ನನ್ನನ್ನು ಆಡಿಕೊಳ್ಳುವವರಿಗೆ ಈಗ ಉತ್ತರ ಕೊಡ್ತೇನೆ-ನಂದಕಿಶೋರ್

ನಾನು ಸ್ವಮೇಕ್ ಸಿನಿಮಾಗಳನ್ನು ನೀಡಿದ್ದರೂ ಸಹ, ಕೆಲವರು ನನ್ನನ್ನು ರಿಮೇಕ್ ನಿರ್ದೇಶಕ ಎಂದು ಆಡಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ನಂದಕಿಶೋರ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಿಲೀಸ್ ಆಗಿದ್ದು, ಇದೇ ಸಮಯದಲ್ಲಿ ಚಿತ್ರಮಂದಿರದತ್ತ ಭೇಟಿ ನೀಡಿದ್ದ ನಿರ್ದೇಶಕ ನಂದಕಿಶೋರ್ ಸುದ್ದಿಗಾರರ ಬಳಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.

ನಾನು ಇಲ್ಲಿಯವರೆಗೂ 7 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಇದರಲ್ಲಿ 5 ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದೇನೆ. ಅಧ್ಯಕ್ಷ, ರನ್ನ ಹೀಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದೇನೆ. ಆದರೂ ರೀಮೇಕ್ ಡೈಕ್ಟರ್, ಏನೂ ಬರಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. ನನ್ನ ಮೊದಲ ಸಿನಿಮಾನೇ ವಿಕ್ಟರಿ ಸ್ವಮೇಕ್ ಚಿತ್ರ. ಆದರೂ ಇಂದು ಒಂದು ಸಿನಿಮಾ ಮಾಡಿದವರಿಗೆ ನೀಡುವ ಗೌರವವನ್ನೂ ನಮಗೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಇಷ್ಟು ದಿನ ಯಾರೆಲ್ಲಾ ನನ್ನನ್ನು ಆಡಿಕೊಂಡರೋ, ಅವರಿಗೆಲ್ಲಾ ಈಗ ನನ್ನ ನಿರ್ದೇಶನದ ಪೊಗರು ಸಿನಿಮಾ ಉತ್ತರ ನೀಡುತ್ತದೆ ಎಂದು ಹೇಳಿದರು

Add Comment