BIG BREAKING- ಬೆಳಗ್ಗೆ ಸಿಎಂ ಫೈನಲ್ ವಾರ್ನಿಂಗ್, ಸಂಜೆ ಕರ್ಫ್ಯೂ ಜಾರಿ?- ಅರ್ಥ ಮಾಡಿಕೊಳ್ಳಿ

ಎಷ್ಟೇ ಹೇಳಿದರೂ ಬುದ್ದಿ ಕೇಳದ ಜನರಿಗೆ ಸಿಎಂ ಯಡಿಯೂರಪ್ಪ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. ಪೊಲೀಸರಿಗೆ ತಮ್ಮ ಕರ್ತವ್ಯ ನಿಭಾಯಿಸಲು ಬಿಡಿ. ತೀರಾ ಅಗತ್ಯ ಸಂದರ್ಭದಲ್ಲಿ ಮಾತ್ರ ಖರೀದಿ ಮಾಡಿ, ಯುಗಾದಿ ಹಬ್ಬವನ್ನು ಸರಳವಾಗಿ ಮನೆಯಲ್ಲೇ ಮಾಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಜನರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ. ಮುಂದಾಗುವ ಕಾನೂನು ರೀತಿಯ ಅನಾಹುತಗಳಿಗೆ ನನ್ನನ್ನು ಹೊಣೆ ಮಾಡಬೇಡಿ ಎಂದು ಯಡಿಯೂರಪ್ಪ ಗರಂ ಆಗಿಯೇ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಏನೇ ಆದರೂ ಅರ್ಥ ಮಾಡಿಕೊಳ್ಳದಿದ್ದರೆ, ಕಠಿಣ ಕ್ರಮಗಳಿಗೆ ಇಳಿಯುವುದು ಸರಕಾರಕ್ಕೆ ಅನಿವಾರ್ಯವಾಗಲಿದೆ ಎಂದು ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರೂ ಮನವಿ ಮಾಡಿದ್ದಾರೆ. ಆದರೆ, ಜನರಿಗೆ ಪರಿಸ್ಥಿತಿಯ ಅರ್ಥವಾಗುತ್ತಿಲ್ಲ. ಈಗಾಗಲೇ ಕರ್ಫ್ಯೂ ವಾತಾವರಣವಿದೆ ಎಂದು ಸಿಎಂ ಹೇಳಿದ್ದಾರೆ. ಜನಸಂದಣಿ ತಡೆಯುವ ನಿಟ್ಟಿನಲ್ಲಿ, ಇಂದಿರಾ ಕ್ಯಾಂಟೀನ್ ಕೂಡಾ ಮುಚ್ಚಲು ಸರಕಾರ ಆದೇಶ ನೀಡಿದೆ. ಇದು ಜನರೇ ಕೈಯ್ಯಾರೆ ಮಾಡಿಕೊಂಡ ನಷ್ಟ. ಉಚಿತ ಊಟ ನೀಡುವ ಸರಕಾರದ ಚಿಂತನೆಗೆ ಜನರೇ ಕಲ್ಲು ಹಾಕಿದಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಜನತೆ ಮನೆಯಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕಿದರೆ, ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಅಧಿಕೃತವಾಗಿ ಕರ್ಫ್ಯೂ ಜಾರಿ ಮಾಡಬೇಕಾದ ಅನಿವಾರ್ಯತೆಗೆ ಸರಕಾರ ಸಿಲುಕಲಿದೆ. ಹಾಲು ದಿನಸಿ, ತರಕಾರಿ ಅಂಗಡಿಗಳನ್ನು ತೆರೆಯೋ ಸರಕಾರ ಸದುದ್ದೇಶ ಅರ್ಥ ಮಾಡಿಕೊಂಡು ಬಳಸಿ. ಗುಂಪಾಗಿ ಮುಗಿಬೀಳಬೇಡಿ. ಅನಗತ್ಯವಾಗಿ ಅಂಗಡಿಗಳಿಗೆ ಹೋಗಲೇಬೇಡಿ. ಕರ್ಫ್ಯೂ ಜಾರಿಯಾದರೆ, ಹಾಲಿಗೂ ಪರದಾಡಬೇಕಾದ ಸ್ಥಿತಿ ಎದುರಾದೀತು ಎಚ್ಚರ.

ಮಹಾಜನರೇ, ಈಗಲಾದರೂ ಅರ್ಥ ಮಾಡಿಕೊಳ್ಳಿ, ಎಡ ಬಲ, ಮೋದಿ, ಸಂಘ ಪರಿವಾರವನ್ನು ವಿರೋಧಿಸೋ ನೆಪದಲ್ಲಿ ನಿಮ್ಮ ಮತ್ತು ನಿಮ್ಮ ಸುತ್ತಲಿನ ಪರಿವಾರಗಳನ್ನು ಯಮಪುರಿಗೆ ತಳ್ಳಬೇಡಿ.

Add Comment