ದೈನಂದಿನ ಜೀವನದಲ್ಲಿ ವ್ಯಾಯಾಮ, ಯೋಗ ಮೈಗೂಡಿಸಿಕೊಳ್ಳಲು ಸಚಿವ ಕೆ.ಗೋಪಾಲಯ್ಯ ಕರೆ

ಬೆಂಗಳೂರಿನ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡ್ ನ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಶುಕ್ತವಾರ ಬೆಳಿಗ್ಗೆ 5:30ಗಂಟೆಗೆ
ಶ್ರೀಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ಹಾಗೂ ನೆಮ್ಮದಿ ಯೋಗ ಶಾಲೆ(ರಿ)ವತಿಯಿಂದ “ಬೃಹತ್ ಸಾಮೂಹಿಕ 108 ಸೂರ್ಯ ನಮಸ್ಕಾರ ಯಜ್ಞ ” ಸೂರ್ಯಥಾನ್” ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಚಾಲನೆ ನೀಡಿದರು .
ನಂತರ ಮಾತನಾಡಿದ ಸಚಿವ ಕೆ.ಗೋಪಾಲಯ್ಯರವರು ಯೋಗದಿಂದ ಉತ್ತಮ ಸದೃಢ ದೇಹ, ದೈಹಿಕ, ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಮತ್ತು ಮನಸ್ಸು ಉಲ್ಲಾಸಿತ ಮನಸ್ಸು ಎರಡನ್ನೂ ಹತೋಟಿಯಲ್ಲಿ ಇಡಬಹುದು. ಮಹಾಮಾರಿ ಕರೋನ ಸೋಂಕು ತಗುಲಿ ದೇಶ ಹಾಗೂ ರಾಜ್ಯದ ಜನರು ಅಸ್ತವ್ಯಸ್ತಗೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ದೈನಂದಿನ ಜೀವನದಲ್ಲಿ ವ್ಯಾಯಾಮ, ಯೋಗ ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಸಚಿವ ಕೆ.ಗೋಪಾಲಯ್ಯ ಕರೆ ನೀಡಿದರು.
ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ
ಮೋರ್ಚಾ ಅಧ್ಯಕ್ಷರಾದ ನರೇಂದ್ರಬಾಬು,ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಹರೀಶ್, ಮಹಾಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಎನ್.ಜಯರಾಂ, ವೆಂಕಟೇಶಮೂರ್ತಿ, ಗಂಗಹನುಮಯ್ಯ,ಯೋಗ ಗುರು ಮುಕುಂದ ರಾವ್ ಸೇರಿದಂತೆ ಹಲವಾರು ಗಣ್ಯರು, ಯೋಗಪಟುಗಳು ಹಾಜರಿದ್ದರು.
KTVKANNADA ಬೆಂಗಳೂರು

Add Comment