ಡ್ರಗ್ಸ್ ಕೇಸ್: ಸು.ಕೋರ್ಟ್ ಜಾಮೀನಿನ ಷರತ್ತುಗಳನ್ನು ಪೂರೈಸಿ ಜೈಲಿನಿಂದ ಬಿಡುಗಡೆಯಾದ ನಟಿ ರಾಗಿಣಿ ದ್ವಿವೇದಿ

ಡ್ರಗ್ಸ್ ನಶೆಯೇರಿಸಿದ ಆರೋಪದ ಮತ್ತು ಡ್ರಗ್ಸ್ ಅನ್ನು ವ್ಯವಸ್ಥಿತವಾಗಿ ರಾತ್ರಿ ಪಾರ್ಟಿಗಳಲ್ಲಿ ಸರಬರಾಜು ಮಾಡುತ್ತಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರ ವಿಚಾರಣೆಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೋರ್ಟ್ ಆದೇಶದಂತೆ ನ್ಯಾಯಾಂಗ ವಿಚಾರಣೆಗೆ ಬಂಧನದಲ್ಲಿದ್ದ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೆ ಬಿಡುಗಡೆಯ ಭಾಗ್ಯ ದೊರೆತಿದೆ.
ನವದೆಹಲಿಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಷರತ್ತುಬದ್ಧ ಜಾಮೀನು ದೊರೆತರೂ ಬೆಂಗಳೂರಿನ ಎನ್.ಡಿ.ಎಫ್.ಎಸ್.ಕೋರ್ಟಿಗೆ 3 ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಬಿಡುಗಡೆಯಾಗದೇ ಕೆಲವು ದಿನಗಳವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ನಿನ್ನೆ ಸಂಜೆ ಬಿಡುಗಡೆಯ ಭಾಗ್ಯ ದೊರಕಿತು.
ಇದರಿಂದ 145 ದಿನಗಳ ಸುದೀರ್ಘ ಅವಧಿಯವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಸೋಮವಾರ ಸಂಜೆ
ಸುಪ್ರೀಂಕೋರ್ಟ್ ಆದೇಶದಂತೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿ ರಾತ್ರಿ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ ಹೀಗೆಂದರು: ನಾನು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರೂ ಮತ್ತೆ ನನ್ನ ಕುಟುಂಬದವರ ಬೆಂಬಲದಿಂದ jurisidiction ಮೇಲೆ ನನಗೆ ಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿತ್ತು.
ಆದ್ದರಿಂದ ನಾನು ಇಷ್ಟು ದಿನ ಜೈಲಿನಲ್ಲಿ ತಾಳ್ಮೆಯಿಂದ ಇದ್ದು ಒಳ್ಳೆಯ jurisidictionಗೋಸ್ಕರ ಕಾದು ಎಲ್ಲಾ ಕಷ್ಟಗಳನ್ನು ಧೈರ್ಯದಿಂದ ಎದುರಿಸಿದೆ‌. ಅದರಂತೆ ನನಗೆ ಈಗ (ಸುಪ್ರೀಂಕೋರ್ಟಿನಲ್ಲಿ) jurisidictionನಿಂದ ನ್ಯಾಯ ಸಿಕ್ಕು ಜೈಲಿನಿಂದ ಬಿಡುಗಡೆಯಾಗಿ ನನ್ನ ಕುಟುಂಬವನ್ನು ನೋಡಲು ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದರು.
ರಾತ್ರಿ ಸ್ಯಾಂಡಲ್ ವುಡ್ ನ ನಂ.1 ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಕೇಸಿನಲ್ಲಿ ನ್ಯಾಯಾಂಗ ಬಂಧನದಿಂದ ಸುಪ್ರೀಂಕೋರ್ಟ್ ಆದೇಶದಂತೆ ಬಿಡುಗಡೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಭಾರಿ ಜನಸ್ತೋಮ ಪರಪ್ಪನ ಅಗ್ರಹಾರ ಜೈಲಿನ ಬಳಿ ನೆರೆದಿತ್ತು. ಇದರಿಂದ ಮಾಧ್ಯಮದವರು ಬಿಡುಗಡೆಯ ಹಕ್ಕಿಯಾದ ನಟಿ ರಾಗಿಣಿ ದ್ವಿವೇದಿಯ ಹೇಳಿಕೆ ಪಡೆಯಲು ಪೇಚಾಡಬೇಕಾಯಿತು.
ಕೆ ಟಿವಿ ಕನ್ನಡ ಬೆಂಗಳೂರು

Add Comment