ಚರ್ಚ್‍ನಲ್ಲೇ 1160 ಜನಕ್ಕೆ ಕೊರೋನಾ ಅಂಟಿಸಿದ ಮಹಿಳೆ !

ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೂ ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವವರು ಈ ಸುದ್ದಿ ಓದಲೇಬೇಕು. ಮನೆಯಲ್ಲೇ ಇರಿ ಹೊರಗೆ ಬರಬೇಡಿ ಎಂದು ಕರ್ನಾಟಕವನ್ನು ಶಟ್‍ಡೌನ್ ಮಾಡಿದ ಯಡಿಯೂರಪ್ಪನವರ ನಿರ್ಧಾರವನ್ನು ಪ್ರಶ್ನಿಸುವವರು ಈ ಸುದ್ದಿಯನ್ನು ಕಡ್ಡಾಯವಾಗಿ ಓದಲೇ ಬೇಕು. ಕಾರಣ ಇದು ಓರ್ವ ಮಹಿಳೆ ಬರೋಬ್ಬರಿ 1160 ಜನರಿಗೆ ಕೊರೋನಾ ಅಂಟಿಸಿದ ಭಯಾನಕ ಸುದ್ದಿ.

ದಕ್ಷಿಣ ಕೊರಿಯಾದಲ್ಲಿ ಕೊರೋನಾ ಈವರೆಗೆ 8000ಕ್ಕೂ ಹೆಚ್ಚು ಜನರಿಗೆ ಹಬ್ಬಿದೆ. 75 ಮಂದಿ ಸಾವಿಗೀಡಾಗಿದ್ದಾರೆ. ಫೆಬ್ರವರಿ 18ರವರೆಗೆ ದೇಶದಲ್ಲಿ 30 ಜನರಿಗಷ್ಟೇ ಸೋಂಕು ತಗುಲಿತ್ತು. ಆದರೆ, ಬಳಿಕ 20 ದಿನಗಳಲ್ಲೇ ಸೋಂಕಿತರ ಪ್ರಮಾಣ 8000ದ ಗಡಿ ದಾಟಿ ಸರ್ಕಾರವೇ ಬೆಚ್ಚಿಬಿದ್ದಿತ್ತು. ಇದಕ್ಕೆ ಕಾರಣವೇನೆಂದು ಹುಡುಕುತ್ತಾ ಹೋದ ಸರ್ಕಾರಕ್ಕೆ ಸಿಕ್ಕ ಉತ್ತರದಿಂದ ಈಗ ಜಗತ್ತೇ ಬೆಚ್ಚಿಬಿದ್ದಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಪೇಷೆಂಟ್ 31 ಎಂದು ಹೆಸರಿಸಲಾಗಿರೋ ಮಹಿಳೆ.

ದಕ್ಷಿಣ ಕೊರಿಯಾದಲ್ಲಿ ಕೊರೊನಾಗೆ ತುತ್ತಾದ 31ನೇ ರೋಗಿ ಈಕೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದಾದಿಯರನ್ನು ಪುಸಲಾಯಿಸಿದ ಈಕೆ, ಒಂದೈದು ನಿಮಿಷ ಮನೆಗೆ ಹೋಗಿ ಬರುತ್ತೇನೆ ಅಂತ ಆಸ್ಪತ್ರೆಯಿಂದ ಹೊರಹೋಗಿದ್ದಳು. ಹಾಗೆ ಹೋದವಳು ಚರ್ಚ್‍ಗೆ ಹೋಗಿ ಏಸುಕ್ತಿಸ್ತನನ್ನು ಪ್ರಾರ್ಥಿಸಿದ್ದಳು. ಆ ಶಿಂಚೆಯೋಜನ್‍ಜಿ ಚರ್ಚ್‍ನಲ್ಲಿ ಸಾವಿರಾರು ಜನರು ಭಾಗಿಯಾಗಿದ್ದ ಸಭೆಯಲ್ಲೂ ಪಾಲ್ಗೊಂಡಿದ್ದಳು. ಸರ್ಕಾರದ ಆದೇಶ ಉಲ್ಲಂಘಿಸಿ ಈ ಸಭೆ ಯೋಜಿಸಲಾಗಿತ್ತು. ಫೆಬ್ರವರಿ 1ರಂದು ಮತ್ತೆ ಅದೇ ಚರ್ಚ್‍ನಲ್ಲಿ ಆಯೋಜಿಸಿದ್ದ ಮತ್ತೊಂದು ಸಭೆಯಲ್ಲೂ ಪಾಲ್ಗೊಂಡಿದ್ದಳು. ಅಷ್ಟರಲ್ಲಾಗಲೇ ಆಕೆಗೆ ಕೊರೋನಾ ಇರುವುದು ದೃಢಪಟ್ಟಿತ್ತು. ದುರಂತವೆಂದರೆ ಆ ಸಭೆಯಲ್ಲಿ ಪಾಲ್ಗೊಂಡಿದ್ದ 1160 ಮಂದಿಯನ್ನು ಆಕೆ ಭೇಟಿ ಮಾಡಿದ್ದಳು. ಅಷ್ಟೇ ಸಾಕಾಯಿತು. ಕೊರಿಯಾದ 31ನೇ ಕೊರೋನಾ ರೋಗಿ 1160 ಮಂದಿಗೆ ಕೊರೋನಾ ಗಿಫ್ಟ್ ಕೊಟ್ಟುಬಿಟ್ಟಿದ್ದಳು. ಅವರಿಂದ ಮತ್ತೊಬ್ಬರಿಗೂ ಹಬ್ಬಿತು.

ಈಗ ಇಡೀ ದಕ್ಷಿಣ ಕೊರಿಯಾ ಬಂದ್ ಆಗಿದೆ. ಒಬ್ಬಾಕೆಯಿಂದ ಇಡೀ ದೇಶವೇ ತತ್ತರಿಸುತ್ತಿದೆ. ರೋಗ ಗುಣ ಮಾಡಿಸು ತಂದೆ ಎಂದು ಚರ್ಚ್‍ಗೆ ಹೋಗಿದ್ದ ಪೇಷೆಂಟ್ 31ರಿಂದ ಚರ್ಚ್‍ನಲ್ಲಿದ್ದ ಎಲ್ಲರಿಗೂ ರೋಗ ಹಬ್ಬಿದೆ.

ಈಗ ಹೇಳಿ, ಇಂತಹವರು ಇರೋವರೆಗೆ ಯಾವ ದೇವರೂ ಏನೂ ಮಾಡಲಾರ, ಯಾವ ಸರಕಾರವೂ ಏನೂ ಮಾಡಲಾಗದು. ವೈದ್ಯರ ಸಲಹೆ ಮೇರೆಗೆ ಸರಕಾರ ರೂಪಿಸಿರೋ ನಿಯಮ ಪಾಲಿಸುವುದೊಂದೇ ಉಳಿದಿರೋ ಮಾರ್ಗ. ಕಾರಣ, ದೇವರು ವೈದ್ಯರ ರೂಪದಲ್ಲಿಯೇ ಬರುವುದು. ವೈದ್ಯೋ ನಾರಾಯಣ ಹರಿ :

Add Comment