BIG BREAKING- ಇಂದು ಸಂಜೆಯಿಂದಲೇ ಕರ್ನಾಟಕ ಲಾಕ್‍ಡೌನ್?

ಎಷ್ಟೇ ಹೇಳಿದರೂ ಬುದ್ದಿ ಕಲಿಯದ ರಾಜ್ಯದ ಜನತೆಗೆ ರಾಜ್ಯ ಸರಕಾರವೇ ಬುದ್ದಿ ಕಲಿಸಲು ಹೊರಟಿದೆ. ಕರೋನಾ ಸೋಂಕು ಹರಡುತ್ತೆ, ಮನೆಯಲ್ಲೇ ಇರಿ ಅಂತ ಹೇಳಿದ್ರೂ ಜನ ಕೇಳ್ತಿಲ್ಲ. ಅನಗತ್ಯವಾಗಿ ಓಡಾಡ್ತಿರೋ ಹಿನ್ನೆಲೆಯಲ್ಲಿ, ಸರಕಾರ ದಂಡ ಪ್ರಯೋಗ ನಡೆಸಲು ಉದ್ದೇಶಿಸಿದೆ. ಇದೀಗ ಹಿರಿಯ ಅಧಿಕಾರಿಗಳ, ವೈದ್ಯಾಧಿಕಾರಿಗಳ ಸಭೆ ನಡೆಸಿದೆ ಸಿಎಂ ಯಡಿಯೂರಪ್ಪ ಇಡೀ ರಾಜ್ಯವನ್ನೇ ಲಾಕ್‍ಡೌನ್ ಮಾಡಲು ಚಿಂತನೆ ನಡೆಸಿದ್ದಾರೆ.

ಕೆಲವೇ ನಿಮಿಷಗಳ ಹಿಂದೆ ಪತ್ರಿಕಾಗೋಷ್ಟಿ ನಡೆಸಿದೆ ಸಿಎಂ ಯಡಿಯೂರಪ್ಪ, ಲಾಕ್‍ಡೌನ್‍ಗೆ ಚಿಂತನೆ ನಡೆಸಿರುವುದಾಗಿ ಆದೇಶಿಸಿದ್ದಾರೆ. ನಿನ್ನೆ 9 ಜಿಲ್ಲೆಗಳ ಲಾಕ್‍ಡೌನ್‍ಗೆ ಆದೇಶಿಸಲಾಗಿತ್ತು. ಆದರೆ, ಜನತೆ ಮಾತ್ರ ಕ್ಯಾರೇ ಎನ್ನದೆ, ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಗಂಭೀರ ಅಪಾಯ ಎದುರಾಗುವುದನ್ನು ಮನಗೊಂಡ ಯಡಿಯೂರಪ್ಪ ಸರಕಾರ ಇದೀಗ ಸಂಪೂರ್ಣ ಲಾಕ್‍ಡೌನ್‍ಗೆ ಮುಂದಾಗಿದ್ದಾರೆ,.

ಆದಾಗ್ಯೂ, ವೈದ್ಯಕೀಯ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಎರಡು ತಿಂಗಳ ರೇಷನ್ ಕೂಡಾ ಬಡವರಿಗೆ ಉಚಿತವಾಗಿ ತಲುಪಿಸುವುದಾಗಿ ಸರಕಾರ ಭರವಸೆ ನೀಡಿದೆ. ದಯವಿಟ್ಟು. ಕೊರೋನಾ ತಡೆಗಟ್ಟಲು ಎಲ್ಲರೂ ಸ್ವಯಂ ಪ್ರೇರಿತವಾಗಿ ಸಹಕರಿಸಿ ಅಂತ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಎಲ್ಲಾ ಅಂಗಡಿ ಮುಂಗಟ್ಟುಗಳು, ಕಚೇರಿಗಳನ್ನು, ಅವಶ್ಯಕವಲ್ಲದ ಸೇವೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಸರಕಾರ ಆದೇಶ ನೀಡಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೆಟಿವಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಇಂದು ಸಂಜೆಯೇ ಲಾಕ್‍ಡೌನ್ ಆದೇಶ ಹೊರಬೀಳಲಿದೆ

Add Comment