BIG BREAKING-ಬೆಂಗಳೂರು, ಮಂಗಳೂರು, ಧಾರವಾಡ ಸೇರಿ 9 ಜಿಲ್ಲೆಗಳು ಲಾಕ್‍ಡೌನ್

1 Star2 Stars3 Stars4 Stars5 Stars (No Ratings Yet)
Loading...

 

ಸಾರ್ವಜನಿಕರೇ ಎಚ್ಚರ ಎಚ್ಚರ ! ಕೇಂದ್ರ ಸರಕಾರದ ಆದೇಶದ ಬೆನ್ನಲ್ಲೇ, ರಾಜ್ಯದ 9 ಜಿಲ್ಲೆಗಳಲ್ಲಿ 9 ದಿನಗಳ ಕಾಲ ಶಟ್‍ಡೌನ್ ಘೋಷಿಸಲಾಗಿದೆ. ನಾಳೆಯಿಂದ 31ನೇ ತಾರೀಕಿನವರೆಗೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಮತ್ತು ಬೆಳಗಾವಿ ಸೇರಿದಂತೆ ಕೋವಿಡ್-19 ವೈರಸ್ ಕಂಡು ಬಂದಿರುವ 9 ಜಿಲ್ಲೆಗಳಲ್ಲಿ ಶಟ್‍ಡೌನ್ ಘೋಷಿಸಲಾಗಿದೆ.

ಎಲ್ಲಾ ಜಿಲ್ಲೆಗಳಲ್ಲೂ ಕ್ವಾರಂಟೈನ್ ಘೋಷಿಸಲಾಗಿದ್ದು, ಈ ಜಿಲ್ಲೆಗಳಿಗೆ ಬಾಹ್ಯಸಂಪರ್ಕವನ್ನೇ ಕಡಿತಗೊಳಿಸಲು ಆದೇಶಿಸಿದೆ. ಅಂದರೆ, ಈ ಜಿಲ್ಲೆಗಳಿಗೆ ಅಂತರ್-ಜಿಲ್ಲಾ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಈ 9 ಜಿಲ್ಲೆಗಳಲ್ಲಿ ವೈದ್ಯಕೀಯ ಔಷಧಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಆದೇಶಿಸಿಲಾಗಿದೆ. ಅಗತ್ಯ ವಸ್ತುಗಳಾದ ಪೆಟ್ರೋಲ್, ಹಾಲು, ಪತ್ರಿಕೆ ದೊರೆಯಲಿದೆ. ದಿನಸಿ, ತರಕಾರಿ ಸೇವೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೊಟೇಲ್, ಮಾಲ್‍ಗಳು ಬಂದ್ ಆಗಲಿವೆ.

ಮಾರ್ಚ್ 31ರವರೆಗೆ ಯಾವುದೇ ಬಸ್ ಓಡಾಟ ಇರುವುದಿಲ್ಲ. ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ರಜೆ ಘೋಷಿಸಲಾಗಿದ್ದು, ಮಾರ್ಚ್ 31ರವರೆಗೆ ವರ್ಕ್ ಫ್ರಂ ಹೋಂಗೆ ಆದೇಶ ನೀಡಲಾಗಿದೆ. ಮಾಡಬೇಕಾಗಿರೋ ಕೆಲಸಗಳ ಪಟ್ಟಿಯನ್ನೂ ಶಿಕ್ಷಕರಿಗೆ ನೀಡಲಾಗಿದೆ.

ಈ ಮಧ್ಯೆ, ಜನತಾ ಕರ್ಫ್ಯೂ ಯಶಸ್ವಿಯಾಗಿದ್ದು, ಮತ್ತೊಂದು ಹಂತದ ಹೋರಾಟಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಇದರ ಮೊದಲ ಹಂತವಾಗಿ, ಕೊರೋನಾ ಪೀಡಿತ ದೇಶದ 75 ಜಿಲ್ಲೆಗಳನ್ನು ತಕ್ಷಣದಿಂದಲೇ ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಆದೇಶಿಸಿದೆ. ಕೊರೋನಾ ಸೋಂಕು ಪತ್ತೆಯಾಗುವ ಹೊಸ ಜಿಲ್ಲೆಗಳನ್ನೂ ತಕ್ಷಣವೇ ಲಾಕ್‍ಡೌನ್ ಮಾಡುವಂತೆ ರಾಜ್ಯ ಸರಕಾರಗಳಿಗೆ ಸಂದೇಶ ನೀಡಿದೆ.

ಭಾರತದಲ್ಲಿ ಕೊರೋನಾ 3ನೇ ಹಂತ ಪ್ರವೇಶಿಸುತ್ತಿದ್ದು, ಭಾರೀ ಎಚ್ಚರಿಕೆಯಿಂದಿರಬೇಕಾಗಿದೆ. ಹೀಗಾಗಿ, ಸಂಪೂರ್ಣ ಲಾಕ್‍ಡೌನ್‍ಗೆ ಕೇಂದ್ರ ಸರಕಾರ ಆದೇಶ ನೀಡಿದೆ. ಅಂದರೆ, ಯಾರೂ ಕೂಡಾ ಯಾವ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ. ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ರಾಜ್ಯಗಳಿಗೆ ಆದೇಶ ನೀಡಿದೆ.

ಈಗಲೂ ಪರಿಸ್ಥಿತಿ ಕಂಟ್ರೋಲ್‍ಗೆ ಸಿಗದಿದ್ದರೆ, ಸಂಪೂರ್ಣ ದೇಶವನ್ನೇ ಲಾಕ್‍ಡೌನ್‍ಗೆ ಒಳಪಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ, ಈಗಾಗಲೇ ಮಾರ್ಚ್ 31ರವರೆಗೆ ಎಲ್ಲಾ ರೀತಿಯ ಪ್ರಯಾಣಿಕರ ರೈಲು ಸೇವೆ, ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದುಪಡಿಸಲಾಗಿದೆ.

Add Comment