CORONA BREAKING- ಜನತಾ ಕರ್ಫ್ಯೂ ಸಕ್ಸಸ್ – ಇಂದು ರಾತ್ರಿಯಿಂದಲೇ ಲಾಕ್‍ಡೌನ್‍ಗೆ ಕೇಂದ್ರ ಆದೇಶ

1 Star2 Stars3 Stars4 Stars5 Stars (1 votes, average: 2.00 out of 5)
Loading...

ಭಾರತ ಕಂಡು ಕೇಳರಿಯದ ಬಂದ್‍ಗೆ ಸಾಕ್ಷಿಯಾಗಿದೆ. ಯಾವುದೇ ಪಕ್ಷ, ಯಾವುದೇ ಸಂಘಟನೆ, ಯಾವುದೇ ಹೋರಾಟ, ಯಾವುದೇ ಸಂಘರ್ಷಕ್ಕೂ ಬೆಲೆ ಕೊಡದ ಭಾರತೀಯರು, ಪ್ರಧಾನಿ ಮೋದಿಯವರ ಮಾತಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇಡೀ ಭಾರತಕ್ಕೆ ಭಾರತವೇ ಜನತಾ ಕರ್ಫ್ಯೂ ಆಚರಿಸಿದೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಜನತೆ ಮನೆಯೊಳಗೆ ಉಳಿದು ಬೆಂಬಲ ನೀಡಿದ್ದಾರೆ. ಮೋದಿ ವಿರೋಧಿಗಳ ತೀವ್ರ ವಿರೋಧಿ ಕ್ಯಾಂಪೇನ್, ನೆಗಟಿವ್ ಪೋಸ್ಟ್‍ಗಳ ಹೊರತಾಗಿಯೂ ಜನತೆ ದೇಶದ ಪರ ತಮ್ಮ ಕಾಳಜಿ, ಬದ್ಧತೆ ವ್ಯಕ್ತಪಡಿಸಿದ್ದಾರೆ. ಜನತಾ ಕರ್ಫ್ಯೂ ನಭೂತೋ ನಾ ಭವಿಷ್ಯತಿ ಎಂಬಂತೆ ಯಶಸ್ವಿಯಾಗಿದ್ದು, ದೇಶದ ಎಲ್ಲಾ ರಸ್ತೆಗಳು, ಹಳ್ಳಿಗಳ ಎಲ್ಲಾ ಗಲ್ಲಿಗಳೂ ಖಾಲಿ ಹೊಡೆಯುತ್ತಿವೆ. ಈ ಮಧ್ಯೆ ಇಂದು ಒಂದೇ ದಿನದಲ್ಲಿ ಕೊರೋನಾ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ದೇಶದಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ.

ಈ ಮಧ್ಯೆ, ಜನತಾ ಕರ್ಫ್ಯೂ ಯಶಸ್ವಿಯಾಗಿದ್ದು, ಮತ್ತೊಂದು ಹಂತದ ಹೋರಾಟಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಇದರ ಮೊದಲ ಹಂತವಾಗಿ, ಕೊರೋನಾ ಪೀಡಿತ ದೇಶದ 75 ಜಿಲ್ಲೆಗಳನ್ನು ತಕ್ಷಣದಿಂದಲೇ ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಆದೇಶಿಸಿದೆ. ಕೊರೋನಾ ಸೋಂಕು ಪತ್ತೆಯಾಗುವ ಹೊಸ ಜಿಲ್ಲೆಗಳನ್ನೂ ತಕ್ಷಣವೇ ಲಾಕ್‍ಡೌನ್ ಮಾಡುವಂತೆ ರಾಜ್ಯ ಸರಕಾರಗಳಿಗೆ ಸಂದೇಶ ನೀಡಿದೆ.

ಭಾರತದಲ್ಲಿ ಕೊರೋನಾ 3ನೇ ಹಂತ ಪ್ರವೇಶಿಸುತ್ತಿದ್ದು, ಭಾರೀ ಎಚ್ಚರಿಕೆಯಿಂದಿರಬೇಕಾಗಿದೆ. ಹೀಗಾಗಿ, ಸಂಪೂರ್ಣ ಲಾಕ್‍ಡೌನ್‍ಗೆ ಕೇಂದ್ರ ಸರಕಾರ ಆದೇಶ ನೀಡಿದೆ. ಅಂದರೆ, ಯಾರೂ ಕೂಡಾ ಯಾವ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ. ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ರಾಜ್ಯಗಳಿಗೆ ಆದೇಶ ನೀಡಿದೆ.

ಈಗಲೂ ಪರಿಸ್ಥಿತಿ ಕಂಟ್ರೋಲ್‍ಗೆ ಸಿಗದಿದ್ದರೆ, ಸಂಪೂರ್ಣ ದೇಶವನ್ನೇ ಲಾಕ್‍ಡೌನ್‍ಗೆ ಒಳಪಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ, ಈಗಾಗಲೇ ಮಾರ್ಚ್ 31ರವರೆಗೆ ಎಲ್ಲಾ ರೀತಿಯ ಪ್ರಯಾಣಿಕರ ರೈಲು ಸೇವೆ, ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದುಪಡಿಸಲಾಗಿದೆ.

Add Comment