ದಿಶಾ ಪಟಾನಿ ಸೈಜ್ ಎಕ್ಸ್‍ಟ್ರಾ ಸ್ಮಾಲ್ ಅಂತೆ ಹೌದಾ ?

ಬಾಲಿವುಡ್‍ನ ಹಂಬಲ್ ಹಾಗೂ ಸಿಂಪಲ್ ಹುಡುಗಿ ದಿಶಾ ಪಟಾನಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಚಿತ್ರವೊಂದರಲ್ಲಿ ದಿಶಾ ಪಟಾನಿ ಆದಿತ್ಯ ರಾಯ್ ಕಪೂರ್‍ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈಗ ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗಿದ್ದಾಳೆ.

ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿರೋ ಫೋಟೋವೊಂದು ಭಾರೀ ಕಾಮೆಂಟ್‍ಗಳಿಗೆ ಕಾರಣವಾಗಿದೆ. ದಿಶಾ ಪಟಾನಿಯ ಸೈಜ್ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ರೆಡ್ ಡ್ರೆಸ್ ಬಗ್ಗೆ ಭಾರೀ ಕಾಮೆಂಟ್‍ಗಳು ಬರತೊಡಗಿವೆ. 25 ಸಾವಿರಕ್ಕೂ ಹೆಚ್ಚು ಜನ ಈ ಡ್ರೆಸ್ ಲೈಕ್ ಮಾಡಿದ್ದಾರೆ. ಪ್ರಿಯಕರ ಟೈಗರ್ ಶ್ರಾಫ್ ತಂಗಿ ಕೃಷ್ಣ ಹಾಕಿರೋ ಕಾಮೆಂಟ್ ಈಗ ಕುತೂಹಲದ ಕೇಂದ್ರ ಬಿಂದುವಾಗಿದೆ.

ಸೇಮ್ ಡ್ರೆಸ್ ಆರ್ಡರ್ ಮಾಡಿದ್ದೇನೆ, ನಿನ್ ಸೈಜ್ ಕರೆಕ್ಟ್ ಇದ್ಯಾ, ಏನ್ ಸೈಜ್ ಅಂತ ಪ್ರಶ್ನಿಸಿದ್ದಾಳೆ. ಅದ್ಕೆ ದಿಶಾ ನಂದು ಎಕ್ಸ್‍ಟ್ರಾ ಸ್ಮಾಲ್. ಆದ್ರೆ, ಉಸಿರಾಡೋಕ್ಕೆ ಸ್ವಲ್ಪ ಕಷ್ಟ ಅಂತ ರಿಪ್ಲೈ ಮಾಡಿದ್ದಾಳೆ. ಪಡ್ಡೆ ಹುಡುಗರಿಗೆ ಅಷ್ಟೇ ಸಾಕಾಗಿ ಹೋಗಿದೆ. ಫಿಟ್‍ನೆಸ್, ಡ್ರೆಸ್, ಟೈಟ್‍ನೆಸ್, ಸ್ಲಿಮ್‍ನೆಸ್, ಫುಡ್ ಹೀಗೆ ಎಲ್ಲದರ ಬಗ್ಗೆಯೂ ಸಿಕ್ಕಾಪಟ್ಟೆ ಕಮೆಂಟ್ಸ್ ಮಾಡ್ತಿದ್ದಾರೆ.

Add Comment