂಡು ನನ್ನ ಪಾಲಿನ ಪಿತ್ರಾರ್ಜಿತ ಆಸ್ತಿಯನ್ನು ಕಿತ್ತುಕೊಂಡಿದ್ದಾರೆ ಎಂದು ನಟಿ ಜಯಶ್ರೀ ರಾಮಯ್ಯ ಕಣ್ಣೀರು ಹಾಕಿ ಸೋಶಿಯಲ್ ಮೀಡಿಯಾದಲ್ಲಿ(ಸಾಮಾಜಿಕ ಜಾಲತಾಣದಲ್ಲಿ) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು‌‌. ಆದರೆ ಆಗ ಸ್ವತಃ‌ ಕನ್ನಡ ಬಿಗ್ ಬಾಸ್ ಆಂಕರ್ ನಟ ಕಿಚ್ಚ ಸುದೀಪ್ ಸಾಂತ್ವಾನ ಹೇಳಿ ಏನಾದರೂ ಹಣಕಾಸಿನ ನೆರವು ಬೇಕಾದರೆ ಕೇಳು ಆದರೆ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಎಚ್ಚರಿಸಿದ್ದರು.
ಆದರೆ ಆಗ ಸಾವಿನಿಂದ ಬಚಾವ್ ಆಗಿ ಸೇಫ್ ಆದರೂ ಇತ್ತೀಚಿನ ದಿನಗಳಲ್ಲಿ ಮತ್ತೆ ಆಸ್ತಿ ವಿವಾದ ಮತ್ತು ಸ್ಯಾಂಡಲ್ ವುಡ್,ಕಿರುತೆರೆಯಲ್ಲಿ ನಟಿಸಲು ಅವಕಾಶ ಸಿಗುತ್ತಿಲ್ಲ ಎಂದು ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದರು.
ಆದ್ದರಿಂದ ಭಾನುವಾರ ರಾತ್ರಿ ಬೆಂಗಳೂರಿನ ಮಾಗಡಿ ರಸ್ತೆಯ ಪ್ರಗತಿಲೇಔಟ್ ನಲ್ಲಿ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಸುರಸುಂದರಿ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಯಶ್ರೀ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇತ್ತೀಚಿಗಷ್ಟೆ ಒಂದು ಫೇಕ್ ಬುಕ್ ವಿಡಿಯೋದಲ್ಲಿ ತನಗೆ ಜೀವನ ಸಾಕಾಗಿದೆ,ತನಗೆ ಮರ್ಸಿ ಕಿಲ್ಲಿಂಗ್ ಕೊಡಿ ಸಾಕು ಎಂದು ತಿಳಿಸಿದ್ದರು.
ಆದರೆ ಫೇಸ್ ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಜಯಶ್ರೀ ಪಬ್ಲಿಸಿಟಿ ಪಡೆಯಲು ಹೀಗೆ ಮಾಡುತ್ತಿದ್ದಾಳೆ ಎಂದು ಅನೇಕ ಈಡಿಯಟ್ ಗಳು ಕೆಟ್ಟದಾಗಿ ಪೋಸ್ಟ್ ಮಾಡಿದ್ದರು.
ಇದರಿಂದ ಆಗ ಮನನೊಂದಿದ್ದ ನಟಿ ಜಯಶ್ರೀ ತಾನು ಯಾರ ಬಳಿಯೂ ಒಂದು ರೂಪಾಯಿ ಹಣ ಕೇಳಿಲ್ಲ,ಬಯಸಿಲ್ಲ,ಆದರೆ ನನಗೆ ನನ್ನ ಆಸ್ತಿ ಬಂದರೆ ಸಾಕು,ನಾನು ನಟ ಸುದೀಪ್ ಅವರಿಂದಲೂ ಆರ್ಥಿಕ ಸಹಾಯ ಕೇಳಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.‌
ಇದೀಗ ಭಾನುವಾರ ರಾತ್ರಿ ಮತ್ತೆ ಮಾನಸಿಕ ಖಿನ್ನತೆಯಿಂದ ಬಳಲಿ ನಟಿ ಜಯಶ್ರೀ ಬಹುಷಃ ಆಸ್ತಿಯನ್ನು ತನ್ನ ಮಾವ ನಕಲಿ ಸಹಿ ಬಳಸಿ ಮೋಸ ಮಾಡಿದ್ದಾರೆ ಎಂದು ಖಿನ್ನರಾಗಿ ಮಾಗಡಿ ರಸ್ತೆಯ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ನೆಪಮಾತ್ರಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರ? ಎಂಬ ಅನುಮಾನವನ್ನು ಸಾರ್ವಜನಿಕರು ಮತ್ತು ನಟಿ ಜಯಶ್ರೀ ರಾಮಯ್ಯ ಅವರ ಹಿತೈಶಿಗಳು,ಆಪ್ತರು ವ್ಯಕ್ತಪಡಿಸಿದ್ದಾರೆ.
ಆದರೆ ಮಾನಸಿಕ ಖಿನ್ನತೆಗಾಗಿ ಕೌನ್ಸಿಲಿಂಗ್ ಗೆ ಒಳಪಟ್ಟಿದ್ದ ನಟಿ ಜಯಶ್ರೀ ರಾಮಯ್ಯ ಈಗ ದಿಢೀರ್ ಆತ್ಮಹತ್ಯೆ ಮಾಡಿಕೊಳ್ಳಲು ಆಸ್ತಿ ವಿವಾದವೇ ಕಾರಣ ಎನ್ನಲಾಗಿದೆ.
ಆದರೆ ಈ ಬಗ್ಗೆ ಹಿಂದೆ ವಿಡಿಯೋ ಮಾಡಿದ್ದ ನಟಿ ಜಯಶ್ರೀ ತನಗೆ ಆರ್ಥಿಕ ಸಮಸ್ಯೆಯೇನೂ ಇಲ್ಲ,ಆದರೆ ನಾನು ಹಿಂದೆ ಚಿಕ್ಕವಯಸ್ಸಿನಲ್ಲಿ ಆದ ಮರೆಯಲಾಗದ ಘಟನೆಯಿಂದ ನಾನು ನೊಂದಿದ್ದೇನೆ ಎಂದು ತಿಳಿಸಿದ್ದರು.
ಈ ಹೇಳಿಕೆ ಬಗ್ಗೆಯೂ ಸಹ ಬೆಂಗಳೂರಿನ ಸಿಸಿಬಿ ಪೊಲೀಸರು ಕ್ಷಿಪ್ರರೀತಿಯಲ್ಲಿ ತನಿಖೆ ಮಾಡಲೇಬೇಕಾದ ಪ್ರಕರಣವಾಗಿದೆ.
ಕೆ ಟಿವಿ ಕನ್ನಡ ಬೆಂಗಳೂರು

Add Comment