ಕೊನೆಗೂ ರಾಜ್ಯದಲ್ಲಿ ಥಿಯೇಟರ್ ಗಳು ಸಂಪೂರ್ಣ ಭರ್ತಿಯಾಗಲು 4 ವಾರ ಅವಕಾಶ ನೀಡಿದ ರಾಜ್ಯಸರ್ಕಾರ

ಕೊರೊನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ತೀರಾ ಇಳಿದಿರುವುದರಿಂದ ಸ್ಯಾಂಡಲ್ ವುಡ್ ಒತ್ತಾಯಕ್ಕೆ ಮಣಿದಿರುವ ರಾಜ್ಯಸರ್ಕಾರ ರಾಜ್ಯದಲ್ಲಿ ಇನ್ನು ನಾಲ್ಕು ವಾರಗಳ ಕಾಲ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡಾ 100 ರಷ್ಟು ಆಸನಗಳನ್ನು ಅಂದರೆ ಹೌಸ್ ಫೌಲ್ ಆಗಲು ಒಪ್ಪಿಗೆ ನೀಡಿದೆ.
ಇಂದು ಸಂಜೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಬೆಂಗಳೂರಿನಲ್ಲಿ‌ ಭೇಟಿಯಾದ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಹಿರಿಯ ನಟಿ ತಾರಾ ಅನುರಾಧಾ ಅವರುಗಳು ಸಿನಿಮಾ ಹಾಲ್ ಗಳಲ್ಲಿ ಶೇ.100 ರಷ್ಟು ಆಸನಗಳನ್ನು ಭರ್ತಿ ಮಾಡಲು ಥಿಯೇಟರ್ ಮಾಲೀಕರಿಗೆ ಅನುಮತಿ ನೀಡಬೇಕು,ಇದಕ್ಕಾಗಿ ಥಿಯೇಟರ್ ಮಾಲೀಕರೂ ಸಹ ಪ್ರೇಕ್ಷಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಕೊರೊನಾ ಮಾರ್ಗಸೂಚಿಯನ್ನು ಪಾಲಿಸುತ್ತಾರೆ ಹಾಗೂ ಥಿಯೇಟರ್ ಒಳಗೆ ತಪ್ಪದೇ ಸ್ಯಾನಿಟೈಸರ್ ಸ್ಪ್ರೇ ಮಾಡಿ ಪ್ರೇಕ್ಷಕರನ್ನು ಒಳಗೆ ಬರಲು ಬಿಡಲಾಗುತ್ತದೆ ಮತ್ತು ಸಿನಿಮಾ ಮುಗಿಸಿ ವಾಪಸ್ ಹೋಗುವಾಗಲೂ ಕಡ್ಡಾಯವಾಗಿ ಪ್ರೇಕ್ಷಕರಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡಿ ಕಳುಹಿಸಲಾಗುತ್ತದೆ ಎಂದು ನಟ ಶಿವರಾಜ್ ಕುಮಾರ್ ಮತ್ತು ನಟಿ ತಾರಾ ಅನುರಾಧಾ ಸ್ಯಾಂಡಲ್ ವುಡ್ ಪರವಾಗಿ ವಾದ ಮಂಡಿಸಿದರು.
ಆಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನೂ ಕೇಳಿದರು. ಕೊನೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಿಎಂ ಯಡಿಯೂರಪ್ಪ ಅವರ ಸಲಹೆ ಮೇರೆಗೆ ರಾಜ್ಯದಲ್ಲಿ ಎಲ್ಲಾ ಕಡೆ ಸಿನಿಮಾ ಥಿಯೇಟರ್ ಗಳು ಮುಂದಿನ 4 ವಾರಗಳ ಕಾಲ ಶೇ.100 ರಷ್ಟು ಪ್ರೇಕ್ಷಕರಿಂದ ಭರ್ತಿಯಾಗಲು ಅವಕಾಶ ನೀಡಿದರು. ಆದರೆ ಈ 4 ವಾರಗಳ ಅವಧಿಯಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಏರಿಕೆಯಾದರೆ ಆಗ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗಳನ್ನು ತಕ್ಷಣವೇ ಮುಂಜಾಗ್ರತಾ ದೃಷ್ಟಿಯಿಂದ ಬಂದ್ ಮಾಡಲಾಗುವುದು, ಇದಕ್ಕಾಗಿ ಶುಕ್ರವಾರದಿಂದ ಅಂದರೆ ಫೆಬ್ರುವರಿ 5ರಿಂದ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗಳನ್ನು ತೆರೆದು ಚಿತ್ರಪ್ರದರ್ಶನ ಮಾಡಲು ಅವಕಾಶ ನೀಡಲಾಗಿದೆ‌. ಆದರೆ ಇದಕ್ಕಾಗಿ ನಾಳೆ ಸಂಜೆಯೊಳಗೆ ರಾಜ್ಯಸರ್ಕಾರ ಕೊರೊನಾ ಮಾರ್ಗಸೂಚಿ ಪ್ರಕಟಿಸಲಿದೆ. ಆದಾಗ್ಯೂ ರಾಜ್ಯದ ಎಲ್ಲಾ ಥಿಯೇಟರ್ ಗಳು ಒಳಗೆ ಹವಾ ನಿಯಂತ್ರಕಾ ಸಾಧನಗಳನ್ನು ವಿಪರೀತವಾಗಿ ಬಳಸದೇ ಅವುಗಳನ್ನು ನಿಯಂತ್ರಣದಲ್ಲೇ ಇಟ್ಟು ಥಿಯೇಟರ್ ನಲ್ಲಿ ಎಸಿ ಇರುವಂತೆ ನೋಡಿಕೊಳ್ಳಬೇಕು ಮತ್ತು ಎಲ್ಲಾ ಪ್ರೇಕ್ಷಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಮಾತ್ರ ಥಿಯೇಟರ್ ಒಳಗೆ ಬಿಡಬೇಕು,ಜೊತೆಗೆ ಪ್ರೇಕ್ಷಕರಿಗೆ ಕಡ್ಡಾಯವಾಗಿ ಸ್ಯಾನಿಟೈಸರ್ ಸ್ಪ್ರೇ ಮಾಡಿ ಥಿಯೇಟರ್ ಒಳಗೆ ಬಿಡಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಸೂಚಿಸಿದರು.
ಹೀಗೆ ಫೆಬ್ರುವರಿ 28ರವರೆಗೆ ರಾಜ್ಯದಲ್ಲಿ ಎಲ್ಲಾ ಥಿಯೇಟರ್ ಗಳು ಶೇಕಡಾ 100ರಷ್ಟು ಸಂಪೂರ್ಣವಾಗಿ ಆಸನಗಳನ್ನು ಭರ್ತಿ ಮಾಡಲು ರಾಜ್ಯಸರ್ಕಾರ ನಾಳಿನ ಕೊರೊನಾ ಮಾರ್ಗಸೂಚಿ ಅನ್ವಯ ಷರತ್ತುಬದ್ಧ ಅನುಮತಿ ನೀಡಿದೆ.
ಆದ್ದರಿಂದ ನಟ ಶಿವರಾಜ್ ಕುಮಾರ್ ಮತ್ತು ಹಿರಿಯ ನಟಿ ತಾರಾ ಅನುರಾಧಾ ಅವರುಗಳು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿತು.
ಆದಾಗ್ಯೂ ಶುಕ್ರವಾರದಿಂದ ರಾಜ್ಯದಲ್ಲಿ ಎಲ್ಲಾ ಥಿಯೇಟರ್ ಗಳು ಮೊದಲಿನಂತೆ ಸಂಪೂರ್ಣವಾಗಿ ಆಸನಗಳನ್ನು ಭರ್ತಿ ಮಾಡಲು ಅವಕಾಶ ಸಿಕ್ಕಿದೆ,ಆದರೆ ಈ ಅವಕಾಶ 4 ವಾರಗಳಿಗೆ ಮಾತ್ರ.
ನಾಳೆ ಗುರುವಾರ ಸಂಜೆಯೊಳಗೆ ರಾಜ್ಯದಲ್ಲಿ ಎಲ್ಲಾ ಥಿಯೇಟರ್ ಗಳು ತೆರೆದು ಮೊದಲಿನಂತೆ ಕಾರ್ಯನಿರ್ವಹಿಸಲು ಕೊರೊನಾ ಮಾರ್ಗಸೂಚಿ ಪ್ರಕಟಣೆ ಹೊರಬೀಳಲಿದೆ. ಆರೋಗ್ಯ ಇಲಾಖೆ ಕೆಲವೊಂದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಿ ಥಿಯೇಟರ್ ಗಳು ಶೇ.100ರಷ್ಟು ಭರ್ತಿಯಾಗಲು ಕೊರೊನಾ ಮಾರ್ಗಸೂಚಿ ಹೊರಬೀಳಲಿದೆ.
ಫೆಬ್ರುವರಿ 19ರಿಂದ ನಟ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ಪ್ರದರ್ಶನಗೊಳ್ಳಲಿದೆ.
KTVKANNADA ಬೆಂಗಳೂರು

Add Comment