ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದಿಂದ ದಿಢೀರ್ ಆಸ್ಪತ್ರೆಗೆ ದಾಖಲು

ಕನ್ನಡ ಚಿತ್ರರಂಗದ ಹಿರಿಯ ನಟ,ನಿರ್ಮಾಪಕ ರಾಫವೇಂದ್ರ ರಾಜ್ ಕುಮಾರ್ ಅವರು ಅನಾರೋಗ್ಯಕ್ಕೀಡಾಗಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾದ ರಾಘಣ್ಣ ಅವರನ್ನು ನೋಡಲು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ
ಕುಟುಂಬಸ್ಥರು ಭೇಟಿ ನೀಡಿದ್ದಾರೆ.
ಆಸ್ಪತ್ರೆಯ ವೈದ್ಯರಿಂದ ರಾಘಣ್ಣ ಅವರನ್ನು ಹೆಚ್ಚಿನ ನಿಗಾ ವಹಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಘವೇಂದ್ರ ರಾಜ್‍ಕುಮಾರ್ ಅವರು
ಮಂಗಳವಾರ ಬೆಳಗ್ಗೆ ಶೂಟಿಂಗ್ ನಲ್ಲಿ ಕಾರ್ಯನಿರತರಾಗಿದ್ದ ರಾಘವೇಂದ್ರ ರಾಜಕುಮಾರ್ ಅವರು ದಿಢೀರನೆ ಅನಾರೋಗ್ಯದಿಂದ ಮಂಗಳವಾರ
ಸಂಜೆ 6 ಗಂಟೆ ವೇಳೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ದಾಖಲಾಗಿದ್ದಾರೆ.
ಸದ್ಯ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆದ್ದರಿಂದ ತಂದೆಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ,ಅವರು ಸತತ ಓಡಾಟ ಮತ್ತು ಚಿತ್ರೀಕರಣದಿಂದ ಬಳಲಿದ್ದರು ಎಂದು ಪುತ್ರ
ವಿನಯ್ ರಾಜ್ ಕುಮಾರ್ ಅವರು ಮಾಧ್ಯಮಗಳಿಗೆ
‌ಹೇಳಿಕೆ ನೀಡಿದ್ದಾರೆ.
ಸದ್ಯ ರಾಘಣ್ಣ ಅವರು ಆಸ್ಪತ್ರೆಯಲ್ಲಿ ಆರಾಮವಾಗಿ ಇದ್ದಾರೆ. ಆದರೆ ಶೂಟಿಂಗ್ ಇತ್ತು ವೇಳೆ ಅವರಿಗೆ ಸುಸ್ತಾಗಿತ್ತು. ಅದಕ್ಕೆ ಆಡ್ಮಿಟ್ ಮಾಡಿದ್ದಾರೆ ಅಷ್ಟೇ.
ಹೀಗಾಗಿ‌ ಚೆಕ್ ಅಫ್ ಗೆ‌ ಅಂತ ಆಸ್ಪತ್ರೆಗೆ ಬಂದಿದ್ದಾರೆ.
ಇದು ರೆಗ್ಯುಲರ್ ಚೆಕ್ ಅಪ್ ತರಾನೇ. ಯಾರು ಆತಂಕಪಡೊ‌ ಅಗತ್ಯ ಇಲ್ಲ. ನಾಳೆವರೆಗೂ ಅಬ್ಸರ್ವೇಷನಲ್ಲಿ ಇದ್ದು ಬೆಳಿಗ್ಗೆ ಡಿಸ್ಚಾರ್ಜ್ ಆಗ್ತಾರೆ ಎಂದು ನಟ ಸಂಬಂಧಿಕ ಮುರುಳಿ ತಿಳಿಸಿದ್ದಾರೆ.
ಆದಾಗ್ಯೂ ನಾಳೆ ಬುಧವಾರ ರಾಘಣ್ಣ ಅವರಿಗೆ ಆಂಜಿಯೋ ಬ್ಲಾಸ್ಟ್ ಮಾಡೋ ಸಾಧ್ಯತೆಯಿದೆ,
ಹೃದಯ ಬಡಿತವನ್ನ ಕಮ್ಮಿ ಮಾಡುವ ಚಿಕಿತ್ಸೆ ಅವರಿಗೆ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಸಣ್ಣ ಸರ್ಜರಿಯೊಂದು ನಡೆಯಲಿದ್ದು,
ಹೃದಯ ಬಡಿತ ಜಾಸ್ತಿಯಾಗದಂತೆ ತಡೆಯುವ ಚಿಕಿತ್ಸೆ ಸರ್ಜರಿ ಇದಾಗಿದೆ. ಇದಕ್ಕಾಗಿ Icd ಸರ್ಜರಿ ಮಾಡಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಸಿದ್ದತೆ ನಡೆಸಿದ್ದಾರೆ.‌ (Icd- ಚಿಕಿತ್ಸೆ ಹೃದಯ ಬಡಿತ ಜಾಸ್ತಿಯಾಗುವುದನ್ನ ಗಮನಿಸುತ್ತಾ ಇರುತ್ತೆ,ಒಂದು ವೇಳೆ ಹೃದಯ ಬಡಿತ ಜಾಸ್ತಿಯಾಗ್ತಿದ್ದಂತೆ ತಕ್ಷಣ ತನ್ನ ಕಾರ್ಯಪ್ರವೃತ್ತವಾಗುತ್ತೆ, ಕೂಡಲೇ ಹೃದಯ ಬಡಿತವನ್ನ ಹತೋಟಿಗೆ ತರುವ ಕೆಲಸ ಮಾಡುತ್ತದೆ.
ಏತನ್ಮಧ್ಯೆ ನಟ ಮುರುಳಿ ಅವರು ಮತ್ತೊಮ್ಮೆ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿ “ನಿಮ್ಮ ರಾಘಣ್ಣ ಸಖತ್ ಆಗಿ ಇದ್ದಾರೆ, ಅವರಿಗೆ ಏನು ಆಗಿಲ್ಲ.ಅವರು ಆರಾಮಾಗೆ ಇದ್ದಾರೆ,ಹೀಗಾಗಿ ಯಾರೂ ಅವರ ಬಗ್ಗೆ ಆತಂಕಪಡಬೇಡಿ,ಅಭಿಮಾನಿಗಳ ಆಶೀರ್ವಾದ ಇರೋ‌ತನಕ ಅವರಿಗೆ ಏನೂ ಆಗಲ್ಲ” ಎಂದು ಧೈರ್ಯ ಹೇಳಿದರು.

KTVKANNADA ಬೆಂಗಳೂರು

Add Comment