ಡಿಕೆಶಿಗೆ ಕೆಪಿಸಿಸಿ ಸಾರಥ್ಯ – ಸಿದ್ದು ಮೂಗುದಾರ

1 Star2 Stars3 Stars4 Stars5 Stars (1 votes, average: 5.00 out of 5)
Loading...

ಡಿಕೆಶಿಗೆ ಕೆಪಿಸಿಸಿ ಸಾರಥ್ಯ – ಸಿದ್ದು ಮೂಗುದಾರ

ಕಾಂಗ್ರೆಸ್‍ನಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಕೈ ಮೇಲಾಗಿದೆ. ಅಳೆದು ತೂಗಿ ನೋಡಿ ಕೊನೆಗೂ ಡಿಕೆಶಿವಕುಮಾರ್ ಕೈಗೆ ಕಾಂಗ್ರೆಸ್ ರಾಜ್ಯಘಟಕದ ಸಾರಥ್ಯ ನೀಡಲಾಗಿದೆ. ಕೆಲವೇ ನಿಮಿಷಗಳ ಹಿಂದಷ್ಟೇ ಕಾಂಗ್ರೆಸ್ ಹೈಕಮಾಂಡ್ ಈ ಅಧಿಕೃತ ಘೋಷಣೆ ಮಾಡಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಖುಷಿಯಲ್ಲಿ ತೇಲಾಡ್ತಿದ್ದಾರೆ.

ಆದರೆ, ಸಿದ್ದರಾಮಯ್ಯ ರಾಜೀನಾಮೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಯಲಿದ್ದಾರೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದು ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ಡಿಕೆಶಿಗೆ ಸಂಪೂರ್ಣ ಅಧಿಕಾರ ಸಿಗದಂತೆಯೂ ಸಿದ್ದು ನೋಡಿಕೊಂಡಿದ್ದಾರೆ. ಕೆಪಿಸಿಸಿಗೆ ಮೂವರು ಕಾರ್ಯಾಧ್ಯಕ್ಷರನ್ನು ನೇಮಿಸಲಾಗಿದೆ. ಪ್ರಕಾಶ್ ಖಂಡ್ರೆ, ಸಲೀಂ ಅಹ್ಮದ್ ಮತ್ತು ಸತೀಶ್ ಜಾರಕಿಹೊಳಿಗೆ ಅವಕಾಶ ಸಿಗುವಂತೆ ಸಿದ್ದು ನೋಡಿಕೊಂಡಿದ್ದಾರೆ. ಮೂವರು ಕಾರ್ಯಾಧ್ಯಕ್ಷರ ನೇಮಕವೆಂದರೆ ಡಿಕೆಶಿಗೆ ಅರ್ಧ ಅಧಿಕಾರ ಎಂದೇ ಅರ್ಥೈಸಲಾಗ್ತಿದೆ.

ಡಿಕೆಶಿ ನೇಮಕಕ್ಕೆ ಹೈಕಮಾಂಡ್ ಮುಂದಾದಾಗಲೇ ಸಿದ್ದು ಇದಕ್ಕೆ ಅಪಸ್ವರ ಎತ್ತಿದ್ದರು. ಡಿಕೆಶಿಗೆ ಪಟ್ಟ ಕಟ್ಟುವುದಾದರೆ ಕಟ್ಟಿ, ಆದರೆ ಎಲ್ಲದಕ್ಕೂ ಹೈಕಮಾಂಡೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಜೊತೆಗೆ ಕಾರ್ಯಾಧ್ಯಕ್ಷರ ನೇಮಕಕ್ಕೂ ಪಟ್ಟು ಹಿಡಿದಿದ್ದರು. ಇದೀಗ ಮೂವರೂ ಸಿದ್ದು ಬಣದಿಂದಲೇ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರೋದ್ರಿಂದ ಸಿದ್ದು ಪವರ್ ಹೆಚ್ಚಾಗಿದೆ.

Add Comment