ರಾಬರ್ಟ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗ್ತೀರಾ!

ಅವರವರ ಸಿನಿಮಾವನ್ನು ಕಾಪಾಡಿಕೊಳ್ಳುವ ಜವಬ್ದಾರಿ ಅವರದ್ದೇ ಆಗಿರುತ್ತೆ. ನಾನು ನನ್ನ ಸಿನಿಮಾವನ್ನು ಕಾಪಾಡಿಕೊಂಡು ಬಂದಿದ್ದೇನೆ. ಅದೇ ರೀತಿ ಬೇರೆಯವರೆಗೂ ಸಹ ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಂತಹ ತಾಕತ್ತನ್ನು ದೇವರು ಅವರಿಗೂ ಕೊಟ್ಟಿದ್ದಾನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಿಚ್ಚ, ರಾಬರ್ಟ್ ಸಿನಿಮಾ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ತಮ್ಮ ಅನಿಸಿಕೆಯನ್ನು ಹಚಿಕೊಂಡರು. ನಾನು ಇನ್ನೊಬ್ಬರ ಸಿನಿಮಾ ಬಗ್ಗೆ ಮಾತನಾಡಲ್ಲ. ಯಾಕಂದ್ರೆ ಇನ್ನೊಬ್ಬರ ಸಿನಿಮಾವನ್ನು ನಿಭಾಯಿಸುವಷ್ಟು ದೊಡ್ಡ ಕಲಾವಿದ ನಾನಲ್ಲ. ಒಂದು ಸಿನಿಮಾ ಮಾಡಿದ ಮೇಲೆ ಅದು ನನ್ನ ಜವಬ್ದಾರಿ. ನನ್ನ ಸಿನಿಮಾವನ್ನು ನಾನು ಕಾಪಾಡಿಕೊಳ್ಳುವ ರೀತಿ, ಬೇರೆಯವರಿಗೂ ಸಹ ದೇವರು ಆ ತಾಕತ್ತು ಕೊಟ್ಟಿರುತ್ತಾನೆ. ಅವರ ಸಿನಿಮಾವನ್ನು ಅವರೇ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

 

Add Comment