ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾದ್ರೂ ಏಕೆ?

ನಟ ಕಿಚ್ಚ ಸುದೀಪ್ ಸದಾಕಾಲ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅವರು ಕೇವಲ ಟ್ವಿಟ್ಟರ್ ಹಾಗೂ ಇನ್ಸಾ÷್ಟಗ್ರಾಮ್ ನಲ್ಲಿ ಮಾತ್ರ ಪೋಸ್ಟರ್ ಗಳನ್ನು ಶೇರ್ ಮಾಡ್ತಾ, ಅಭಿಮಾನಿಗಳೊಂದಿಗೆ ಕಾಂಟ್ಯಾಕ್ಟ್ ನಲ್ಲಿ ಇದ್ದರು. ಆದ್ರೆ ಈಗ ಅಭಿನಯ ಚಕ್ರವರ್ತಿ ಫೇಸ್ ಬುಕ್ ಗೆ ಸಹ ಎಂಟ್ರಿ ಕೊಟ್ಟಿದ್ದಾರೆ. ಹೌದು. ಎಷ್ಟೋ ದಿನಗಳ ಹಿಂದಯೇ ಫೇಸ್ ಬುಕ್ ನಿಂದ ದೂರ ಉಳಿದಿದ್ದ ಕಿಚ್ಚ ಈಗ ಮತ್ತೆ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ತಮ್ಮ ನೆಚ್ಚಿನ ನಾಯಕ ಮತ್ತೆ ಫೇಸ್ ಬುಕ್ ಗೆ ರೀ ಎಂಟ್ರಿ ಕೊಟ್ಟಿರೋದ್ರಿಂದ, ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

 

Add Comment