ರಾಜ್ಯಾದ್ಯಂತ ಪ್ರೇಕ್ಷಕರಿಂದ ಚಿತ್ರಮಂದಿರಗಳು ಹೌಸ್ ಫುಲ್

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಚಿತ್ರಮಂದಿರಗಳಿಗೆ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಬಂಡೆದಿದ್ದ ಸ್ಯಾಂಡಲ್ ವುಡ್ ಸಮಾಧಾನಪಡಿಸಲು ಮುಂದಿನ 4 ವಾರಗಳ ಕಾಲ ಶೇ.100 ರಷ್ಟು ಪ್ರೇಕ್ಷಕರು ಚಿತ್ತಮಂದಿರಗಳಿಗೆ ಬರಬಹುದೆಂಬ ರಾಜ್ಯಸರ್ಕಾರ ಆದೇಶದ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.
ಇಂದು ಶುಕ್ರವಾರ ಪ್ರಜ್ವಲ್ ದೇವರಾಜ್ ಅಭಿಯನದ ಇನ್ಸ್ ಪೆಕ್ಟರ್ ವಿಕ್ರಂ, ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ ಹಾಗೂ ವಿನೋದ್ ಪ್ರಭಾಕರ್ ಅವರ ಶ್ಯಾಡೋ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗಿ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.
ಪ್ರೇಕ್ಷಕರನ್ನು ಜಾನಪದ ಕಲೆ, ಡೋಲು ಕುಣಿತದ ಮೂಲಕ ಸ್ವಾಗತಿಸಿ ಡೊಳ್ಳು ಕುಣಿತದ ಕಲಾವಿದರು ಬರಮಾಡಿಕೊಳ್ಳುತ್ತಿದ್ದಾರೆ.
ಆದಾಗ್ಯೂ ರಾಜ್ಯಸರ್ಕಾರ ಆದೇಶದ ಪ್ರಕಾರ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಎಲ್ಲಾ ಪ್ರೇಕ್ಷಕರಿಗೂ ಸ್ಯಾನಿಟೈಸರ್ ಸ್ಪ್ರೇ ಮಾಡಿ ಚಿತ್ರಮಂದಿರದ ಒಳಗೆ ಬಿಡಲಾಗುತ್ತಿದೆ. ಅಲ್ಲದೆ ಚಿತ್ರಮಂದಿರದ ಒಳಗೆ 25 ಡಿಗ್ರಿಯಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಮಾತ್ರ ಚಿತ್ರಮಂದಿರಗಳು ಪೇಚಾಡುತ್ತಿವೆ.
ಆದಾಗ್ಯೂ ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳು ಪ್ರೇಕ್ಷಕರಿಂದ ಹೌಸ್ ಫುಲ್ ಆಗಿದ್ದರಿಂದ ಚಿತ್ರನಿರ್ಮಾಪಕರು,ನಿರ್ದೇಶಕರು,ಚಿತ್ರಮಂದಿರಗಳ ಮಾಲೀಕರು ಅಲ್ಲದೆ ನಟ,ನಟಿಯರು,ತಂತ್ರಜ್ಞರು‌ ಸಂತಸಗೊಂಡಿದ್ದಾರೆ.
KTVKANNADA

Add Comment