BIG BREAKING- ಸಂಜಯನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರಿಗೆ ಗುಂಡೇಟು

ಬೆಂಗಳೂರು : ಬೆಂಗಳೂರಿನ ಸಂಜಯನಗರದಲ್ಲಿ ನಿನ್ನೆ ಪೊಲೀಸರ ಮೇಲೆ ಗುಂಡೇಟು ನಡೆಸಿದ ಧೂರ್ತರಿಗೆ ಇದೀಗ ಗುಂಡೇಟು ಬಿದ್ದಿದೆ. ಸಂಜಯನಗರದಲ್ಲಿ ಹೊರಗೆ ಬೇಕಾಬಿಟ್ಟಿ ಓಡಾಡಬೇಡಿ ಎಂದು ಬುದ್ದಿ ಹೇಳಿದ್ದ ಪೊಲೀಸರ ಮೇಲೆ ಇಬ್ಬರು ಪುಂಡರು ಹಲ್ಲೆ ನಡೆಸಿದ್ದರು. ಆ ಬಳಿಕ ಅವರಿಬ್ಬರನ್ನೂ ಬಂಧಿಸಲಾಗಿತ್ತು. ಆದರೆ, ಈ ದುರಹಂಕಾರಿಗಳ ಅಟ್ಟಹಾಸ ಅಲ್ಲಿಗೆ ನಿಲ್ಲಲಿಲ್ಲ.

ನಾನ್‍ಬೇಲೇಬಲ್ ಕೇಸ್ ದಾಖಲಾಗಿದ್ದರೂ, ಇವರು ಹುಚ್ಚಾಟ ನಿಲ್ಲಲಿಲ್ಲ. ಇಂದು ಬೆಳಗ್ಗೆ ಸ್ಥಳ ಮಹರಿಗೆ ಆರೋಪಿಗಳನ್ನು ಕರೆದೊಯ್ದಿದ್ದಾರೆ. ಆದರೆ, ಸ್ಥಳಕ್ಕೆ ತಲುಪುತ್ತಿದ್ದಂತೆಯೇ ತಮ್ಮ ನಿಜ ರೂಪ ತೋರಿಸಿದ ಆರೋಪಿಗಳು, ಅಲ್ಲೇ ಇದ್ದ ಚೂಪಾದ ಕಲ್ಲಿನಿಂದ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕೈಯನ್ನು ಕೊಯ್ಯಲು ಗೀರಿದ್ದಾರೆ. ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಅಲ್ಲದೆ ಮಹಿಳಾ ಸಬ್ ಇನ್ಸ್‍ಪೆಕ್ಟರ್ ರೂಪಾ ಮೇಲೂ ಹಲ್ಲೆ ನಡೆಸಿದ್ದಾನೆ ಆರೋಪಿ ತಾಜುದ್ದೀನ್. ಅಲ್ಲಿಂದ ಓಡಲು ಆರಂಭಿಸಿದ್ದಾನೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಇನ್ಸ್‍ಪೆಕ್ಟರ್ ಬಾಲಾಜಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗ್ತಿದೆ.

ಜನರು ಈಗಲಾದರೂ ಎಚ್ಚೆತ್ತುಕೊಂಡು, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಬೇಕು. ಇನ್ನು ಕೇವಲ 20 ದಿನ ಪೊಲೀಸರ ಜೊತೆ ಸರಕಾರದ ಜೊತೆ ಸಹಕರಿಸಿ.

Add Comment