BIG BREAKING – ಕಾಂಗ್ರೆಸ್ ನಾಟಕಕ್ಕೆ ಸುಪ್ರೀಂ ಚಾಟಿ – ನಾಳೆ 5 ಗಂಟೆಗೆ ಖೇಲ್ ಖತಂ

ಮಧ್ಯಪ್ರದೇಶ ರಾಜಕೀಯ ಬೃಹನ್ನಾಟಕಕ್ಕೆ ಸುಪ್ರೀಂ ಕೋರ್ಟ್ ಮಂಗಳ ಹಾಡಿದೆ. ಭೋಪಾಲ್‍ನಿಂದ ಬೆಂಗಳೂರು, ಜೈಪುರ, ಹರಿಯಾಣದವರೆಗೆ ಹಬ್ಬಿದ ನಾಟಕಕ್ಕೆ ನಾಳೆ ಸಂಜೆ ತೆರೆ ಬೀಳಲಿದೆ. ಕೊರೋನಾ ಇರಲಿ, ಏನೇ ಇರಲಿ, ನಾಳೆ ವಿಧಾನಸಭೆ ಅಧಿವೇಶನ ನಡೆಸಬೇಕು. ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಸಿಎಂ ಕಮಲನಾಥ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಎರಡು ದಿನಗಳ ಕಾಲ ಸುದೀರ್ಘ ವಾದ -ಪ್ರತಿವಾದ ಆಲಿಸಿದ ನ್ಯಾ,ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ನಾಳೆಯೇ ಪ್ರಕರಣಕ್ಕೆ ಮಂಗಳ ಹಾಡುವಂತೆ ಸೂಚಿಸಿದೆ. ಕಾಂಗ್ರೆಸ್ ಪರ ಅಭಿಷೇಕ್ ಸಿಂಘ್ವಿ, ಕಪಿಲ್ ಸಿಬಲ್‍ರಂತಹ ಘಟಾನುಘಟಿಗಳು ವಾದ ಮಂಡಿಸಿದ್ರೂ, ಸಂವಿಧಾನದ ವಿಧಿಗಳ ಮುಂದೆ ಕಾಂಗ್ರೆಸ್ ಆಟ ನಡೆಯಲಿಲ್ಲ.

ಈ ಪ್ರಕರಣದಲ್ಲೂ ಕರ್ನಾಟಕದ ಬೊಮ್ಮಾಯಿ ಪ್ರಕರಣವೇ ಪ್ರಮುಖವಾಗಿ ಚರ್ಚೆಯಾಯಿತು. ಅಂತಿಮವಾಗಿ, ನಾಳೆಯೇ ಬಹುಮತ ಸಾಬೀತುಪಡಿಸಲು ಸೂಚಿಸಿತು. ಬಹುಮತ ಸಾಬೀತು ಪ್ರಕ್ರಿಯೆಯ ವಿಡಿಯೋ ರೆಕಾರ್ಡಿಂಗ್ ಮಾಡಲು ಆದೇಶಿಸಿರೋ ಸುಪ್ರೀಂ ಕೋರ್ಟ್, ಸಾಧ್ಯವಾದರೆ, ಕಲಾಪದ ನೇರಪ್ರಸಾರ ಮಾಡುವಂತೆ ಸೂಚಿಸಿದೆ.

ಅಲ್ಲದೆ, ಕಲಾಪಕ್ಕೆ ಹಾಜರಾಗಲು ಬಯಸಿದರೆ ಬೆಂಗಳೂರಿನಲ್ಲಿರುವ 16 ಶಾಸಕರಿಗೆ ಅಗತ್ಯ ಭದ್ರತೆ ಕಲ್ಪಿಸುವಂತೆ ಕರ್ನಾಟಕ ಮತ್ತು ಮಧ್ಯಪ್ರದೇಶ ಡಿಜಿಪಿಗಳಿಗೆ ಆದೇಶ ನೀಡಿದೆ. ಯಾವುದೇ ಕಾರಣಕ್ಕೂ ವಿಧಾನಸಭೆಯಲ್ಲಿ ಗದ್ದಲಕ್ಕೆ, ಕಾನೂನುಭಂಗಕ್ಕೆ ಅವಕಾಶ ಕೊಡಬಾರದು ಎಂದು ವಿಧಾನಸಭಾ ಕಾರ್ಯದರ್ಶಿಗೂ ಆದೇಶ ನೀಡಿದೆ. ಬೆಂಗಳೂರಿನಲ್ಲಿರುವ ಶಾಸಕರು ತಮ್ಮ ಮನಸ್ಸು ಬದಲಾಯಿಸದೇ ಇದ್ದಲ್ಲಿ, ಕಮಲನಾಥ್ ಸರಕಾರ ಪತನವಾಗುವುದು ನಿಶ್ಚಿತ.

ಕಮಲನಾಥ್ ರಾಜೀನಾಮೆ ಕೊಟ್ಟ ಬಳಿಕ, ಬಿಜೆಪಿ ಸರಕಾರ ರಚನೆಯ ಪ್ರಕ್ರಿಯೆಗಳು ಆರಂಭವಾಗಲಿವೆ. ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರೋದ್ರಿಂದ ಕಾಂಗ್ರೆಸ್‍ಗೆ ಮಧ್ಯಪ್ರದೇಶದಲ್ಲಿ ಅಧಿಕಾರ ನಷ್ಟವಾಗುತ್ತಿದೆ.

Add Comment