ಈ ಒಂದು ಕಾರಣಕ್ಕೆ ರಶ್ಮಿಕಾ ವಾಟ್ಸಪ್ ಯೂಸ್ ಮಾಡಲ್ವಂತೆ!

ಈಗಿನ ಕಾಲದಲ್ಲಿ ಎಲ್ಲರೂ ವಾಟ್ಸಪ್, ಫೇಸ್ ಬುಕ್ ಅಂತಾ ಸಿಕ್ಕಾಪಟ್ಟೆ ಬ್ಯುಸಿಯಾಗಿರ್ತಾರೆ. ಅದರಲ್ಲೂ ಸೆಲೆಬ್ರಿಟಿಗಳಂತೂ ಕೇಳೋದೆ ಬೇಡ. ತಮ್ಮ ತಮ್ಮ ಸಿನಿಮಾಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡ್ತಾನೆ ಇರ್ತಾರೆ. ಆದರೆ ಕಿರಿಕ್ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಾಟ್ಸಪ್ ಯೂಸ್ ಮಾಡೋದೇ ಇಲ್ವಂತೆ. ಹೌದು. ನಾನು ವಾಟ್ಸಪ್ ಯೂಸ್ ಮಾಡೋದಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಶ್ಮಿಕಾ ಒಪ್ಪಿಕೊಳ್ಳುತ್ತಿರುವ ಹಿನ್ನೆಲೆ ಪತ್ರಕರ್ತರು ಅವರನ್ನು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ರಶ್ಮಿಕಾ, ನಾನು ಸಿನಿಮಾ ಕಥೆಗಳನ್ನು ನೇರವಾಗಿಯೇ ಕೇಳುತ್ತೇನೆ. ಜೊತೆಗೆ ಯಾವುದೇ ವಿಚಾರಗಳಿದ್ದರು, ನೇರವಾಗಿಯೇ ಭೇಟಿಯಾಗಿ ಮಾತನಾಡುತ್ತೇನೆ. ಹಾಗಾಗಿ ನಾನು ವಾಟ್ಸಪ್ ಯೂಸ್ ಮಾಡಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಯಾಕಂದ್ರೆ ಅದರಲ್ಲಿ ಇಲ್ಲಸಲ್ಲದ ಮೇಸೇಜ್ ಗಳು ಬರುತ್ತಿರುತ್ತವೆ. ಹೀಗಾಗಿ ನಾನು ಯೂಸ್ ಮಾಡುವುದಿಲ್ಲ. ಇನ್ನು ನನ್ನನ್ನು ಸಂಪರ್ಕಿಸಲು ಬಯಸುವವರು ನನ್ನ ಮ್ಯಾನೇಜರ್ ಅಥವಾ ನನ್ನ ತಾಯಿಯ ಬಳಿ ಮಾತನಾಡಿಕೊಳ್ಳುತ್ತಾರೆ. ಈ ಮೂಲಕ ನಾನು ಇತರರನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದರು.

Add Comment