BIG BREAKING- ಫ್ರೀ ಗ್ಯಾಸ್, ಅಕೌಂಟ್‍ಗೆ ದುಡ್ಡು- ಕೇಂದ್ರದಿಂದ ಕೊರೋನಾ ಪ್ಯಾಕೇಜ್ ಘೋಷಣೆ

ಲಾಕ್‍ಡೌನ್ ಮಧ್ಯೆಯೇ ಕೇಂದ್ರ ಸರಕಾರ 1.70 ಲಕ್ಷ ಕೋಟಿ ಮೊತ್ತದ ಕೊರೋನಾ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಹೈಲೆವೆಲ್ ಮೀಟಿಂಗ್ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಡವರ, ಕೃಷಿಕರ, ಕಾರ್ಮಿಕರಿಗೆ ಭಾರೀ ಮೊತ್ತದ ನೆರವು ಘೋಷಿಸಿದೆ. ಬಡವರಿಗೆ, ಕಾರ್ಮಿಕರಿಗೆ, ದಿನಗೂಲಿ ನೌಕರರ ನೆರವಿಗೆ ನಿಂತ ಕೇಂದ್ರ ಸರಕಾರ, ಕೊರೋನಾ ಚಿಕಿತ್ಸಕರ ನೆರವಿಗೂ ಧಾವಿಸಿದೆ.

ಮೋದಿ ಸರಕಾರದ ಘೋಷಣೆಗಳು ಇಂತಿವೆ

ಕೊರೋನಾ ಚಿಕಿತ್ಸೆಗೆ ಕೆಲಸ ಮಾಡ್ತಿರೋ ವೈದ್ಯರಿಗೆ, ಅರೆವೈದ್ಯಕೀಯ ಸಿಬ್ಬಂದಿಗೆ, ಆರೋಗ್ಯ ಕಾರ್ಯಕರ್ತರಿಗೆ 3 ತಿಂಗಳ ಕಾಲ ತಲಾ 50 ಲಕ್ಷ ವಿಮಾ ಸೌಲಭ್ಯ ಘೋಷಣೆ

ಪ್ರಧಾನಮಂತ್ರಿ ಗರೀಬ್ ಅನ್ನ ಯೋಜನೆ ಘೋಷಣೆ. ಮೂರು ತಿಂಗಳ ಕಾಲ ಪ್ರತಿ ಬಡವ್ಯಕ್ತಿಗೆ ಮಾಸಿಕ ತಲಾ 5 ಕೆ.ಜಿ ಅಕ್ಕಿ ಮತ್ತು ಕುಟುಂಬಕ್ಕೆ 1 ಕೆಜಿ ಇತರ ಧಾನ್ಯಗಳ ಹಂಚಿಕೆ. ಇದು ಈಗಾಗಲೇ ಆಹಾರ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿಗೆ ಹೊರತಾಗಿರುತ್ತದೆ. ಅಂದರೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಇದರಿಂದ ದೇಶದ 80 ಕೋಟಿ ಜನರಿಗೆ ನೆರವಾಗಲಿದೆ.

ದೇಶದ 3 ಕೋಟಿ ಬಡ ಹಿರಿಯ ನಾಗರಿಕರಿಗೆ, ಬಡ ವಿಧವೆಯರಿಗೆ, ಬಡ ದಿವ್ಯಚೇತನರಿಗೆ ತಲಾ 1 ಸಾವಿರ ರೂಪಾಯಿ ಹೆಚ್ಚುವರಿ ನೆರವು.

ಎಂನರೇಗಾ ಯೋಜನೆಯಡಿ ದಿನಗೂಲಿಯನ್ನು 202 ರೂಪಾಯಿಗೆ ಏರಿಕೆ -5 ಕೋಟಿ ಕುಟುಂಬಳಿಗೆ ನೆರವು.
8.69 ಕೋಟಿ ರೈತರಿಗೆ ಏಪ್ರಿಲ್‍ನಲ್ಲಿ ಸಲ್ಲಬೇಕಿರೋ 2000 ರೂಪಾಯಿ ಕಿಸಾನ್ ಸಮ್ಮಾನ್ ನಿಧಿ ಈಗಲೇ ಮುಂಗಡ ವರ್ಗಾವಣೆ.

20 ಕೋಟಿ ಮಹಿಳಾ ಜನಧನ್ ಖಾತೆದಾರರಿಗೆ ಮುಂದಿನ ಮೂರು ತಿಂಗಳು ಮಾಸಿಕ 500 ರೂಪಾಯಿ ವರ್ಗಾವಣೆ
8.3 ಕೋಟಿ ಉಜ್ವಲಾ ಯೋಜನೆ ಪಲಾನುಭವಿಗಳಿಗೆ ಮುಂದಿನ 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್
7 ಕೋಟಿ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ 63ಲಕ್ಷ ಸ್ವ ಸಹಾಯ ಗುಂಪುಗಳ ಭದ್ರತೆ ರಹಿತ ಸಾಲದ ಮೊತ್ತ 20 ಲಕ್ಷಕ್ಕೆ ದ್ವಿಗುಣ
15 ಸಾವಿರ ಮಾಸಿಕ ವೇತನಕ್ಕಿಂತ ಕಡಿಮೆ ಇರುವ ನೌಕರರಿಗೆ ಮೂರು ತಿಂಗಳ ಕಾಲ ಭವಿಷ್ಯ ನಿಧಿಗೆ ಸರಕಾರದಿಂದ 12% ಮತ್ತು ಕಂಪನಿಯಿಂದ 12% ಪಾಲು, ಅಲ್ಲದೆ 75% ಭವಿಷ್ಯ ನಿಧಿಯಿಂದ ಮುಂಗಡ ಪಡೆಯಲು ಅವಕಾಶ -4.8 ಕೋಟಿ ನೌಕರರಿಗೆ ಲಾಭ

ಕಟ್ಟಡ ಕಾರ್ಮಿಕರಿಗೆ ನೆರವು ನೀಡಲು 3.5 ಕೋಟಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ರಾಜ್ಯಗಳಿಗೆ 31 ಸಾವಿರ ಕೋಟಿ ಬಿಡುಗಡೆ

Add Comment