ಥಿಯೇಟರ್ ಗಳಲ್ಲಿ ಶೇ.50ರಷ್ಟು ಆಸನ ನಿರ್ಬಂಧ ವಿರುದ್ಧ ಸ್ಯಾಂಡಲ್ ವುಡ್ ಆಕ್ರೋಶ

ಫೆಬ್ರುವರಿ 1 ರಿಂದ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರು ಆಸನಗಳಲ್ಲಿ ಕೂತು ಸಿನಿಮಾ ವೀಕ್ಷಿಸಲು ಸ್ವತಃ ಕೇಂದ್ರಸರ್ಕಾರ ಹಸಿರುನಿಶಾನೆ ತೋರಿದೆ.
ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯಸರ್ಕಾರ ಫೆಬ್ರುವರಿ 1ರಿಂದ ಫೆ.28 ರವರೆಗೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರು ಮಾತ್ರ ಸಿನಿಮಾ ವೀಕ್ಷಿಸಲು ಅವಕಾಶ ನೀಡಿರುವ ನಿರ್ಧಾರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.‌
ಈ ಬಗ್ಗೆ ಹಿರಿಯ ನಟ ಶಿವರಾಜ್ ಕುಮಾರ್ ಅವರು ಹೇಳಿಕೆ ನೀಡಿ ರಾಜ್ಯದಲ್ಲಿ ಯಾರಿಗೂ ಇಲ್ಲದ ನಿರ್ಬಂಧ ಚಿತ್ರೋದ್ಯಮಕ್ಕೆ ಮಾತ್ರ ನಿರ್ಬಂಧ ವಿಧಿಸಿರುವ ರಾಜ್ಯಸರ್ಕಾರದ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಮ್ಮ ನಟನೆಯ ‘ಪೊಗರು’ ಚಿತ್ರದ ನಾಯಕ ನಟ ಧ್ರುವ ಸರ್ಜಾ ಸಹ ಟ್ವಿಟರ್ ಮೂಲಕ ರಾಜ್ಯಸರ್ಕಾರ ಕೊರೊನಾ ವ್ಯಾಕ್ಸಿನ್ ಗಳು ಬಿಡುಗಡೆಯಾಗಿ ಕೊರೊನಾ ಸೋಂಕು ರಾಜ್ಯದಲ್ಲಿ ತೀರಾ ಕಡಿಮೆಯಾಗಿದ್ದರೂ ಸಹ ರಾಜ್ಯಸರ್ಕಾರ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಲು ಬರುವ ಪ್ರೇಕ್ಷಕರ ಸಂಖ್ತೆಯನ್ನು ಶೇ.50ಕ್ಕೆ ಸೀಮಿತಗೊಳಿಸಿರುವ ಕ್ರಮ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದೆಡೆ ಖ್ಯಾತ ನಟ ಯಶ್ ಸಹ ರಾಜ್ಯಸರ್ಕಾರ ಕೊರೊನಾ ಸೋಂಕು ಕ್ರಮೇಣ ರಾಜ್ಯದಲ್ಲಿ ನಶಿಸಿದ್ದರೂ ಸಹ ಅನವಶ್ಯಕವಾಗಿ ಕನ್ನಡ ಚಿತ್ರೋದ್ಯಮಕ್ಕೆ ಹೊಡೆತ ನೀಡುವ ಶೇ.50ರಷ್ಟು ಪ್ರೇಕ್ಷಕರನ್ನು ಮಾತ್ರ ಸಿನಿಮಾ ಹಾಲ್ ಗಳಲ್ಲಿ ಕೂರಲು ಅವಕಾಶ ನೀಡಿ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ,ಕಲಾವಿದರ ಒಕ್ಕೂಟ,ನಿರ್ಮಾಪಕರ ಸಂಘ,ನಿರ್ದೇಶಕರ ಸಂಘ,ತಂತ್ರಜ್ಞರ ಒಕ್ಕೂಟಗಳೂ ಸಹ ರಾಜ್ಯಸರ್ಕಾರ ಥಿಯೇಟರ್ ಗಳಲ್ಲಿ ಶೇ.50 ರಷ್ಟು ಮಾತ್ರ ಆಸನಗಳಲ್ಲಿ ಕೂರಲು ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಒಟ್ಟಿನಲ್ಲಿ ಈಗ ರಾಜ್ಯದಲ್ಲಿ ಮಾರ್ಕೆಟ್ ಗಳಲ್ಲಿ, ಬಸ್ ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಪ್ರವಾಸೀತಾಣಗಳಲ್ಲಿ ಮಾತ್ರ ಜನರು ಮುಕ್ತವಾಗಿ ಸಂಚರಿಸಲು ಅವಕಾಶ ಕಲ್ಪಿಸಿ ಈಗ ಸಿನಿಮಾ ಥಿಯೇಟರ್ ಗಳಲ್ಲಿ ಮಾತ್ರ ಪ್ರೇಕ್ಷಕರು ಶೇ.50 ರಷ್ಟು ಮಾತ್ರ ಆಸನಗಳಲ್ಲಿ ಕೂರಬೇಕೆಂದು ವಿನಾಃ ಕಾರಣ ನಿರ್ಬಂಧ ವಿಧಿಸಿದೆ ಎಂದು ಇಡೀ ಸ್ಯಾಂಡಲ್ ವುಡ್ ಒಗ್ಗಟ್ಟಾಗಿ ವಿರೋಧಿಸಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ “
ಕೇವಲ ಮನರಂಜನೆಗಾಗಿ ಜನರ ಆರೋಗ್ಯವನ್ನು ಬಲಿ ಕೊಡಲಾಗದು, ಏಕೆಂದರೆ ಈಗ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡಾ 100ರಷ್ಟು ಆಸನಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಿದರೆ ಆಗ ಕೊರೊನಾ ಸೋಂಕು ಹರಡಬಹುದು,ಏಕೆಂದರೆ ಆಗ ಸಿನಿಮಾ ವೀಕ್ಷಿಸಲು ಜನರು ಕ್ಯೂನಲ್ಲಿ ನಿಲ್ಲದೆ ಬ್ಲಾಕ್ ನಲ್ಲಿಯಾದರೂ ಟಿಕೆಟ್ ಕೊಂಡು ಸಿನಿಮಾ ವೀಕ್ಷಿಸಲು ಬರಬಹುದು,ಆಗ ಜನಜಂಗುಳಿ ಹೆಚ್ಚಾಗಿ ರಾಜ್ಯಸರ್ಕಾರವೂ ಊಹಿಸದ ರೀತಿಯಲ್ಲಿ ಕೊರೊನಾ ಸೋಂಕು ಏರಿಕೆಯಾಗಬಹುದೆಂಬ ಭೀತಿಯಿಂದಲೇ ರಾಜ್ಯಸರ್ಕಾರ ಶೇ.50ರಷ್ಟು ಮಾತ್ರ ಪ್ರೇಕ್ಷಕರು ಸಿನಿಮಾ ಹಾಲ್ ಗಳಲ್ಲಿ ಕೂರಲು ಅವಕಾಶ ಕಲ್ಪಿಸಿದೆ, ಆದಾಗ್ಯೂ ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.
KTVKANNADA ಬೆಂಗಳೂರು

Add Comment