BIG BREAKING- ಲಾಕ್‍ಡೌನ್ ಬೆನ್ನಲ್ಲೇ ರಾತ್ರೋರಾತ್ರಿ ಹೊಸ ಸರಕಾರ ಅಧಿಕಾರಕ್ಕೆ-ಮೋದಿ ಆದೇಶ

 

ದೇಶಾದ್ಯಂತ ಕೊರೋನಾ ತಾಂಡವವಾಡುತ್ತಿದೆ. ಸರಿಸುಮಾರು 10ಕ್ಕೂ ಹೆಚ್ಚು ರಾಜ್ಯಗಳು ಲಾಕ್‍ಡೌನ್ ಘೋಷಿಸಿವೆ. ಕೆಲವೇ ನಿಮಿಷಗಳ ಹಿಂದೆ ಕರ್ನಾಟಕ ಸಿಎಂ ಯಡಿಯೂರಪ್ಪನವರು ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಿಸಿದ್ದಾರೆ. ನಾಳೆಯಿಂದ ಯಾರೇ ರೋಡಿಗಿಳಿದೂ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು. ಎಲ್ಲರೂ ಎಚ್ಚರಿಕೆಯಿಂದಿರಿ, ಕೊರೋನಾ ವಿರುದ್ಧ ಹೋರಾಡಿ.

ಕೊರೋನಾ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಮನಗೊಂಡ ಪ್ರಧಾನಿ ನರೇಂದ್ರ ಮೋದಿ, ದಿಢೀರ್ ಆದೇಶ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಮಲನಾಥ್ ಸರಕಾರ ಉರುಳಿಬಿದ್ದಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ. ಇದನ್ನು ಗಮನಿಸಿದ ಮೋದಿ, ತಕ್ಷಣವೇ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಗೆ ಆದೇಶ ನೀಡಿದ್ದಾರೆ. ದಿಡೀರ್ ದಿಢೀರ್ ನಡೆದ ಬೆಳವಣಿಗೆಗಳಲ್ಲಿ ರಾತ್ರೋರಾತ್ರಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ. ರಾತ್ರಿ 10ಗಂಟೆ ಸುಮಾರಿಗೆ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 8 ಗಂಟೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಮೋದಿ-ಶಾ ಸೂಚನೆಯಂತೆ ಚೌಹಾಣ್‍ರನ್ನು ಶಾಸಕಾಂಗ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತಕ್ಷಣವೇ ಸರಕಾರ ರಚನೆಗೆ ಹಕ್ಕು ಮಂಡನೆ ಮಾಡಲಾಯಿತು. ರಾಜಭವನದಲ್ಲೇ ನಡೆದ ದಿಢೀರ್ ಕಾರ್ಯಕ್ರಮದಲ್ಲಿ ಚೌಹಾಣ್ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸರಕಾರ ರಚನೆಯ ಬೆನ್ನಲ್ಲೇ ಟ್ವೀಟ್ ಮಾಡಿದ ಚೌಹಾಣ್. ಸರಕಾರ ರಚಿಸಲು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ಮೊದಲ ಕೆಲಸ ಕೊರೋನಾ ನಿವಾರಣೆ. ಉಳಿದದ್ದನ್ನು ಆಮೇಲೆ ಮಾತನಾಡುತ್ತೇನೆ ಅಂತ ಹೇಳಿದ್ರು. ಬೆನ್ನಲ್ಲೇ ಅಧಿಕಾರಿಗಳ ಸಭೆ ಕರೆದು ಕೊರೋನಾ ಬಗ್ಗೆ ಚರ್ಚೆ ನಡೆಸಿದ್ರು.

Add Comment