ಥಿಯೇಟರ್ ಗಳಿಗೆ 100% ಪ್ರೇಕ್ಷಕರು ಬರಲು ಅನುಮತಿ ಕೊಡಿಸಲು ನಿರ್ಮಾಪಕರೆಲ್ಲಾ ಶಾಸಕ ಕುಮಾರ್ ಬಂಗಾರಪ್ಪ ಕಾಲಿಗೆ ಬಿದ್ದರು!

ಕೇವಲ ಮನರಂಜನೆಗಾಗಿ ನಮ್ಮ ರಾಜ್ಯಸರ್ಕಾರವು ಜನರ ಆರೋಗ್ಯವನ್ನು ಬಲಿಕೊಡಲು ಬಯಸುವುದಿಲ್ಲ ಎಂದು ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಮಾತ್ರ ಪ್ರೇಕ್ಷಕರಿಗೆ ಸಿನಿಮಾಗಳನ್ನು ನೋಡಲು ಅವಕಾಶ ಕಲ್ಪಿಸಿರುವುದರ ವಿರುದ್ಧ ಸ್ಯಾಂಡಲ್ ವುಡ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ರಾಜ್ಯಸರ್ಕಾರ ಫೆ.28 ರವರೆಗೆ ರಾಜ್ಯದ ಚಿತ್ರಮಂದಿರಗಳಲ್ಲಿರುವ ಆಸನಗಳ ಶೇ.50 ರಷ್ಟನ್ನು ಮಾತ್ರ ಪ್ರೇಕ್ಷಕರಿಗೆ ಮೀಸಲಿಡಲು ಕೊರೊನಾ ಮಾರ್ಗಸೂಚಿಯಲ್ಲಿ ಆದೇಶಿಸಿದೆ.
ರಾಜ್ಯಸರ್ಕಾರದ ಈ ನಿರ್ಧಾರದ ವಿರುದ್ಧ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಧನಂಜಯ್, ಮುರುಳಿ, ಧ್ರುವ ಸರ್ಜಾ, ಯಶ್ ಮುಂತಾದ ನಟರು ಜೊತೆಗೆ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು, ಚಿತ್ರವಿತರಕರು ದಂಗೆಯೆದ್ದಿದ್ದಾರೆ.
ಕೇಂದ್ರಸರ್ಕಾರವೇ ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಇರುವ ಎಲ್ಲಾ ಆಸನಗಳನ್ನು ಭರ್ತಿ ಮಾಡಿ ಪ್ರೇಕ್ಷಕರಿಗೆ ಸಿನಿಮಾ ನೋಡಲು ಅವಕಾಶ ಕಲ್ಪಿಸಿದೆ,ಆದರೆ ಇಲ್ಲೇನ್ರೀ ರಾಜ್ಯಸರ್ಕಾರ ಮಾರ್ಕೆಟ್ ಗಳಲ್ಲಿ, ಬಸ್ ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಪ್ರವಾಸೀತಾಣಗಳಲ್ಲಿ ಮುಕ್ತವಾಗಿ ಓಡಾಟ ಮಾಡೋಕೆ ಅವಕಾಶ ಕೊಟ್ಟಿದಾರೆ,ಆದರೆ ನಮ್ಮ ಸಿನಿಮಾಗಳ ಮ್ಯಾಲ್ಯಾಕ್ರೀ ಇಷ್ಟು ಕೊಂಕು ದೃಷ್ಟಿ ಈ ಸರ್ಕಾರಕ್ಕಾ? ಅಂತ ನಟರಾಗಿದ್ದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರ ಕಾಲಿಗೆ ಬಿದ್ದು ನಿರ್ಮಾಪಕರು ಕಣ್ಣೀರು ಸುರಿಸಿದ್ದಾರೆ. ಯಾಕೆಂದರೆ ಈಗಾಗಲೇ ಬಹಳ ನಿರೀಕ್ಷೆ ಹುಟ್ಟಿಸಿದ ಧ್ರುವ ಸರ್ಜಾ ಅವರು ನಾಯಕನಾಗಿರುವ ‘ಪೊಗರು’ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಥಿಯೇಟರ್ ಗಳಲ್ಲಿ ಪ್ರೇಕ್ಷಕರಿಂದ ಹೌಸ್ ಫುಲ್ ಆಗದೆ ಥಿಯೇಟರ್ ಮಾಲೀಕರು ಹೌಹಾರಿದ್ದಾರೆ.
ಇದಕ್ಕೆಲ್ಲಾ ಭಯಪಡಬೇಡಿ,ನಾನು ಸಂಜೆ ಅಥವಾ ರಾತ್ರಿಯೊಳಗೆ ಸಿಎಂ ಯಡಿಯೂರಪ್ಪ ಅವರನ್ನು ಕಂಡು ಮಾತನಾಡುತ್ತೇನೆ,ಸಿನಿಮಾ ಹಾಲ್ ಗಳಿಗೆ ಮೊದಲಿದ್ದಂತೆ ಪ್ರೇಕ್ಷಕರು ಶೇ.100ರಷ್ಟು ಆಸನಗಳಲಿ ಕೂತು ಸಿನಿಮಾ ನೋಡಲು ಅವಕಾಶ ಕೊಡಲು ಸಿಎಂಗೆ ಮನವಿ ಚಿತ್ರರಂಗದ ಪರವಾಗಿ ನಟನಾಗಿ ಮನವಿ ಮಾಡ್ತೇನೆ, ನಮ್ಮ ಶಿವಮೊಗ್ಗ ಜಿಲ್ಲೆಯವರಾದ ಕಾರಣ ನನಗೆ ಸಿಎಂ ಜೊತೆ ಬಹಳ ಉತ್ತಮ ಸಂಪರ್ಕ ಇದೆ, ಆತಂಕಪಡದೆ ನೀವೆಲ್ಲಾ ನಿರ್ಮಾಪಕರು ಹೋಗಿಬನ್ನಿ ಎಂದು ಮಧ್ಯಾಹ್ನ ಶಾಸಕ ಕುಮಾರ್ ಬಂಗಾದಪ್ಪ ಹೇಳಿ ಕಳುಹಿಸಿದ್ದಾರೆ.
ಇನ್ನೊಂದರಡೆ ಸಚಿವ ಸ್ಥಾನ ನೀಡದೆ ಹೋದರೂ ನಿನ್ನೆ ನಾನು ಕರೆದಿದ್ದ ಔತಣಕೂಟಕ್ಕೆ ಬಂದಿದ್ದಾರೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಮೇಲೆ ರಾತ್ರಿ ಸಿಎಂ ಯಡಿಯೂರಪ್ಪ ಸಂತಸಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ‌.ಕೆ.ಸುಧಾಕರ್ ಅವರನ್ನು ಈ ವಿಚಾರದಲ್ಲಿ ಒಪ್ಪಿಸುವುದು ಹೇಗೆಂದು ಸ್ವತಃ ಶಾಸಕ ಕುಮಾರ್ ಬಂಗಾರಪ್ಪ ಆಲೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಿನಿಮಾ ಥಿಯೇಟರ್ ಗಳಿಗೆ ಶೇ.50 ರಷ್ಟು ಪ್ರೇಕ್ಷಕರು ಇರಬೇಕೆ? ಅಥವಾ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗಬಹುದೆ? ಎಂಬ ಸಿನಿಮಾ ಮಂದಿಯ ಪ್ರಶ್ನೆಗಳಿಗೆ ನಾಳೆ ಸ್ಪಷ್ಟ ಉತ್ತರ ಸಿಗಲಿದೆ.
KTVKANNADA ಬೆಂಗಳೂರು

Add Comment