DEADLY BREAKING- ಕರ್ನಾಟಕ ಲಾಕ್‍ಡೌನ್? -ಈಗಲೇ ಈ ಎಲ್ಲಾ ಕೆಲಸ ಮುಗಿಸಿ

ಕರ್ನಾಟಕದ ಮಹಾಜನರೇ, ಯಡಿಯೂರಪ್ಪ ಹೇಳಿದ್ರೂ ಕೇಳಲಿಲ್ಲ. ಮೋದಿ ಹೇಳಿದ್ರೂ ಕೇಳ್ತಿಲ್ಲ. ನಿನ್ನೆ ನಿನ್ನೆಗೆ, ಇಂದು ಇಂದಿಗೆ ಅಂತ ರಾಜಾರೋಷವಾಗಿ ಓಡಾಡ್ತಿದ್ದೀರಲ್ಲಾ.. ಈ ಸುದ್ದಿಯನ್ನು ಗಮನವಿಟ್ಟು ಓದಿ. ಹೆಚ್ಚು ಕಮ್ಮಿ ಇಂದು ಸಂಜೆಯೇ ಸಂಪೂರ್ಣ ಕರ್ನಾಟಕ ಲಾಕ್‍ಡೌನ್ ಆಗಲಿದೆ. ಇನ್ನೊಂದೇ ಒಂದು ಮೀಟಿಂಗ್ ಸಂಜೆ ನಡೆದರೆ, ಸಾಕು, ಕರ್ನಾಟಕ ಕಂಪ್ಲೀಟ್ ಕ್ಲೋಸ್ ಆಗಲಿದೆ.

ಹೇಗಿದ್ದರೂ ಈಗ ಬೀಡಾಡಿಗಳಂತೆ ಸಿಟಿಗಳಲ್ಲಿ ಓಡಾಡ್ತಿದ್ದೀರಿ. ತಕ್ಷಣವೇ ಮನೆ ಸೇರಿಕೊಳ್ಳಿ. ಸಂಜೆ ಮೇಲೆ ಯಾವ ಬಸ್ಸೂ ಸಿಗಲ್ಲ. ಎರಡು ವಾರಕ್ಕಾಗುವಷ್ಟು ದಿನಸಿ. ತರಕಾರಿ ತೆಗೆದುಕೊಂಡು ಹೋಗಿ ಮನೆಗೆ. ಇಲ್ಲದಿದ್ದರೆ, ಮನೆಯಲ್ಲಿ ನರಕ ದರ್ಶನವಾಗಲಿದೆ. ಅಜ್ಜ-ಅಜ್ಜಿ, ಅಪ್ಪ-ಅಮ್ಮ ಯಾರಾದ್ರೂ ಹಿರಿಯರಿದ್ದರೆ, ರೋಗಿಗಳಿದ್ದರೆ ಅವರಿಗೆ ಅಗತ್ಯವಾದ ಔಷಧಿಗಳನ್ನು ತೆಗೆದುಕೊಂಡು ಹೋಗಿ. ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಅಗತ್ಯವಾದ ಜ್ವರ, ಹೊಟ್ಟೆನೋವು, ಲೂಸ್ ಮೋಷನ್, ಕೆಮ್ಮು, ಶೀತಕ್ಕೆ ಸಂಬಂಧಿಸಿದ ಸಿರಪ್‍ಗಳನ್ನು ಕೊಂಡೊಯ್ಯಿರಿ. ಮೆಡಿಕಲ್‍ಗಳು ಓಪನ್ ಇದ್ದರೂ ಅನಗತ್ಯವಾಗಿ ಓಡಾಡುವುದನ್ನು ಈ ಮೂಲಕ ತಪ್ಪಿಸಬಹುದು. ಮುಂದೆ ಹೇಗೋ ಏನೋ ಗೊತ್ತಿಲ್ಲ.

ಬೇಸಿಗೆ ಕಾಲ, ಕರೆಂಟ್ ಹೆಚ್ಚು ಇರಲ್ಲ. ಎರಡು ವಾರಕ್ಕಾಗುವಷ್ಟು ಕ್ಯಾಂಡಲ್‍ಗಳನ್ನು ತೆಗೆದುಕೊಂಡು ಹೋಗಿ. ಮನೆಯಲ್ಲಿ ಅಕ್ಕಿ, ಉಪ್ಪು, ಸಕ್ಕರೆ, ಬೆಲ್ಲ, ದಿನಸಿ ಕಡಿಮೆಯಾಗದಂತೆ ಎಚ್ಚರ ವಹಿಸಿಕೊಳ್ಳಿ. ಹಾಗಂತ ಏಕ್‍ದಂ ದಿನಸಿ ಅಂಗಡಿಗಳಿಗೆ ಮುಗಿಬೀಳಬೇಡಿ. ಕೈಯಲ್ಲಿ ಖರ್ಚಿಗೆ ಅಂತ ಸ್ವಲ್ಪ ಕ್ಯಾಷ್ ಇಟ್ಟುಕೊಳ್ಳಿ. ಮುಂದೆ ಬ್ಯಾಂಕ್, ಎಟಿಎಂಗಳು ಕ್ಲೋಸ್ ಆದರೆ, ವೃಥಾ ತೊಂದರೆ. ಎಚ್ಚರವಿರಲಿ.

ಎಷ್ಟೇ ಹೇಳಿದರೂ ಬುದ್ದಿ ಕಲಿಯದ ರಾಜ್ಯದ ಜನತೆಗೆ ರಾಜ್ಯ ಸರಕಾರವೇ ಬುದ್ದಿ ಕಲಿಸಲು ಹೊರಟಿದೆ. ಕರೋನಾ ಸೋಂಕು ಹರಡುತ್ತೆ, ಮನೆಯಲ್ಲೇ ಇರಿ ಅಂತ ಹೇಳಿದ್ರೂ ಜನ ಕೇಳ್ತಿಲ್ಲ. ಅನಗತ್ಯವಾಗಿ ಓಡಾಡ್ತಿರೋ ಹಿನ್ನೆಲೆಯಲ್ಲಿ, ಸರಕಾರ ದಂಡ ಪ್ರಯೋಗ ನಡೆಸಲು ಉದ್ದೇಶಿಸಿದೆ. ಲಾಕ್‍ಡೌನ್ ಘೋಷಣೆಯಾದರೆ ಹೊರಗೆ ಬರುವಂತೆಯೇ ಇಲ್ಲ. ಪೊಲೀಸರು ಸರ್ಪಗಾವಲು ಹಾಕಿ ಕಾಯಲಿದ್ದಾರೆ. ಅದನ್ನು ತಪ್ಪಿಯೂ ರೋಡಿಗಿಳಿದರೆ ಖಂಡಿತವಾಗಿಯೂ ರಾಧಿಕಾ ಸಿಗಲ್ಲ, 2 ವರ್ಷ ಜೈಲು ಶಿಕ್ಷೆ ಫಿಕ್ಸ್ ಆಗುತ್ತೆ. ಹುಷಾರ್

Add Comment