ಕಾಂಗ್ರೆಸ್ ನಾಯಕನ ಪುತ್ರಿಗೆ ಹೋಂ ಕ್ವಾರೆಂಟೈನ್ !

 

ಕರ್ನಾಟಕದ ಪ್ರಭಾವೀ ಕಾಂಗ್ರೆಸ್ ಮುಖಂಡರ ಪುತ್ರಿಯೊಬ್ಬರಿಗೆ ಕೊರೋನಾ ವೈರಸ್ ಅಂಟಿರುವ ಭೀತಿ ಎದುರಾಗಿದೆ. ಕಳೆದ 10 ದಿನಗಳ ಹಿಂದಷ್ಟೇ ಆ ನಾಯಕನ ಪುತ್ರಿ ವಿದೇಶದಿಂದ ಹಿಂದಿರುಗಿದ್ದರು.

ಇದೀಗ, ಆ ನಾಯಕರ ಮನೆ ಕಾಂಪೌಂಡ್‍ಗೆ ಸಾರ್ವಜನಿಕ ಎಚ್ಚರಿಕೆ ನೋಟಿಸ್ ಅಂಟಿಸಲಾಗಿದೆ. ಸದಾಶಿವನಗರದಲ್ಲಿರೋ ಆ ನಾಯಕರ ಕಾಂಪೌಂಡ್‍ಗೆ ಕೊರೋನಾ ಎಚ್ಚರಿಕೆ ನೋಟಿಸ್ ಅಂಟಿಸಲಾಗಿದ್ದು, ಮನೆ ಆಸುಪಾಸು ಸುತ್ತಾಡಬೇಡಿ ಎಂದು ಎಚ್ಚರಿಕೆ ಸಂದೇಶ ಕೊಡಲಾಗಿದೆ. ಅಧಿಕಾರಿಗಳು ಈ ನೋಟಿಸ್ ಅಂಟಿಸಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ, ಆ ನಾಯಕರ ಪುತ್ರಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಇನ್ನೂ ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಹೀಗಾಗಿ, ಮುಂದಿನ 14 ದಿನಗಳ ಕಾಲ ಮನೆ ಬಿಟ್ಟು ತೆರಳದಂತೆ ಅಧಿಕಾರಿಗಳು ಸೂಚನೆ ನೀಡದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ನಡೆದಿತ್ತು ಈ ಸಭೆಯಲ್ಲೂ ಆ ನಾಯಕ ಪಾಲ್ಗೊಂಡಿರಲಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ, ಉಳಿದ ನಾಯಕರೆಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿಯೇ ಸಭೆಯಲ್ಲಿ ಪಾಲ್ಗೊಂಡಿದ್ದರು.

Add Comment