ನೂತನ ಕ್ಯಾಂಟೀನ್ ಆರಂಭಿಸಿದ ಗೌತಮ್ ಗಂಭೀರ್-ಸ್ಪೆಷಾಲಿಟಿ ಕೇಳಿದ್ರೆ ಶಾಕ್ ಆಗ್ತೀರಾ

ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಅವರು ದೆಹಲಿಯಲ್ಲಿ ಎರಡನೇ ಕ್ಯಾಂಟೀನ್ ತೆರಿದಿದ್ದಾರೆ. ಇನ್ನು ಈ ಕ್ಯಾಂಟೀನ್ ನಲ್ಲಿ ಒಂದು ರೂಪಾಯಿಗೆ ಒಂದು ಊಟ ದೊರಕುವುದೇ ವಿಶೇಷವಾಗಿದೆ. ಈ ಕ್ಯಾಂಟೀನ್ ಹೆಸರು ‘ಜನ್ ರಸೋಯಿ’ ಆಗಿದ್ದು, ಈ ಕ್ಯಾಂಟೀನ್ ನಲ್ಲಿ ಒಂದು ರೂಪಾಯಿಗೆ ಊಟ ನೀಡುವುದಕ್ಕೆ ಕಾರಣವೇನು ಎಂಬುದನ್ನು ಗೌತಮ್ ಗಂಭೀರ್ ತಿಳಿಸಿದ್ದಾರೆ. ಅಸಲಿಗೆ ಬಡವರ ಹೊಟ್ಟೆ ತುಂಬಿಸಲು ಪೌಷ್ಠಿಕ ಆಹಾರ ನೀಡುವುದೇ ಜನ್ ರಸೋಯಿ ಕ್ಯಾಂಟೀನ್ ನ ಉದ್ದೇಶವಾಗಿದೆ. ಇದು ಕೇವಲ ಕ್ಯಾಂಟೀನ್ ಅಲ್ಲ, ಬಡವರ ಹೊಟ್ಟೆ ತುಂಬಿಸುವ ಒಂದು ಅಭಿಯಾನ ಎಂದು ಅವರು ಹೇಳಿದ್ದಾರೆ. ಇನ್ನು ಈ ಕ್ಯಾಂಟೀನ್ ನ್ಯೂ ಅಶೋಕ್ ನಗರದಲ್ಲಿ ಆರಂಭಿಸಲಾಗಿದ್ದು, ಇಲ್ಲಿ ಒಮ್ಮೆಲೆ ಸುಮಾರು 50 ಜನರಿಗೆ ಊಟ ಬಡಿಸಬಹುದಾಗಿದೆ. ಇನ್ನು ಗಂಭೀರ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

Add Comment