BIG BREAKING- ರಮಡಾದಲ್ಲಿ ಹೆಬ್ಬುಲಿ ಪಡೆ ಘರ್ಜನೆ-ದಿಗ್ವಿಜಯ್ ಸಿಂಗ್ ಅರೆಸ್ಟ್

ಮಧ್ಯಪ್ರದೇಶ ಅಖಾಡಕ್ಕೆ ಡಿಕೆಶಿ ಎಂಟ್ರಿ

ಡಿಕೆಶಿವಕುಮಾರ್ ಅಧ್ಯಕ್ಷರಾಗುತ್ತಿದ್ದಂತೆಯೇ ಕಾಂಗ್ರೆಸ್‍ಗೆ ಹೊಸ ಚೈತನ್ಯ ಬಂದಿದೆ. ಮಧ್ಯಪ್ರದೇಶ ರಾಜಕಾರಣದ ಅಖಾಡಕ್ಕೆ ಧುಮುಕಿದ ರಾಜ್ಯ ಕಾಂಗ್ರೆಸ್‍ನ ಹೆಬ್ಬುಲಿ ಇಂದು ಬೆಳ್ಳಂಬೆಳಗ್ಗೆಯೇ ಘರ್ಜಿಸಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಉಳಿದುಕೊಂಡಿರೋ ರಮಡಾ ರೆಸಾರ್ಟ್‍ಗೆ ನುಗ್ಗಿ ಘರ್ಜಿಸಿದೆ.

ನಿನ್ನೆ ರಾತ್ರಿಯೇ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು. ಡಿಕೆಶಿ ಭೇಟಿ ಮಾಡಿ, ರೆಸಾರ್ಟ್‍ನಲ್ಲಿರೋ ಶಾಸಕರನ್ನು ಮಧ್ಯಪ್ರದೇಶಕ್ಕೆ ಕರೆದೊಯ್ಯುವ ಬಗ್ಗೆ ಚರ್ಚಿಸಿದರು. ಡಿಕೆಶಿ ಸೇಮ್ ಟು ಸೇಮ್ ತಾವು ಮಹಾರಾಷ್ಟ್ರದ ರೆನಾಯಸೆನ್ಸ್ ಹೊಟೇಲ್‍ಗೆ ನುಗ್ಗಿದ ರೀತಿಯಲ್ಲೇ ಪ್ಲಾನ್ ರೂಪಿಸಿದ್ರು. ಅಂತೆಯೇ, ಎಲ್ಲರೂ ಏಳುವುದಕ್ಕೆ ಮುನ್ನವೇ ಕಾರ್ಯಕರ್ತರ ಪಡೆ ಕಟ್ಟಿಕೊಂಡು ರಮಡಾ ರೆಸಾರ್ಟ್‍ನತ್ತ ಧಾವಿಸಿದ್ರು. ಹೊಟೇಲ್‍ಗೆ ಪ್ರವೇಶ ಕೋರಿದ್ರು.

ಆದರೆ, ಕಾವಲಿಗಿದ್ದ ಪೊಲೀಸರು ಯಾರನ್ನೂ ಒಳಬಿಡಲಿಲ್ಲ. ಅಲ್ಲೇ ದಿಗ್ವಿಜಯ್ – ಡಿಕೆಶಿ ಜೋಡಿ ಧರಣಿ ಆರಂಭಿಸಿತು. ಬಳಿಕ ಪೊಲೀಸರು ಎಲ್ಲರನ್ನೂ ಬಂಧಿಸಿ ಕರೆದೊಯ್ದರು. ಡಿಕೆಶಿ ಎಂಟ್ರಿಯಿಂದ ಮಧ್ಯಪ್ರದೇಶ ರಾಜಕೀಯ ರಣರೋಚಕ ಟ್ವಿಸ್ಟ್ ಪಡೆದಿದೆ.

Add Comment