ನಮ್ಮಲ್ಲಿ ಯಾರಿಗೂ ಭಾಷಾಭಿಮಾನವಿಲ್ಲ-ಡಿ ಬಾಸ್ ಹೇಳಿಕೆ

ನಮ್ಮಲ್ಲಿ ಯಾರಿಗೂ ಭಾಷಾಭಿಮಾನವಿಲ್ಲ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ತೆಲುಗಿನಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆಗೆ ಒಪ್ಪದಿರುವ ಕಾರಣಕ್ಕೆ ಇಂದು ಫಿಲ್ಮ್ ಚೇಂಬರ್ ಗೆ ದೂರು ನೀಡಲು ಬಂದ ಸಮಯದಲ್ಲಿ ದಚ್ಚು ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಮಲ್ಲಿ ಯಾರಿಗೂ ಭಾಷಾಭಿಮಾನ ಇಲ್ಲ. ಇದನ್ನು ನೇರವಾಗಿ ಹೇಳ್ತೀನಿ, ನಾವು ಬೇರೆ ರಾಜ್ಯಗಳಿಗೆ ಹೋದರೇ ಅಲ್ಲಿ ಭಾಷೆಯನ್ನೇ ನಾವು ಮಾತನಾಡುತ್ತೇವೆ ಹೊರತು ನಾವು ಕನ್ನಡವನ್ನು ಮಾತನಾಡುವುದಿಲ್ಲ. ಇನ್ನೂ ಹೀಗೆ ಆಗುವುದರಿಂದ ನಮಗೆ ಹೊಡೆತ ಬೀಳುತ್ತದೆ ಎಂದು ಹೇಳಿದರು.

Add Comment